

Bigg Boss : ತೆಲಗು ಬಿಗ್ಬಾಸ್ ಸೀಸನ್ 8ರಲ್ಲಿ ರೆಬಲ್ ಆಗಿ ಮಿಂಚಿದ್ದ ಶೋಭಾ ಶೆಟ್ಟಿ ಇದೀಗ ಕನ್ನಡ ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿದ್ದರು. ವಾರಾಂತ್ಯದಲ್ಲಿ ಕಿಚ್ಚ ಅವರ ಮುಂದೆ ನನ್ನನ್ನು ಬಿಗ್ಬಾಸ್ ಮನೆಯಿಂದ ಆಚೆ ಕಳುಹಿಸಿ ಎಂದು ಶೋಭಾ ಕಣ್ಣೀರು ಹಾಕಿದ್ದಾರೆ.
ಕನ್ನಡದ ಈ ರಿಯಾಲಿಟಿ ಶೋ ಆರಂಭವಾಗಿ 50ಕ್ಕೂ ಹೆಚ್ಚು ದಿನಗಳಾಗಿವೆ. ಪ್ರಮುಖ ಸ್ಪರ್ಧಿಗಳ ಜೊತೆಗೆ ಇನ್ನೂ ಇಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಮನೆ ಪ್ರವೇಶಿಸಿದ್ದಾರೆ. ಶೋಭಾ ಶೆಟ್ಟಿ , ರಜತ್ ಎಂಬ ಮತ್ತೊಬ್ಬ ಸ್ಪರ್ಧಿ ಕೂಡ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಶೋಭಾಶೆಟ್ಟಿಗೆ ಬಿಗ್ ಬಾಸ್ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ರೆಬಲ್ ಆಗಿ ಎಂಟ್ರಿಯಾಗಿದ್ದ ಈಕೆ ಈಗ ಸಂಪೂರ್ಣ ಸೈಲೆಂಟ್ ಆಗಿದ್ದಾರೆ.
ಸೂಪರ್ ಸಂಡೇಯ ಮೊದಲ ವಿಡಿಯೋ ರಿಲೀಸ್ ಆಗಿದೆ. ವಿಡಿಯೋದಲ್ಲಿ ಶೋಭಾ ಅವರೇ ನೀವು ಸೇಫ್ ಎಂದು ಕಿಚ್ಚ ಹೇಳಿದ್ದಾರೆ. ಆದರೆ ಇದಕ್ಕೆ ಅಳುತ್ತಲೇ ಉತ್ತರ ಕೊಟ್ಟ ಶೋಭಾ ಶೆಟ್ಟಿ, ಸರ್ ನನಗೆ ಎಲ್ಲೋ ಒಂದು ಕಡೆ ಇರೋಕೆ ಆಗುತ್ತಿಲ್ಲ ಅನಿಸುತ್ತಿದೆ. ನನ್ನನ್ನು ಮನೆಯಿಂದ ಆಚೆ ಕಳುಹಿಸಿ ಎಂದು ಕಿಚ್ಚ ಅವರ ಬಳಿ ಕೇಳಿ ಕೊಂಡಿದ್ದಾರೆ. ಹೀಗೆ ಹೇಳುತ್ತಿದ್ದಂತೆ ಸ್ಪರ್ಧಿಗೆಲ್ಲಾ ಗಾಬರಿಯಿಂದ ಶೋಭಾ ಅವರನ್ನು ನೋಡಿದ್ದಾರೆ.
ಅರ್ಥ ಮಾಡಿಕೊಳ್ಳಿ, ಯಾಕೆ ನೀವು ಒಳಗೆ ಹೋಗಿದ್ರಿ?. ನಿಮ್ಮನ್ನು ಸೇಫ್ ಮಾಡಿದರಲ್ಲ, ಅವರಿಗೆ ಈ ತರ ಉತ್ತರ ಕೊಡೋಕೆ ಆಗಲ್ಲ. ಹೊರಗಡೆ ಹೋಗಬೇಕಾ ಎಂದು ಕೈ ತೋರಿಸುತ್ತ ದೊಡ್ಡ ಧ್ವನಿಯಲ್ಲಿ ಕಿಚ್ಚ ಸುದೀಪ್ ಶೋಭಾಗೆ ಪ್ರಶ್ನಿಸಿದ್ದಾರೆ. ನಿನಗಾಗಿ ಡೋರ್ ಓಪನ್ ಇದೆ ಎಂದು ಹೇಳಿದ್ದಾರೆ.
ನನಗೆ ಕಂಟಿನ್ಯೂ ಮಾಡೋಕೆ ಆಗಲ್ಲ ಅಂತ ಅನಿಸುತ್ತಿದೆ ಸರ್. ಹೋದ ಮೇಲೆ ಪೇಸ್ ಮಾಡುವುದು ಹೇಗಂತ ಗೊತ್ತಾಗುತ್ತಿಲ್ಲ. ಆಡಬೇಕು, ಇರಬೇಕೆಂದು ಇದೆ. ಆದರೆ ಭಯವಾಗುತ್ತಿದೆ ಎಂದಿದ್ದಾರೆ.
ಆದರೆ ಶೋಭಾ ಮನೆಯಿಂದ ಆಚೆ ಬಂದಿದ್ದಾರ? ಇಲ್ಲವೋ ಎನ್ನುವ ಕುರಿತಾಗಿ ಯಾವುದೇ ಮಾಹಿತಿ ಇಲ್ಲ.. ಇಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ...