

ನವದೆಹಲಿ: ಜಗತ್ತಿನ ಮೂಲೆ ಮೂಲೆಯಲ್ಲಿ ಯಾವುದೇ ವಿಚಾರವಿರಲಿ, ಎಂತಹದ್ದೇ ಘಟನೆ ಇರಲಿ, ಅವೆಲ್ಲವೂ ಕ್ಷಣಮಾತ್ರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ನೋಡುಗರ ಗಮನ ಸೆಳೆದು, ಕೆಲವೇ ನಿಮಿಷಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಆ ಸಾಲಿಗೆ ಇಲ್ಲೊಂದು ರುಚಿಕರವಾದ ಖಾದ್ಯದ ವಿಡಿಯೋ ಸೇರ್ಪಡೆಗೊಂಡಿದೆ.
ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೊಡೆದಾಟ-ಬಡಿದಾಟ, ಅಹಿತಕರ ಘಟನೆಗಳ ದೃಶ್ಯಗಳೇ ಹೆಚ್ಚಾಗಿ ತುಂಬಿರುತ್ತವೆ. ಆದರೆ, ಈ ಖಾದ್ಯದ ಮೇಕಿಂಗ್ ವಿಡಿಯೋ ಸದ್ಯ ನೆಟ್ಟಿಗರಿಗಿಂತ ತಿಂಡಿ ಪ್ರಿಯರ ಗಮನ ಸೆಳೆಯುವಲ್ಲಿ ಮುಂಚೂಣಿಯಲ್ಲಿದೆ. ಈ ದೃಶ್ಯ ನೋಡಿದವರ ಬಾಯಲ್ಲಿ ನೀರೂರುವುದು ಖಂಡಿತ ಎಂದೇ ಹೇಳಬಹುದು.
ಮಲೈ ಕೋಫ್ತಾ ಎಂದೇ ಕರೆಯಲ್ಪಡುವ ಈ ವಿಶಿಷ್ಟವಾದ ಖಾದ್ಯ ಖುಶಾಲ್ ಜಂಗಿದ್ ಅವರ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಆಗಿದ್ದು, ವೈರಲ್ ವೀಡಿಯೊದಲ್ಲಿ ಇದನ್ನು ಮಾಡುವ ಸರಳ, ಸುಲಭ ವಿಧಾನವನ್ನು ತೋರಿಸಲಾಗಿದೆ. ದೊಡ್ಡ ಪಾತ್ರೆಯಲ್ಲಿ ರಸ್ಕ್ ಪ್ಯಾಕೆಟ್ಗಳನ್ನು ಓಪನ್ ಮಾಡುತ್ತಿದ್ದರೆ ನೋಡುಗರಲ್ಲಿ ಅದೇನೋ ಕುತೂಹಲ.
ಸದ್ಯ ಈ ವೀಡಿಯೊ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಹೆಚ್ಚಿನ ಕಾಮೆಂಟ್‌ಗಳಿಂದ ಕೂಡಿದೆ,(ಏಜೆನ್ಸೀಸ್).