

ಹೈದ್ರಾಬಾದ್: ( Naga Chaitanya Sobhita ) ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ಮದುವೆ ಹತ್ತಿರವಾಗಿದೆ. ವಿವಾಹ ಪೂರ್ವ ಸಂಭ್ರಮಾಚರಣೆಯ ಕಾರ್ಯಗಳು ಈಗಾಲೇ ನಡೆಯುತ್ತಿವೆ. ಭಾವಿ ಸೊಸೆಗೆ ಅಕ್ಕಿನೇನಿ ಕುಟುಂಬ ನೀಡಲಿರುವ ಉಡುಗೊರೆ ಹಾಗೂ ಉಡುಗೊರೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲಕಾರಿ ಚರ್ಚೆ ನಡೆಯುತ್ತಿದೆ.
ನಾಗಾರ್ಜುನ ಇತ್ತೀಚೆಗೆ ಟೊಯೊಟಾ ಲೆಕ್ಸಸ್ ವಾಹನವನ್ನು ಖರೀದಿಸಿದ್ದಾರೆ. ಆದರೆ ಅದನ್ನು ಶೋಭಿತಾಗೆ ಉಡುಗೊರೆಯಾಗಿ ಖರೀದಿಸಲಾಗಿದೆಯಂತೆ. ಇದಲ್ಲದೇ ಕೆಲವು ಬೆಲೆಬಾಳುವ ಚಿನ್ನಾಭರಣಗಳನ್ನು ಶೋಭಿತಾ ಅಕ್ಕಿನೇನಿ ಕುಟುಂಬಕ್ಕೆ ಉಡುಗೊರೆಯಾಗಿ ನೀಡಲಾಗ್ತಿದೆ ಎನ್ನುವ ಕುರಿತಾಗಿ ಚರ್ಚೆ ನಡೆಯುತ್ತಿದೆ.
ನಾಗಾರ್ಜುನ ಅವರು ಕಾರಿನಲ್ಲಿ ಹೈದರಾಬಾದ್ನಲ್ಲಿರುವ ಖೈರತಾಬಾದ್ ಆರ್ಟಿಒ ಕಚೇರಿಗೆ ಬಂದಿದ್ದರು. ಕಾರನ್ನು ನೋಂದಣಿ ಮಾಡಿದ ಬಳಿಕ ಅಭಿಮಾನಿಗಳೊಂದಿಗೆ ಪೋಸ್ ನೀಡಿದರು. ನಾಗಾರ್ಜುನ್ ಖರೀದಿಸಿರುವ ಹೊಸ ಕಾರಿನ ಬೆಲೆ ಸುಮಾರು ಎರಡೂವರೆ ಕೋಟಿ ರೂಪಾಯಿ ಎನ್ನಲಾಗಿದೆ.
ಶೋಭಿತಾಗೆ ಮಾವ ನಾಗಾರ್ಜುನ್ ಅವರು ಈ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ನಾಗಾರ್ಜುನ ಅಥವಾ ಶೋಭಿತಾ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಇಲ್ಲ, ಆದರೆ ಇದೀಗ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.
ಶೋಭಿತಾ ಪೋಷಕರು ಭಾವಿ ಅಳಿಯ ನಾಗ ಚೈತನ್ಯ ಅವರಿಗೆ ಆಡಿ ಕಾರು ಹಾಗೂ ಸ್ಪೋರ್ಟ್ಸ್ ಬೈಕ್ ನೀಡಲಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಹೈದರಾಬಾದ್ನಲ್ಲಿಯೇ ಐಷಾರಾಮಿ ವಿಲ್ಲಾವನ್ನು ಸಹ ನೀಡಲಾಗುವುದು. ಆದರೆ ಅಕ್ಕಿನೇನಿ ಕುಟುಂಬದವರು ಶೋಭಿತಾ ಕುಟುಂಬಸ್ಥರಿಗೆ ಹಣ, ಒಡವೆ ಬೇಕಾಗಿಲ್ಲ, ಮಗನ ಹೆಂಡತಿ, ಒಳ್ಳೆ ಮನೆ, ಜೀವನಪೂರ್ತಿ ಜೊತೆಗಿದ್ದರೆ ಸಾಕು ಎಂದು ಹೇಳಿರುವುದಾಗಿ ವರದಿಯಾಗಿದೆ.