ವಿಶ್ವ ದಾಖಲೆ ಬರೆದ Run​ ಮಷಿನ್​; 14 ಸಾವಿರ ರನ್​ ಬಾರಿಸಿದ ಜಗತ್ತಿನ ಮೂರನೇ ಬ್ಯಾಟರ್​​ Virat Kohli

dk - 2025-02-23T204412.937
Published on

Virat Kohli:ಚಾಂಪಿಯನ್ಸ್ ಟ್ರೋಫಿ 2025ರ ದುಬೈನಲ್ಲಿ ಭಾನುವಾರ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್​ ಇಂಡಿಯಾದ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ, ಕ್ರಿಕೆಟ್​ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ವಿಶಿಷ್ಟ ದಾಖಲೆಯನ್ನು ಮುರಿದರು.

ವಿರಾಟ್, ಕೇವಲ 287 ಇನ್ನಿಂಗ್ಸ್‌ಗಳಲ್ಲಿ 14,000ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 14,000 ರನ್ ಗಳಿಸಿದ ಬ್ಯಾಟರ್​ ಎನಿಸಿಕೊಂಡರು. ಈ ಮೂಲಕ 14 ಸಾವಿರ ರನ್​ ಗಳಿಸಿದ ಜಗತ್ತಿನ ಮೂರನೇ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇನ್ನು ಇದಕ್ಕೂ ಮೊದಲು, ಭಾರತದ ದಂತಕಥೆ ಸಚಿನ್ 350 ಇನ್ನಿಂಗ್ಸ್‌ಗಳಲ್ಲಿ 14,000 ರನ್ ಗಳಿಸುವ ಮೂಲಕ ಈ ದಾಖಲೆಯನ್ನು ಹೊಂದಿದ್ದರು. ಅಲ್ಲದೆ, ಶ್ರೀಲಂಕಾದ ಕುಮಾರ್ ಸಂಗಕ್ಕಾರ 14,000 ಕ್ಕೂ ಹೆಚ್ಚು ಏಕದಿನ ರನ್ ಗಳಿಸಿದ ಏಕೈಕ ಬ್ಯಾಟರ್​ ಆಗಿದ್ದು, ಅವರು 378 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.​ ಇದೀಗ ಈ ಪಟ್ಟಿಯಲ್ಲಿ ರನ್​ ಮಷಿನ್​ ವಿರಾಟ್​ ಸೇರ್ಪಡೆಗೊಂಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net