

Poorest Chief Minister:ಭಾರತದಲ್ಲಿ ಸಾಮಾನ್ಯವಾಗಿ ರಾಜಕಾರಣಿಗಳು ಎಂದಾಕ್ಷಣ ಅವರಿಗೇನು ಕಮ್ಮಿ ಎಂಬ ಮನೋಭಾವ ಬರುತ್ತದೆ. ಆದರೆ, ರಾಜಕಾರಣಿಗಳಲ್ಲಿ ಕೂಡ ಅರ್ಥಿಕತೆಗೆ ಸಂಬಂಧಿಸಿದಂತೆ ಹೆಚ್ಚು ಕಡಿಮೆ ಸ್ಥಾನದಲ್ಲಿರುತ್ತಾರೆ ಎಂದು ಎಂದಾದರೂ ಯೋಚಿಸಿದ್ದೀರಾ?. ಹೌದು ನಮ್ಮ ದೇಶದಲ್ಲಿ ಯಾರು ಬಡ ಸಿಎಂ, ಶ್ರೀಮಂತ ಸಿಎಂ ಯಾರು ಎಂಬುವುದನದ್ನು ತಿಳಿಯೋಣ.
ನಮ್ಮ ದೇಶದಲ್ಲಿ ಕಾನೂನಿನ ಪ್ರಕಾರ, ಚುನಾವಣೆಗೂ ಮುನ್ನ ಅಭ್ಯರ್ಥಿಗಳು ತಮ್ಮ ಅದಾಯದ ಮೂಲ ಮತ್ತು ಆಸ್ತಿಯ ವಿವರವನ್ನು(ಮಾಹಿತಿ) ಚುನಾವಣಾಧಿಕಾರಿಗೆ ನೀಡಬೇಕಾಗುತ್ತದೆ. ಇಷ್ಟೇ ಅಲ್ಲ, ಯಾವುದೇ ನಾಯಕರು ತಮ್ಮ ಆಸ್ತಿಯ ಸರಿಯಾದ ವಿವರಗಳನ್ನು ನೀಡದಿದ್ದರೆ ಅಥವಾ ಆದಾಯ ತೆರಿಗೆ ರಿಟರ್ನ್ ಮತ್ತು ಚುನಾವಣಾ ಅಫಿಡವಿಟ್‌ನಲ್ಲಿ ನೀಡಲಾದ ಮಾಹಿತಿಯಲ್ಲಿ ವ್ಯತ್ಯಾಸವಿದ್ದರೆ, ಅಂತಹ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬಹುದು. ಅಂತಹ ಪರಿಸ್ಥಿತಿಯಲ್ಲಿ, ಆದಾಯ ತೆರಿಗೆ ಕಾಯ್ದೆ 1961, ಬೇನಾಮಿ ಆಸ್ತಿ ವಹಿವಾಟು ಕಾಯ್ದೆ 1988 ಮತ್ತು 2015 ರ ಕಪ್ಪು ಹಣಕ್ಕೆ ಸಂಬಂಧಿಸಿದ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದು.
ಅಸೋಷಿಯೇಷನ್ ಆಫ್ ಡೆಮಾಕ್ರಟಕ್ ರಿಫಾರ್ಮಸ್ ವರದಿಯ ಪ್ರಕಾರ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭಾರತ ಶ್ರೀಮಂತ್ರ ಸಿಎಂ ಎಂದು ವರದಿ ಮಾಡಿದೆ. ಅಲ್ಲದೆ, ಇವರಿಗೆ ಸಂಬಂಧಿಸಿದ ಒಟ್ಟು ಆಸ್ತಿ 931 ಕೋಟಿ ರೂ. ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಇವರ ಬಳಿಕ ಅರುಣಾಚಲ ಸಿಎಂ ಪ್ರೆಮಾ ಖಂಡ(332 ಕೋಟಿ ರೂ.) ಕರ್ನಾಟಕ ಸಿಎಂ 51 ಕೋಟಿ ರೂ. ನಿವ್ವಳ ಆಸ್ತಿ ಹೊಂದುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.
ಅಸೋಷಿಯೇಷನ್ ಆಫ್ ಡೆಮಾಕ್ರಟಕ್ ರಿಫಾರ್ಮಸ್ ವರದಿಯ ಪ್ರಕಾರ, ಬಡ ಸಿಎಂ(ಕಡಿಮೆ ಆಸ್ತಿ ಹೊಂದಿದವರು) ಎಂದು ಗುರುತಿಸಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಭಾರತದ ಅತ್ಯಂತ ಕಡಿಮೆ ಆಸ್ತಿ ಹೊಂದುವ ಮೂಲಕ ಬಡ ಸಿಎಂ ಎಂದ ಗುರುತಿಸಲಾಗಿದೆ. ಇನ್ನು ವರದಿಯ ಪ್ರಕಾರ, 15.32 ಲಕ್ಷ ರೂ.ಗಳನ್ನು ಮಾತ್ರ ಹೊಂದಿದ್ದಾರೆ.(ಏಜೆನ್ಸೀಸ್)