

Lovers Day: ಇದೇ ಫೆ.14ರಂದು ಪ್ರೇಮಿಗಳ ದಿನ ಆಚರಣೆ ಮಾಡಲಾಗುತ್ತದೆ. ಅಲ್ಲದೆ, ಹೊಸ ಪ್ರೀತಿಯನ್ನು ಹಂಚಲು ಯುವಕ-ಯುವತಿಯರು ಈ ದಿನಕ್ಕೆ ಕಾತುರದಿಂದ ಕಾಯುತ್ತಿರುತ್ತಾರೆ. ಇದೀಗ ಫೆ.14 ಆರಂಭಕ್ಕೂ ಮುನ್ನ 7 ದಿನಗಳ ಕಾಲ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಪ್ರತಿ ದಿನ ವಿಶೇಷ ದಿನ ಆಚರಣೆಯನ್ನು ಮಾಡಲಾಗುತ್ತದೆ.
ಹೌದು, ಅಂತಹ ವಿಶೇಷಗ ದಿನಗಳ ಬಗ್ಗೆ ತಿಳಿಯುತ್ತಾ, ತಮಗೆ ಪ್ರೀತಿ ಪಾತ್ರರಾದವರನ್ನು ಮೆಚ್ಚಿಸಲು ಮತ್ತು ಆಚ್ಚರಿಗೊಳಿಸಲು ಹಾಗೂ ಅವರನ್ನು ಸಂತೋಷವಾಗಿಡಲು ಏನೆಲ್ಲಾ ಮಾಡಬೇಕು ಎಂಬುವುದನ್ನು ತಿಳಿಯೋಣ..
ಇಟಾಲಿಯನ್ ಇತಿಹಾಸಕಾರ ಜಾಕೋಬಸ್ ಡಿ ವೊರಜಿನ್ ಅವರ 'ಗೋಲ್ಡನ್ ಲೆಜೆಂಡ್: ಲೈವ್ಸ್ ಆಫ್ ದಿ ಸೇಂಟ್ಸ್' ಪುಸ್ತಕದ ಪ್ರಕಾರ, ಪ್ರೇಮಿಗಳ ದಿನ(Lovers Day) ಕ್ರಿ.ಶ. 269 ರಲ್ಲಿ ರೋಮನ್ ರಾಜ ಕ್ಲಾಡಿಯಸ್ ಕಾಲದಲ್ಲಿ ಪ್ರಾರಂಭವಾಯಿತು ಎಂದು ಹೇಳಲಾಗಿದೆ.
ಆ ಕಾಲದಲ್ಲಿ ರೋಮ್‌ನಲ್ಲಿ ಸಂತ ವ್ಯಾಲೆಂಟೈನ್ ಎಂಬ ಪಾದ್ರಿ ಇದ್ದನೆಂದು ಹೇಳಲಾಗುತ್ತದೆ. ಅವರು ಜಗತ್ತಿನಲ್ಲಿ ಪ್ರೀತಿಯನ್ನು ಉತ್ತೇಜಿಸುವುದರಲ್ಲಿ ನಂಬಿಕೆ ಇಟ್ಟಿದ್ದರು. ಆದರೆ ರೋಮ್‌ನ ರಾಜ ಕ್ಲಾಡಿಯಸ್ ಪ್ರೀತಿ ಮತ್ತು ಮದುವೆಯನ್ನು ಕಟ್ಟುನಿಟ್ಟಾಗಿ ವಿರೋಧಿಸುತ್ತಿದ್ದನು.
ರಾಜನ ವಿರೋಧದ ಹೊರತಾಗಿಯೂ, ಸಂತ ವ್ಯಾಲೆಂಟೈನ್ ರೋಮ್ ಜನರನ್ನು ಪ್ರೀತಿ ಮತ್ತು ವಿವಾಹಕ್ಕೆ ಪ್ರೇರೇಪಿಸಿದನು. ಇದರಿಂದ ಕೋಪಗೊಂಡ ರಾಜ ಫೆ.14 ರಂದು ಸಂತ ವ್ಯಾಲೆಂಟೈನ್‌ಗೆ ಮರಣದಂಡನೆ ವಿಧಿಸಿದನು. ಇದಾದ ನಂತರ, ಈ ದಿನವನ್ನು ರೋಮ್‌ನಲ್ಲಿ ಪ್ರತಿ ವರ್ಷ 'ಪ್ರೇಮಿಗಳ ದಿನ' ಎಂದು ಆಚರಿಸಲು ಪ್ರಾರಂಭಿಸಿತು. ಕ್ರಮೇಣ ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲು ಪ್ರಾರಂಭಿಸಿತು ಎಂದು ಹೇಳಲಾಗಿದೆ.
ಪ್ರೇಮಿಗಳ ವಾರದಲ್ಲಿ, ಪ್ರತಿ ದಿನವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ದಿನಗಳನ್ನು ಆಚರಿಸುವ ಉದ್ದೇಶವೆಂದರೆ ನಿಮ್ಮ ಪ್ರೀತಿಪಾತ್ರರು ನಿಮಗೆ ಎಷ್ಟು ವಿಶೇಷ ಎಂಬುದನ್ನು ಅರಿತುಕೊಳ್ಳುವುದು.
1.ಫೆ.7ರಂದು ಗುಲಾಬಿದ ದಿನ
2.ಫೆ.8ರಂದು ಪ್ರಪೋಸ್ ಡೇ
3.ಫೆ.9ರಂದು ಚಾಕೋಲೆಟ್ ಡೇ
4.ಫೆ.10ರಂದು ಟೆಡ್ಡಿ ಡೇ
5.ಫೆ.11ರಂದು ಪ್ರಾಮೀಸ್ ಡೇ
6.ಫೆ.12ರಂದು ಅಪ್ಪುಗೆ(ತಬ್ಬಿಕೊಳ್ಳುವುದು) ಡೇ
7.ಫೆ.13ರಂದು ಕಿಸ್ ಡೇ
8.ಫೆ.14ರಂದು ಪ್ರೇಮಿಗಳ ದಿನ ಆಚರಣೆ
1.ಯಾವುದಾದರೂ ರೋಮ್ಯಾಂಟಿಕ್ ಸ್ಥಳದಲ್ಲಿ ಭೋಜನವನ್ನು ಯೋಜಿಸಿ
2.ನಿಮ್ಮ ಪ್ರೀತಿಪಾತ್ರರಿಗೆ ನೀವು ಕೈಬರಹದ ಪ್ರೇಮ ಪತ್ರವನ್ನು ನೀಡಬಹುದು.
3.ನೆಚ್ಚಿನ ಖಾದ್ಯವನ್ನು(ಅಡುಗೆ) ನೀವು ಬೇಯಿಸಬಹುದು.
4.ಪ್ರತಿದಿನ ಒಂದು ಸಣ್ಣ ಪ್ರೇಮ ಪತ್ರ ಬರೆಯಿರಿ. ಇದರಲ್ಲಿ ನೀವು ಅವರ ಬಗ್ಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು.
5.ನಿಮ್ಮ ಪ್ರೀತಿಪಾತ್ರರನ್ನು ಅವರ ನೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಅದು ಸಿನಿಮಾ ಡೇಟ್ ಆಗಿರಲಿ ಅಥವಾ ಹಾಡು, ನೃತ್ಯ ಅಥವಾ ಚಿತ್ರಕಲೆ ಆಗಿರಲಿ.ಇದೆಲ್ಲಾವನ್ನೂ ಅವರು 6.ಖಂಡಿತವಾಗಿಯೂ ವಿಶೇಷವೆಂದು ಭಾವಿಸುತ್ತಾರೆ.(ಏಜೆನ್ಸೀಸ್)