

ಹೈದರಾಬಾದ್: ಇತ್ತೀಚೆಗಷ್ಟೇ ಬಿಡುಗಡೆಯಾದ ಬೇಬಿ ಚಿತ್ರ ನಿರೀಕ್ಷೆಗಳನ್ನು ಮೀರಿ ಉತ್ತಮ ಕಲೆಕ್ಷನ್ ಮಾಡಿದೆ. ಈ ಹಿನ್ನಲೆಯಲ್ಲಿ ಚಿತ್ರತಂಡ ಜುಲೈ 30 ರಂದು ಹೈದರಾಬಾದ್ನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮುಖ್ಯ ಅತಿಥಿಯಾಗಿ ಮೆಗಾಸ್ಟಾರ್ ಅವರನ್ನು ಆಹ್ವಾನಿಸಲಾಗಿತ್ತು. ಈ ಸಂಭ್ರಮಾಚರಣೆಯಲ್ಲಿ ಕಾಣಿಸಿಕೊಂಡ ಚಿರಂಜೀವಿ ಅವರ ವಾಚ್ ಅನೇಕರ ಗಮನ ಸೆಳೆದಿದೆ. ಆ ವಾಚ್‌ನ ವಿವರಗಳನ್ನು ತಿಳಿಯಲು ನೆಟ್ಟಿಗರು ಹುಡುಕಾಟ ಆರಂಭಿಸಿದ್ದಾರೆ
ಬೇಬಿ ಚಿತ್ರತಂಡ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಚಿರಂಜೀವಿ ಧರಿಸಿದ್ದ ವಾಚ್ ಬೆಲೆ 1.90 ಕೋಟಿ ರೂ. (230000 ಡಾಲರ್) ಎಂದು ಅಂದಾಜಿಸಲಾಗಿದೆ. ಇದು ರೋಲೆಕ್ಸ್ ಕಂಪನಿಯ ಕಾಸ್ಮೋಗ್ರಾಫ್ ಡೇಟೋನಾ ಐ ಆಫ್ ದಿ ಟೈಗರ್ ವಾಚ್ ಎಂಬುದು ಗಮನಾರ್ಹ. ನೋಡಲು ತುಂಬಾ ಸಿಂಪಲ್ ಆಗಿ ಕಾಣುವ ಈ ವಾಚ್ ಸಖತ್ ದುಬಾರಿಯಾಗಿದೆ.
ತೆಲುಗು ಚಿತ್ರರಂಗದಲ್ಲಿ ರಾಮ್ ಚರಣ್, ಎನ್‌ಟಿಆರ್‌ನಂತಹ ನಟರು ಕೂಡ ದುಬಾರಿ ವಾಚ್‌ಗಳನ್ನು ಹೊಂದಿದ್ದಾರೆ. ಈ ಹಿಂದೆ ಹಲವು ಬಾರಿ ಈ ವಿಷಯ ಚರ್ಚೆಯಾಗಿದೆ. ಮೆಗಾಸ್ಟಾರ್ ಶೀಘ್ರದಲ್ಲೇ ಭೋಲಾ ಶಂಕರ್ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.