cigarette: ಧೂಮಪಾನ ಆರೋಗ್ಯಕ್ಕೆ ಎಷ್ಟು ಹಾನಿಕಾರ ಎಂದರೆ ದಿನನಿತ್ಯ ಜಗತ್ತಿನಲ್ಲಿ ಮೃತಪಡುತ್ತಿರುವವರಲ್ಲಿ ಕನಿಷ್ಠ 10 ಮಂದಿಯಾದರೂ ಸಿಗರೇಟ್ ಸೇದುವ ಪರಿಣಾಮ ಎಂದು ವೈದ್ಯರು ಹೇಳುತ್ತಾರೆ. ದಿನಂಪ್ರತಿ ನಿಮ್ಮ ಸುತ್ತಮುತ್ತಲೇ 2-3 ಪ್ಯಾಕ್ ಸಿಗರೇಟ್ ಸೇದುವವರಿದ್ದಾರೆ. ಇನ್ನು ಕೆಲವರು ಅದಕ್ಕೆ ದಾಸರಾಗಿರುತ್ತಾರೆ.ಹೀಗಾಗಿ, ಪ್ರತಿ ವರ್ಷ ಮಾ.12ರಂದು ಧೂಮಪಾನ ರಹಿತ ದಿನ ಎಂದು ಆಚರಿಸಲಾಗುತ್ತದೆ. ಧೂಮಪಾನದ ದುಷ್ಪರಿಣಾಮಗಳನ್ನು ಎತ್ತಿ ತೋರಿಸಲು ಮತ್ತು ಜನರು ಅದನ್ನು ತ್ಯಜಿಸಲು ಪ್ರೋತ್ಸಾಹಿಸಲು ಈ ದಿನವನ್ನು ಆಚರಿಸಲಾಗುತ್ತದೆ.

1920ರ ದಶಕದಲ್ಲಿ, ವೈದ್ಯರ ವರದಿಗಳಲ್ಲಿ ಸಿಗರೇಟ್ ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳೊಂದಿಗೆ ಸಂಬಂಧ ಹೊಂದಿದೆ ಎಂದು ಕಂಡುಬಂದಿತು. ಸಂಶೋಧಕರ ಪ್ರಕಾರ, ಈ ದಿನವನ್ನು ಆಚರಿಸುವುದು ಪರಿಣಾಮಕಾರಿ ಎಂದು ಸಾಬೀತಾಗಿದೆ ಮತ್ತು 10 ರಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಇದನ್ನು ತ್ಯಜಿಸುವುದನ್ನು ಗಮನಿಸಲಾಗಿದೆ. ಆದರೆ ಸಿಗರೇಟ್ ತುಂಬಾ ಅಪಾಯಕಾರಿ ಮತ್ತು ಮಾರಕವಾಗಿದೆ. ಹೀಗಾಗಿ, ಅದನ್ನು ಏಕೆ ಮತ್ತು ಯಾರು ಕಂಡುಹಿಡಿದರು? ಎಂಬುದು ತಿಳಿಯೋಣ..
ಸಿಗರೇಟ್ ತಯಾರಿಸಿದವರು ಯಾರು..?
ಪ್ರತಿದಿನ 2ರಿಂದ 3 ಪ್ಯಾಕ್ ಸಿಗರೇಟ್ ಸೇದುವವರಿದ್ದಾರೆ. ಅದೇ ರೀತಿ ಕಳೆದ ಕೆಲ ವರ್ಷಗಳಿಂದ ಧೂಮಪಾನಿಗಳ ಸಂಖ್ಯೆ ಕೂಡ ಅಧಿಕವಾಗಿದೆ. ಆದರೆ, ಸಿಗರೇಟ್ ತಯಾರಿಸಿದವರು ಯಾರು ಎಂದರೆ ‘ತಂಬಾಕು ಇನ್ ಹಿಸ್ಟರಿ’ ಪುಸ್ತಕದ ಮಾಹಿತಿ ಪ್ರಕಾರ, ಅಮೆರಿಕದ ಡ್ಯೂಕ್ ಜೇಮ್ಸ್ ಬುಕಾನನ್ ಅವರನ್ನು ಸಿಗರೇಟಿನ ಪಿತಾಮಹ ಎಂದು ಪರಿಗಣಿಸಲಾಗಿದೆ.
ಡ್ಯೂಕ್ ಜೇಮ್ಸ್ ಬುಕಾನನ್ ಸಿಗರೇಟ್ಗಳ ಪ್ರಸ್ತುತ ರೂಪಾಂತರಕ್ಕೆ ಕಾರಣನಾಗಿದ್ದಾನೆ. ಸಿಗರೇಟ್ ವಿತರಿಸುವಲ್ಲಿ(ಮಾರ್ಕೆಂಟಿಗ್) ಜೇಮ್ಸ್ ಪ್ರಮುಖ ಪಾತ್ರವಹಿಸಿದ್ದರಿಂದ ಅಂದು ವಿದೇಶಗಳಲ್ಲಿ ಸಿಗರೇಟ್ ವಿಪರೀತವಾಗಿ ಬೇಡಿಕೆ ಬಂದಿತು. ಅಲ್ಲದೆ, ಇದನ್ನು ಮೊದಲು ಶ್ರೀಮಂತ ವ್ಯಕ್ತಿಗಳು ಸೇರಿದಂತೆ ಬ್ಯುಸಿನೆಸ್ಸ್ಮ್ಯಾನ್ ಸೇದುವುದರಿಂದ ತುಂಬಾ ಹೆಸರುವಾಸಿಯಾಗಿತು. ಬಳಿಕ ನಿಧಾನವಾಗಿ ಜಗತ್ತಿನ ವಿವಿಧ ಮಾರುಕಟ್ಟೆಗಳಲ್ಲಿ ಜನಪ್ರಿಯಗಳಿಸಿತು.
ಬಳಿಕ ಉತ್ತರ ಕೆರೊಲಿನಾದ ಡರ್ಹಾಮ್ ನಗರದ ಕೆಲವರು ಡ್ಯೂಕ್ ಡರ್ಹಾಮ್ ಹೆಸರಿನ ಸಿಗರೇಟ್‌ಗಳನ್ನು ತಯಾರಿಸುತ್ತಿದ್ದರು ಎಂದು ‘ತಂಬಾಕು ಇನ್ ಹಿಸ್ಟರಿ’ ಪುಸ್ತಕದಲ್ಲಿ ಲೇಖಕರು ವಿವರಿಸಿದ್ದಾರೆ. ಅಂದು ಸಿಗರೇಟ್ ತಯಾರಿದ್ದು ಕೇವಲ ಮನರಂಜನೆಗೊಸ್ಕರ ಅಂತೆ. ಆದರೆ, ಇಂದು ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳಿಗೆ ಮಾರಕವಾಗಿದೆ. (ಏಜೆನ್ಸೀಸ್)
ರದ್ದಾದ, ಚಲಾವಣೆ ಇಲ್ಲದ ನೋಟುಗಳನ್ನು ಸರ್ಕಾರ ಏನು ಮಾಡುತ್ತೆ?; ಇಲ್ಲಿದೆ ಉಪಯುಕ್ತ ಮಾಹಿತಿ | Uncirculated notes
ಇಲ್ಲಿ ಮಹಿಳೆಯರು ಬಿಕಿನಿ ಧರಿಸುವಂತಿಲ್ಲ; ಉಲ್ಲಂಘನೆ ಮಾಡಿದ್ರೆ ಆಗುತ್ತೆ ಕಠಿಣ ಶಿಕ್ಷೆ; ಎಲ್ಲಿ ಗೊತ್ತೆ? | Bikinis