ಈ ಮೂರು ರಾಶಿಯ ಮಹಿಳೆಯರು ನರಿ ಬುದ್ಧಿಯನ್ನು ಹೊಂದಿರುತ್ತಾರಂತೆ! ನಿಮ್ಮ ರಾಶಿಯೂ ಇದೇನಾ? Zodiac Signs

Zodiac Signs
Published on

Zodiac Signs : ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ ಎಂಬುದು ಆತನ ಭವಿಷ್ಯದ ಜೀವನ, ಆರ್ಥಿಕ ಪರಿಸ್ಥಿತಿ, ವೈವಾಹಿಕ ಜೀವನ, ವ್ಯಕ್ತಿತ್ವದ ಲಕ್ಷಣಗಳು ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.

ಅದೇ ರೀತಿ ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಮಹಿಳೆಯರು ಸ್ವಾಭಾವಿಕವಾಗಿ ನರಿ ಬುದ್ಧಿಯನ್ನು ಹೊಂದಿರುತ್ತಾರಂತೆ. ಅಂದರೆ, ಕುತಂತ್ರದ ಮೂಲಕ ವಿಷಯಗಳನ್ನು ಸಾಧಿಸುವ ಕೌಶಲ್ಯವನ್ನು ಹೊಂದಿರುತ್ತಾರೆ.

ನರಿಗಳನ್ನು ತುಂಬಾ ಬುದ್ಧಿವಂತ ಪ್ರಾಣಿ ಎಂದು ಕರೆಯುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ ಅವುಗಳನ್ನು ಕುತಂತ್ರಿಗಳು ಎಂದು ಕರೆಯುತ್ತಾರೆ. ಏಕೆಂದರೆ, ಕಾಡಿನಲ್ಲಿ ವಾಸಿಸುವ ಎಲ್ಲಾ ಪ್ರಾಣಿಗಳಲ್ಲಿ ನರಿ ಅತ್ಯಂತ ಬುದ್ಧಿವಂತ ಪ್ರಾಣಿ. ತನ್ನ ಬುದ್ಧಿಶಕ್ತಿಯಿಂದ, ಅದು ಯಾವುದೇ ಅಪಾಯಕ್ಕೆ ಸಿಲುಕದೇ, ಹೆಚ್ಚು ಶ್ರಮವಿಲ್ಲದೆ ಮತ್ತು ಇತರ ಪ್ರಾಣಿಗಳ ದಾಳಿಗೆ ಒಳಗಾಗದೆ ಆರಾಮಾಗಿ ಬದುಕಬಲ್ಲದು. ಯಾವುದನ್ನೇ ಆಗಲಿ ನರಿ ಬೇಗನೆ ಕಲಿಯುತ್ತದೆ. ಅದೇ, ರೀತಿ ಕೆಲವು ರಾಶಿಯಲ್ಲಿ ಜನಿಸಿದವರು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಗುತ್ತಾರೆ.

ಹಾಗಾದರೆ, ಯಾವ ಸ್ತ್ರೀ ರಾಶಿಚಕ್ರ ಚಿಹ್ನೆಗಳು ತಮ್ಮ ಗುರಿಗಳನ್ನು ಸಾಧಿಸಲು ಕುತಂತ್ರದಿಂದ ವರ್ತಿಸುತ್ತವೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಮಹಿಳೆಯರು ತಮ್ಮ ನಿಗೂಢ ಮತ್ತು ರಹಸ್ಯ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ಮುಂದಿನ ನಡೆಯನ್ನು ಯಾರೂ ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅವರ ಈ ಗುಣಗಳು ಹೆಚ್ಚಾಗಿ ಜನರು ಅವರನ್ನು ತಪ್ಪಾಗಿ ಅರ್ಥೈಸಿಕೊಳ್ಳುವಂತೆ ಮಾಡುತ್ತದೆ. ಅವರು ತಮ್ಮ ನಿಜವಾದ ಉದ್ದೇಶಗಳು ಮತ್ತು ಭಾವನೆಗಳನ್ನು ನಗುವಿನ ಹಿಂದೆ ಮರೆಮಾಡುವಲ್ಲಿ ನಿಪುಣರು ಮತ್ತು ಕುತಂತ್ರದ ಮೂಲಕ ಕೆಲಸಗಳನ್ನು ಮಾಡುವಲ್ಲಿ ನಿಪುಣರು.

ಮಿಥುನ ರಾಶಿ

ಮಿಥುನ ರಾಶಿಯಲ್ಲಿ ಜನಿಸಿದ ಮಹಿಳೆಯರು ತಮ್ಮ ದ್ವಂದ್ವ ವ್ಯಕ್ತಿತ್ವಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಎಂದಿಗೂ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ಹೇಳುವುದಿಲ್ಲ. ಈ ಗುಣಗಳು ಅವರನ್ನು ಅನಿರೀಕ್ಷಿತ ಮತ್ತು ಕುತಂತ್ರಿಯನ್ನಾಗಿ ಮಾಡುತ್ತದೆ. ಅವರು ಅತ್ಯುತ್ತಮ ಸಂವಹನಕಾರರು ಮತ್ತು ಇತರರನ್ನು ತಮಗೆ ಬೇಕಾದುದನ್ನು ಮಾಡಲು ಸುಲಭವಾಗಿ ಮನವೊಲಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇದು ಇತರರಿಗೆ ಕುತಂತ್ರವೆಂದು ತೋರುತ್ತದೆ.

ಮೀನ ರಾಶಿ

ಮೀನ ರಾಶಿಯಲ್ಲಿ ಜನಿಸಿದ ಮಹಿಳೆಯರು ತುಂಬಾ ಬುದ್ಧಿವಂತರು ಮತ್ತು ಏನನ್ನೂ ಹೇಳದೆಯೇ ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರು ಪ್ರಬಲವಾದ ಅಂತಃಪ್ರಜ್ಞೆಯನ್ನು ಹೊಂದಿರುತ್ತಾರೆ ಮತ್ತು ಇತರರು ತಪ್ಪಿಸಿಕೊಳ್ಳಬಹುದಾದ ಸಣ್ಣ ವಿಷಯಗಳನ್ನು ಸಹ ಸುಲಭವಾಗಿ ಗ್ರಹಿಸುತ್ತಾರೆ. ಮೀನ ರಾಶಿಯ ಮಹಿಳೆಯರು ತುಂಬಾ ಸೃಜನಶೀಲರು ಮತ್ತು ತಮ್ಮ ಮನಸ್ಸನ್ನು ಸಾಧಿಸಲು ಯಾವುದೇ ಹಂತಕ್ಕೆ ಹೋಗುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರು ತಮ್ಮ ಕುತಂತ್ರದ ಸ್ವಭಾವದಿಂದ ಏನು ಬೇಕಾದರೂ ಸಾಧಿಸಬಹುದು.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net