More

    ಪುನೀತ್‌ರಾಜಕುಮಾರ್ ಅವರ ಜನ್ಮ ದಿನದ ಅಂಗವಾಗಿ ಸಾಮೂಹಿಕ ಸರಳ ವಿವಾಹ

    ಮೈಸೂರು: ಸಾಮೂಹಿಕ ಸರಳ ವಿವಾಹ ನಡೆಸುವ ಮೂಲಕ ಕರ್ನಾಟಕ ರತ್ನ ಪುನೀತ್‌ರಾಜಕುಮಾರ್ ಅವರ ಜನ್ಮ ದಿನವನ್ನು ಆಚರಿಸಲಾಯಿತು.

    ನಗರದ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಭಾನುವಾರ ಪುನೀತ ರಾಜಕುಮಾರ್ ಸಮಾಜ ಸೇವಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ 9 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ವೇದಿಕೆಯಲ್ಲಿ ಗಣ್ಯರ ಜೊತೆಯೇ ಅಷ್ಟೂ ಜೋಡಿಗಳು ಆಸೀನರಾಗಿ ವೇದಮಂತ್ರಗಳ ನಡುವೆ ನವಜೋಡಿಗಳು ಹಾರ ಬದಲಾಯಿಸಿಕೊಂಡರು. ಮಂಗಳ ಸೂತ್ರವನ್ನು ವರ ವಧುವಿಗೆ ಕಟ್ಟುತ್ತಿದ್ದಂತೆಯೇ ಅಕ್ಷತೆ ಕಾಳಿನ ಮೂಲಕ ಎಲ್ಲರೂ ಸತಿ-ಪತಿಯನ್ನು ಆಶೀರ್ವಾದಿಸಿದರು.

    ನೂತನ ಜೋಡಿಗಳನ್ನು ಆಶೀರ್ವಾದಿಸಿದ ಶ್ರೀ ನಾರಾಯಣಗುರು ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ರೇಣುಕಾನಂದ ಸ್ವಾಮೀಜಿ ಮಾತನಾಡಿ, ದಾಂಪತ್ಯ ಜೀವನವನ್ನು ಮಾದರಿಯಾಗಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಪರಸ್ಪರ ಒಬ್ಬರೊಬ್ಬರನ್ನು ಅರ್ಥ ಮಾಡಿಕೊಂಡು ಜೀವನ ಮಾಡಬೇಕು ಸಲಹೆ ನೀಡಿದರು.

    ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೆ, ನಮ್ಮ ಆಲೋಚನೆಗಳು, ಸತ್ಕಾರ್ಯಗಳಲ್ಲಿಯೂ ನಮ್ಮ ನಡುವೆ ಸದಾ ಜೀವಂತವಾಗಿರೆ. ಅಪ್ಪು ಅಜರಾಮರ ಎನ್ನುವಂತೆ ಅಪ್ಪು ಹೆಸರಿನಲ್ಲಿ ಹುಟ್ಟುಹಬ್ಬದಂದು ನಡೆಯುವ ಸಾಮಾಜಿಕ ಕಾರ್ಯಗಳಿಗೆ ಲೆಕ್ಕವಿಲ್ಲಎಂದು ಹೇಳಿದರು.

    ನಟ ಚಿಕ್ಕಣ್ಣ ಮಾತನಾಡಿ ಮಾತನಾಡಿ, ಪುನೀತ್ ರಾಜ್ ಕುಮಾರ್ ಅವರು ಮನೆ ಬಳಿ ಬಂದ ಅಭಿಮಾನಿಗಳೆಲ್ಲರನ್ನು ಪ್ರೀತಿಯಿಂದ ಮಾತನಾಡಿಸಿ, ಮನೆಯ ಕಾಂಪೌಂಡ್ ಒಳಗೆ ಕರೆದು -ಟೋ ತೆಗೆದುಕೊಳ್ಳುತ್ತಿದ್ದಂತಹ ಏಕೈಕ ವ್ಯಕ್ತಿ. ತಮ್ಮ ಜೀವನವನ್ನು ಸಂಪೂರ್ಣ ಅಭಿಮಾನಿಗಳಿಗಾಗಿ ಮೀಸಲಿಟ್ಟಿದ್ದರು ಎಂದು ಹೇಳಿದರು.

    ಶಾಸಕ ಟಿ.ಎಸ್.ಶ್ರೀವತ್ಸ ನೂತನ ಜೋಡಿಗಳಿಗೆ ಶುಭಾ ಹಾರೈಸಿದರು. ಮುಖಂಡರಾದ ಸಾಧನಹಳ್ಳಿ ನಾರಾಯಣ್, ವಿದ್ಯಾಸಾಗರ್ ಕದಂಬ , ಕೆ.ಎಸ್. ಮುರುಳಿ, ನಾಗರಾಜು ಸರಗೂರು, ಸುರೇಶ್ , ಸಿದ್ದಪ್ಪ, ತಮ್ಮಣ್ಣೇಗೌಡ, ಸಿದ್ದಪ್ಪ ರಾಜೀವ್ ನಗರ, ಕೃಷ್ಣಮೂರ್ತಿ, ಎಸ್.ಎ.ಶ್ರೀನಿವಾಸ್, ನಿ.ಚನ್ನಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts