

Indian Railways: ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಭಾರತೀಯ ರೈಲ್ವೆ ನಾಲ್ಕನೇ ಸ್ಥಾನ ಪಡೆದಿದೆ. ಪ್ರತಿದಿನ ಲಕ್ಷಾಂತರ ಜನರು ರೈಲು ಮೂಲಕ ಒಂದು ಸ್ಥಳದಿಂದ ಮೊತ್ತೊಂದು ಸ್ಥಳಕ್ಕೆ ಪ್ರಯಾಣಿಸುತ್ತಾರೆ. ಹೀಗಾಗಿ, ದಿನಂಪ್ರತಿ ರೈಲ್ವೆ ಕೋಟ್ಯಾಂತರ ರೂಪಾಯಿ ಆದಾಯ ಬರುತ್ತದೆ. ದೇಶದ ಆರ್ಥಿಕತೆಯಲ್ಲಿ ರೈಲ್ವೆಗಳು ಸಹ ಪಾಲನ್ನು ಹೊಂದಿವೆ.
ಆದಾಗ್ಯೂ, ರೈಲ್ವೆಗಳು ಪ್ರಯಾಣಿಕರಿಗಿಂತ ಸರಕು ಸಾಗಣೆಯಿಂದ ಹೆಚ್ಚಿನ ಆದಾಯವನ್ನು ಗಳಿಸುತ್ತವೆ. ಒಂದೇ ಟಿಕೆಟ್ನಿಂದ ರೈಲ್ವೆ ಎಷ್ಟು ಹಣ ಗಳಿಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದನ್ನು ತಿಳಿಯೋಣ ಬನ್ನಿ..
ರೈಲು ನಿರ್ವಹಿಸಲು ರೈಲ್ವೆ ಇಲಾಖೆ ಪ್ರತಿದಿನ ಲಕ್ಷಾಂತರ ರೂ. ಖರ್ಚು ಮಾಡುತ್ತದೆ. ಅಲ್ಲದೆ, ಇದರಲ್ಲಿ ರೈಲು ಇಂಧನ, ಸಿಬ್ಬಂದಿ ಸಂಬಳ, ನಿರ್ವಹಣೆ ಮತ್ತು ಮೂಲಸೌಕರ್ಯ ಸೇರಿದಂತೆ ಇತರೆ ವೆಚ್ಚಗಳು ಸೇರಿವೆ. ಈ ವೆಚ್ಚವನ್ನು ಭರಿಸಲು, ರೈಲ್ವೆ ಪ್ರಯಾಣಿಕರ ಟಿಕೆಟ್ಗಳಿಂದ ಹಣವನ್ನು ಗಳಿಸುತ್ತದೆ. ಸೇವಾ ಶುಲ್ಕಗಳು, ಮೂಲಸೌಕರ್ಯ ನಿರ್ವಹಣೆ ಮತ್ತು ಭದ್ರತಾ ವ್ಯವಸ್ಥೆಗಳಂತಹ ವೆಚ್ಚಗಳನ್ನು ಒಂದೇ ಟಿಕೆಟ್ನಲ್ಲಿರುವ ಪ್ರಯಾಣಿಕರು ಭರಿಸುತ್ತಾರೆ.
ಒಂದು ರೈಲ್ವೆಗಳಿಕೆ ಅದರ ದೂರ ಮತ್ತು ಪ್ರಯಾಣಿಕ ಸಂಖ್ಯೆ ಮೇಲೆ ಅವಲಂಬಿಸಿರುತ್ತದೆ. ಸಾಮಾನ್ಯ ರೈಲು ಅಥವಾ ಎಕ್ಸ್ಪ್ರೆಸ್ ರೈಲಿನಿಂದ ಪ್ರತಿ ವ್ಯಕ್ತಿಗೆ 40 ರಿಂದ 50 ರೂ. ಗಳಿಸುತ್ತದೆ. ಅದೇ ರೀತಿ ರಾಜಧಾನಿ, ಶತಾಬ್ದಿ ಅಥವಾ ವಂದೇ ಭಾರತ್ನಂತಹ ಪ್ರೀಮಿಯಂ ರೈಲು ಇದ್ದರೆ ರೈಲ್ವೆಯ ಲಾಭ ಹೆಚ್ಚಾಗುತ್ತದೆ. ಅಂತಹ ರೈಲುಗಳಲ್ಲಿ ಪ್ರಯಾಣಿಸುವುದರಿಂದ ರೈಲ್ವೆಯು ಪ್ರತಿ ಪ್ರಯಾಣಿಕರಿಗೆ 100 ರಿಂದ 500 ರೂ. ಗಳಿಸುತ್ತದೆ.
ರೈಲು ಹೊರಡುವ ನಿಗದಿತ ಸಮಯಕ್ಕೆ 48 ಗಂಟೆಗಳ ಮೊದಲು ದೃಢಪಡಿಸಿದ ಟಿಕೆಟ್ ಅನ್ನು ರದ್ದುಗೊಳಿಸಿದರೆ, ಪ್ರಥಮ ಎಸಿಯಲ್ಲಿ 240 ರೂ., ಎರಡನೇ ಎಸಿಯಲ್ಲಿ 200 ರೂ., ಮೂರನೇ ಎಸಿಯಲ್ಲಿ 180 ರೂ., ಸ್ಲೀಪರ್ ಕ್ಲಾಸ್ನಲ್ಲಿ 120 ರೂ. ಮತ್ತು ಎರಡನೇ ದರ್ಜೆಯಲ್ಲಿ 60 ರೂ. ದಂಡವನ್ನು ಕಡಿತಗೊಳಿಸಲಾಗುತ್ತದೆ ಎಂದು ಅಂದಾಜು ವರದಿಯಾಗಿದೆ.(ಏಜೆನ್ಸೀಸ್)