ಹೊಸ ವರ್ಷದಲ್ಲಿ ನಿಮ್ಮನ್ನು ನೀವು ಬದಲಾಯಿಸಲು ಇಷ್ಟಪಡುವಿರಾ? ತಪ್ಪದೇ ಇದನ್ನು ಮಾಡಿ...New Year

New Year
Published on

New Year : ನೆನಪುಗಳನ್ನು ಮಾತ್ರ ಉಳಿಸಿ ನಮ್ಮನ್ನು ಬಿಟ್ಟು ಹೋಗಲು 2024ನೇ ವರ್ಷ ರೆಡಿಯಾಗಿದೆ. 2025ರ ಹೊಸ ವರ್ಷಕ್ಕೆ ಕಾಲಿಡಲು ಕ್ಷಣಗಣನೆ ಆರಂಭವಾಗಿದೆ. ಹಳೆಯ ಕ್ಯಾಲೆಂಡರ್‌ಗಳನ್ನು ಕಸದ ಬುಟ್ಟಿಗೆ ಎಸೆದು ಹೊಸ ಕ್ಯಾಲೆಂಡರ್‌ಗಳನ್ನು ಗೋಡೆಗೆ ಹಾಕಲು ಜನರು ಮುಂದಾಗಿದ್ದಾರೆ.

ಮುಂಬರುವ ಹೊಸ ವರ್ಷವು ಹೊಸ ಭರವಸೆಗಳು ಮತ್ತು ಹೊಸ ಆಕಾಂಕ್ಷೆಗಳನ್ನು ಹೊತ್ತು ತರುತ್ತದೆ ಎಂಬ ವಿಶ್ವಾಸ ಎಲ್ಲರಲ್ಲೂ ಇದೆ. ಹೊಸ ವರ್ಷ ಸಮೀಪಿಸುತ್ತಿದ್ದಂತೆ ಅನೇಕ ಜನರು ತಮ್ಮಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಬಯಸುತ್ತಾರೆ. ನೀವು ಅಂತಹ ಆಲೋಚನೆಗಳನ್ನು ಹೊಂದಿದ್ದರೆ, ಬದಲಾವಣೆಗಳನ್ನು ಮಾಡಲು ಏನು ಮಾಡಬೇಕೆಂಬುದನ್ನು ನೀವಿಲ್ಲಿ ತಿಳಿಯಬಹುದು.

ಅಂದಹಾಗೆ ಬದಲಾವಣೆ ಎಂಬುದು ಸುಲಭದ ಮಾತಲ್ಲ. ಬದಲಾವಣೆ ಮಾಡಿಕೊಳ್ಳುವುದು ತುಂಬಾನೇ ಕಷ್ಟ. ಏನಾದರೂ ಬದಲಾವಣೆ ಮಾಡಿಕೊಳ್ಳಬೇಕಾದರೆ ಸಾಕಷ್ಟು ಪ್ರಯತ್ನ ಮಾಡಬೇಕಾಗುತ್ತದೆ. ಅಲ್ಲದೆ, ಬದಲಾವಣೆ ಹಾದಿಯಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಎಲ್ಲವನ್ನು ಸಹಿಸಿಕೊಂಡರೆ ಮಾತ್ರ ನಿಮ್ಮಲ್ಲಿ ಬದಲಾವಣೆ ಮೂಡುತ್ತದೆ. ಏನೆಲ್ಲ ಬದಲಾವಣೆ ಮಾಡಿಕೊಳ್ಳಬಹುದು ಎಂಬುದನ್ನು ನಾವೀಗ ತಿಳಿಯೋಣ.

* ನಿಮ್ಮಲ್ಲಿ ಇನ್ನೂ ವ್ಯಾಯಾಮ ಮಾಡುವ ಅಭ್ಯಾಸ ಇರದಿದ್ದರೆ, ಈಗಲೇ ಪ್ರಾರಂಭಿಸಿ. ವ್ಯಾಯಾಮವೂ ವ್ಯಕ್ತಿಯಲ್ಲಿ ದೈಹಿಕ ಬದಲಾವಣೆ ಮಾತ್ರವಲ್ಲದೆ, ಹೊಸ ಉತ್ಸಾಹವನ್ನು ಸಹ ತುಂಬುತ್ತದೆ.

* ನಿಮ್ಮ ಗುರಿಗಳು ಚಿಕ್ಕದಾಗಿರಬೇಕು ಮತ್ತು ಸಾಧಿಸುವಂತಿರಬೇಕು. ನೀವು ಅವುಗಳನ್ನು ಸಾಧಿಸಿದಾಗ ನೀವೇ ಪ್ರತಿಫಲವನ್ನು ಪಡೆಯುತ್ತೀರಿ. ಇದು ನಿಮ್ಮ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.

* ನಿಮ್ಮಲ್ಲಿ ಯಾವುದೇ ಬದಲಾವಣೆಯನ್ನು ಮಾಡಲು ಬಯಸಿದರೆ ನೀವು ಮೊದಲು ದೈಹಿಕವಾಗಿ ಆರೋಗ್ಯಕರವಾಗಿರಬೇಕು. ಉತ್ತಮ ಆರೋಗ್ಯಕ್ಕೆ ಪ್ರೋಟೀನ್ ಅತ್ಯಗತ್ಯ. ಪ್ರೋಟೀನ್ ಹೊಂದಿರುವ ಆಹಾರವನ್ನು ಸೇವಿಸಿ.

* ನಿಮ್ಮ ಫೋನ್ ಮತ್ತು ಲ್ಯಾಪ್‌ಟಾಪ್ ಬಳಕೆಯನ್ನು ಕಡಿಮೆ ಮಾಡಿ. ಅಗತ್ಯವಿದ್ದಾಗ ಮಾತ್ರ ಬಳಸಿ. ಇಲ್ಲದಿದ್ದರೆ, ಅದನ್ನು ಬಳಸಬೇಡಿ. ಸ್ಕ್ರೋಲಿಂಗ್ ಮಾಡುವ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬೇಡಿ.

* ನಾವು ನೋಡುವುದನ್ನೇ ಮಾಡುತ್ತೇವೆ. ಆದ್ದರಿಂದ ನಿಮ್ಮ ಗುರಿಗಳನ್ನು ಸಾಧಿಸಲು ನಿಮ್ಮನ್ನು ಪ್ರೇರೇಪಿಸುವ ವಿಷಯಗಳನ್ನು ಮಾತ್ರ ನೋಡಿ ಮತ್ತು ಗುರಿ ಸಾಧಿಸುವ ಕೆಲಸಗಳನ್ನು ಮಾತ್ರ ಮಾಡಿ. ನೀವು ಖಂಡಿತವಾಗಿಯೂ ನಿಮ್ಮಲ್ಲಿ ಬದಲಾವಣೆಯನ್ನು ಕಾಣುವಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net