ಬ್ರೇಕ್​ ಇಲ್ಲದೆ ನೀರಿನಲ್ಲಿ ಚಲಿಸುವ ಬೃಹತ್​ ಹಡಗುಗಳನ್ನು ಯಾವ ತಂತ್ರಜ್ಞಾನ ಬಳಸಿ ನಿಲ್ಲಿಸುತ್ತಾರೆ ಗೊತ್ತೇ? | Technology

dk (90) (1)
Published on

Technology:ರಸ್ತೆಯಲ್ಲಿನ ವಾಹನಗಳನ್ನು ನಿಲ್ಲಿಸಲು ಬ್ರೇಕ್ ಹಾಕುವುದು ಬಹಳ ಮುಖ್ಯ. ಬ್ರೇಕ್ ಇಲ್ಲದೆ ಯಾವುದೇ ವಾಹನ ನಿಲ್ಲಲು ಸಾಧ್ಯವಿಲ್ಲ. ಹೌದಲ್ವ, ಹಾಗಾದರೆ ಬ್ರೇಕ್ ಇಲ್ಲದೆ ಹಡಗುಗಳು ನೀರಿನಲ್ಲಿ ಹೇಗೆ ನಿಲ್ಲುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಯಾವ ತಂತ್ರಜ್ಞಾನ ಆಧಾರದ ಮೇಲೆ ಶಿಪ್​ ಕೆಲಸ ಮಾಡುತ್ತದೆ ಎಂಬುವುದನ್ನು ತಿಳಿಯೋಣ ಬನ್ನಿ..

ಸಾಮಾನ್ಯವಾಗಿ ಎಲ್ಲಾ ತರಹದ ವಾಹನಗಳಿಗೆ ಬ್ರೇಕ್​(ನಿಯಂತ್ರಣ) ಇದ್ದೇ ಇರುತ್ತದೆ. ಅದೆ ರೀತಿ ನೀರಿನಲ್ಲಿ ಸಂಚರಿಸುವ ಸಣ್ಣ ಶಿಪ್​ಗಳಿಂದ ಬೃಹತ್​ ಗಾತ್ರದ ಹಡಗುಗಳಿಗೆ ಬ್ರೇಕ್​​ ಯಾವ ರೀತಿ ಇರುತ್ತೆ. ಅಲ್ಲದೆ ಅದನ್ನು ಯಾವ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ ಗೊತ್ತೇ?.

ರಸ್ತೆಗಳಲ್ಲಿ ಅಪಘಾತದ ಮುನ್ನೆಚ್ಚರಿಕೆ ವಹಿಸಿ ನಮ್ಮ ವಾಹನಗಳಿಗೆ ಹಠಾತ್​ ಬ್ರೇಕ್ ಹಾಕುತ್ತೇವೆ. ಇದರಿಂದ ವಹಿಕಲ್​​ ತಕ್ಷಣಕ್ಕೆ ನಿಲ್ಲುತ್ತೆ. ಆದರೆ, ಹಡಗುಗಳ ವಿಷಯದಲ್ಲಿ ಇದು ಸಂಭವಿಸುವುದಿಲ್ಲ. ಅಲ್ಲದೆ, ನೀರಿನ ಮೇಲೆ ಅಂತಹ ಬೃಹತ್​ ಶಿಪ್​ಗಳನ್ನು ಏಕಾಏಕಿ ನಿಲ್ಲಿಸಲಾಗುವುದಿಲ್ಲ. ಇದಕ್ಕೆ ಕಾರಣ ರಸ್ತೆಯಲ್ಲಿ ವಾಹನಗಳು ಏಕಾಏಕಿ ನಿಲ್ಲಲ್ಲು ಘರ್ಷಣೆ(Collision). ರಸ್ತೆಯಲ್ಲಿ ವಾಹನದ ಟೈರ್​ಗಳು ಉಜ್ಜುವಿಕೆಯಿಂದ ತಕ್ಷಣಕ್ಕೆ ನಿಲ್ಲುತ್ತವೆ. ಇದು ವಿಮಾನಗಳು ವಿಷಯದಲ್ಲೂ ಅನ್ವಹಿಸುತ್ತದೆ. ಆದರೆ, ನೀರಿನಲ್ಲಿ ಉಜ್ಜುವಿಕೆ(ಘರ್ಷಣೆ) ಕಾರ್ಯ ನಿರ್ವಹಿಸುವುದಿಲ್ಲ. ಹೀಗಾಗಿ, ಇದಕ್ಕೆ ವಾಹನಗಳಂತೆ ಸಾಮಾನ್ಯವಾಗಿ ಬ್ರೇಕ್​ ಇರುವುದಿಲ್ಲ.

ಹಡಗು ನಿಲ್ಲಿಸಲು ಮೂರು ವಿಧಾನ ಬಳಕೆ

1.ಆಂಕರ್​ ಬಳಕೆ: ಹಡಗನ್ನು ನಿಲ್ಲಿಸಲು ಆಂಕರ್​ ಅನ್ನು ಬಳಸಲಾಗುತ್ತದೆ. ಇದನ್ನೂ ನೀರಿನ ತಳದಲ್ಲಿ ನೇರವಾಗಿ ಬಿಡುತ್ತಾರೆ. ಇದರಿಂದ ತೂಕ ಅಧಿಕವಾಗಿ ನೀರಿನಲ್ಲಿ ವೇಗದಲ್ಲಿ ಸಾಗುವ ಹಡಗು ನಿಧಾನವಾಗಿ ಮುಂದೆ ಸಾಗಿ ನಿಲ್ಲುತ್ತದೆ.

2.ರಿವರ್ಸ್​ ಗೇರ್​: ಹಡಗನ್ನು ನಿಲ್ಲಿಸಲು ಮತ್ತೊಂದು ಪರಿಣಾಮಕಾರಿ ವಿಧಾನವೆಂದರೆ ರಿವರ್ಸ್​ ಗೇರ್​ ಹಾಕುಬವುದು. ಇದರಿಂದ ವೇಗದ ಚಲನೆ ನಿಧಾನವಾಗಿ ನಿಲ್ಲುತ್ತದೆ.

3.ಗಾಳಿಯ ವಿರುದ್ಧ ದಿಕ್ಕಿನಲ್ಲಿ ನಿಲ್ಲಿಸುವುದು: ಮತ್ತೊಂದು ವಿಧಾನವೆಂದರೆ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಡಗನ್ನು ತಿರುಗಿಸಿ ನಿಲ್ಲಿಸುವ ವಿಧಾನ ಬಳಸುತ್ತಾರೆ. ಇದು ಹಳೆಯ ವಿಧಾನ. ಇದಲ್ಲದೇ ಇಂದಿನ ಅತ್ಯಧುನಿಕ ಯುಗದಲ್ಲಿ ಇನ್ನಿತರ ವಿಧಾನಗಳನ್ನು ಬಳಕೆ ಮಾಡುತ್ತಾರೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net