

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜನ್ಮ ರಾಶಿ ಮತ್ತು ಜಾತಕವು ಆತನ ಭವಿಷ್ಯದ ಜೀವನ, ಪ್ರೇಮ ಜೀವನ, ಆರ್ಥಿಕ ಪರಿಸ್ಥಿತಿ, ವಿಶೇಷ ವ್ಯಕ್ತಿತ್ವಗಳು ಮತ್ತು ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಹಿಂದು ಧರ್ಮದಲ್ಲಿ ಜ್ಯೋತಿಷ್ಯಕ್ಕೆ ತುಂಬಾ ಮಹತ್ವವಿದೆ. ಏನೇ ಶುಭ ಕಾರ್ಯ ನಡೆಯಬೇಕೆಂದರೂ ಮೊದಲು ಜ್ಯೋತಿಷ್ಯದ ಮೊರೆ ಹೋಗುತ್ತಾರೆ.
ನಮ್ಮ ಗ್ರಹಗತಿ ಆಧಾರದ ಮೇಲೆ ನಮ್ಮ ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯವಾಗಿದೆ. ಒಬ್ಬ ವ್ಯಕ್ತಿಯ ರಾಶಿಚಕ್ರ ಮತ್ತು ನಕ್ಷತ್ರ ಚಿಹ್ನೆಯು ಆತನ ಭವಿಷ್ಯದ ಜೀವನ, ಆರ್ಥಿಕ ಪರಿಸ್ಥಿತಿ, ವ್ಯಕ್ತಿತ್ವ, ಪ್ರೇಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಪ್ರತಿಯೊಬ್ಬ ವ್ಯಕ್ತಿಯ ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳ ಮೇಲೆಯೂ ಪ್ರಭಾವ ಬೀರುತ್ತದೆ. ಹೀಗಾಗಿ, ಜ್ಯೋತಿಷ್ಯ ಶಾಸ್ತ್ರ ಪ್ರಮುಖವಾಗಿದೆ.
ಅಂದಹಾಗೆ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಮಹಿಳೆಯರು ಸ್ವಾಭಾವಿಕವಾಗಿಯೇ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವ ಸಾಮರ್ಥ್ಯವನ್ನು ಹೊಂದಿರುತ್ತಾರಂತೆ. ಈ ರಾಶಿಯವರು ಹೇಳುವ ಸುಳ್ಳುಗಳನ್ನು ಯಾರೂ ಪತ್ತೆಹಚ್ಚಲು ಸಾಧ್ಯವಿಲ್ಲವಂತೆ. ಹಾಗಾದರೆ, ಯಾವ ರಾಶಿಯವರು ಭಾರಿ ಸುಳ್ಳು ಹೇಳುತ್ತಾರೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ತುಲಾ ರಾಶಿಯಲ್ಲಿ ಜನಿಸಿದ ಮಹಿಳೆಯರು ತುಂಬಾ ಚೆನ್ನಾಗಿ ಸುಳ್ಳು ಹೇಳುವ ಕಲೆಗಾರರು. ಅವರ ಸುಳ್ಳುಗಳು ಹೆಚ್ಚಾಗಿ ಸತ್ಯದ ತಲೆಯ ಮೇಲೆ ಹೊಡೆದಂತೆ ಇರುವುದರಿಂದ ಯಾರು ಕೂಡ ಅವರನ್ನು ಪತ್ತೆಹಚ್ಚಲು ಸಾಧ್ಯವಿಲ್ಲ. ಅವರು ಇತರರೊಂದಿಗೆ ಸಂಪರ್ಕ ಸಾಧಿಸುವಲ್ಲಿ ನಿಪುಣರು. ಹಾಗಾಗಿ, ತಮ್ಮನ್ನು ತಾವು ಆಕರ್ಷಕವಾಗಿ ಇರಿಸಿಕೊಳ್ಳಲು ಬಯಸುವುದರಿಂದ ಆಗಾಗ ಸುಳ್ಳು ಹೇಳಬೇಕಾಗಬಹುದು. ಅವರು ಶಾಂತಿಪ್ರಿಯ ಜನರು, ಅವರು ಯಾವಾಗಲೂ ನೋವಿನ ಭಾವನೆಗಳು, ನಿರಾಶೆ ಅಥವಾ ಮುಜುಗರವನ್ನು ತಪ್ಪಿಸಲು ಸುಳ್ಳು ಹೇಳಲು ಸಿದ್ಧರಿರುತ್ತಾರೆ.
ವೃಶ್ಚಿಕ ರಾಶಿಯಲ್ಲಿ ಜನಿಸಿದ ಮಹಿಳೆಯರು ನಿಗೂಢವಾಗಿರುವುದಕ್ಕೆ ಒಂದು ಕಾರಣವಿದೆ. ಇದೆಲ್ಲವೂ ಅವರ ಆಳುವ ಗ್ರಹವನ್ನು ಅವಲಂಬಿಸಿರುತ್ತದೆ. ಬದಲಾವಣೆಯ ಗ್ರಹವಾದ ಪ್ಲುಟೊ ಆಳ್ವಿಕೆ ನಡೆಸುವ ಅವರು ರಹಸ್ಯಗಳನ್ನು ಇಟ್ಟುಕೊಳ್ಳುವುದರಲ್ಲಿ ನಿಪುಣರು. ರಹಸ್ಯಗಳನ್ನು ಇಟ್ಟುಕೊಳ್ಳಲು ಅವರು ಬಹಳಷ್ಟು ಮಾತನಾಡುತ್ತಾರೆ. ಆದರೆ, ಅವರ ಸುಳ್ಳುಗಳು ಹೆಚ್ಚಾಗಿ ಒಳ್ಳೆಯದಕ್ಕಾಗಿಯೇ ಇರುತ್ತವೆ ಮತ್ತು ಅವರು ಯಾವುದನ್ನೂ ಅನುಮಾನಿಸುವುದಿಲ್ಲ. ಅವರ ಈ ಗುಣದಿಂದಾಗಿ, ಅವರಿಗೆ ಸುಳ್ಳು ಹೇಳುವುದು ಸುಲಭ.
ಮಕರ ರಾಶಿಯಲ್ಲಿ ಜನಿಸಿದ ಮಹಿಳೆಯರು ಒಂದು ವಿಷಯದ ಬಗ್ಗೆ ವಿಭಿನ್ನ ಕೋನಗಳಿಂದ ಯೋಚಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರನ್ನು ಸಂಘಟನೆ ಮತ್ತು ನಿಯಂತ್ರಣದ ಗ್ರಹವಾದ ಶನಿ ಆಳುತ್ತಾನೆ. ಆದ್ದರಿಂದ, ಮಕರ ರಾಶಿಯವರು ಸಂಘಟಿತ ಸುಳ್ಳುಗಳನ್ನು ಬಹಳ ನಿಖರವಾಗಿ ಹೇಳುವಲ್ಲಿ ನಿಪುಣರು. ಅವರ ಪ್ರತಿಯೊಂದು ಸುಳ್ಳುಗಳು ಒಂದು ನಿರ್ದಿಷ್ಟ ಉದ್ದೇಶವನ್ನು ಪೂರೈಸುತ್ತವೆ ಮತ್ತು ಅವರು ಸ್ಪಷ್ಟವಾಗಿ ಸುಳ್ಳು ಹೇಳುತ್ತಾರೆ, ಅವರು ಒಂದು ಮಾತನ್ನು ಹೇಳುವ ಮೊದಲೇ ಅಪಾಯಗಳು, ಪ್ರತಿಫಲಗಳು ಮತ್ತು ಸಂಭವನೀಯ ಪರಿಣಾಮಗಳ ಬಗ್ಗೆ ಮೊದಲೇ ಯೋಚಿಸಿರುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.