

ಬೆಂಗಳೂರು: ಐಪಿಎಲ್ 18ನೇ ಆವೃತ್ತಿಯಲ್ಲಿ ಇನ್ನು 12 ಲೀಗ್ ಪಂದ್ಯಗಳು ಬಾಕಿ ಉಳಿದಿವೆ. ಆದರೆ ಧರ್ಮಶಾಲಾ ಬ್ಲ್ಯಾಕ್ಔಟ್ನಿಂದಾಗಿ ಗುರುವಾರ ದಿಢೀರ್ ಸ್ಥಗಿತಗೊಂಡ ಪಂಜಾಬ್-ಡೆಲ್ಲಿ ನಡುವಿನ ಪಂದ್ಯವೂ ಮುಂಬರುವ ದಿನಗಳಲ್ಲಿ ಮರುನಿಗದಿಯಾಗುವ ಸಾಧ್ಯತೆಯೂ ಇದೆ. ಯಾಕೆಂದರೆ ಐಪಿಎಲ್ ವೆಬ್ಸೈಟ್ನಲ್ಲಿ ಇನ್ನೂ ಈ ಪಂದ್ಯ ರದ್ದುಗೊಂಡಿರುವುದರ ಇಂದುಗೊಳಿಸುವಿಕೆ ಮಾಡಿ ತಲಾ 1 ಅಂಕ ಹಂಚಲಾಗಿಲ್ಲ. ಹೀಗಾಗಿ 13 ಲೀಗ್ ಪಂದ್ಯಗಳಲ್ಲದೆ, ಫೈನಲ್ ಸಹಿತ 4 ಪ್ಲೇಆಫ್ ಪಂದ್ಯಗಳು ಅಂದರೆ ಒಟ್ಟು 17 ಪಂದ್ಯಗಳು ಬಾಕಿ ಉಳಿದಿವೆ. ಪಂಜಾಬ್-ಡೆಲ್ಲಿ ಪಂದ್ಯ ಮರುನಿಗದಿ ಆಗದಿದ್ದರೆ 16 ಪಂದ್ಯಗಳಷ್ಟೇ ಬಾಕಿ ಉಳಿಯಲಿವೆ.
ಬೆಂಗಳೂರಿನಲ್ಲಿ 2 ಪಂದ್ಯ ಬಾಕಿ
ಆರ್ಸಿಬಿ ತಂಡ ತವರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತನ್ನ 5 ಲೀಗ್ ಪಂದ್ಯಗಳನ್ನು ಆಡಿತ್ತು. ಬೆಂಗಳೂರಿನಲ್ಲಿ ಇನ್ನೂ 2 ಲೀಗ್ ಪಂದ್ಯಗಳನ್ನು ಆಡುವುದು ಬಾಕಿ ಇತ್ತು. ಇದೇ ವೇಳೆ ಅಹಮದಾಬಾದ್ನಲ್ಲಿ 3 ಮತ್ತು ಲಖನೌದಲ್ಲಿ 2 ಲೀಗ್ ಪಂದ್ಯಗಳು ಬಾಕಿ ಇದ್ದವು. ನವದೆಹಲಿ, ಹೈದರಾಬಾದ್, ಚೆನ್ನೈ, ಮುಂಬೈ, ಜೈಪುರದಲ್ಲೂ ತಲಾ 1 ಲೀಗ್ ಪಂದ್ಯಗಳು ಬಾಕಿ ಇದ್ದವು. ಹೈದರಾಬಾದ್, ಕೋಲ್ಕತದಲ್ಲಿ ಪ್ಲೇಆ್ ಪಂದ್ಯಗಳು ನಿಗದಿಯಾಗಿದ್ದವು.
ಐಪಿಎಲ್-18ರ ಬಾಕಿ ಪಂದ್ಯಗಳು
*ಲಖನೌ: ಎಲ್ಎಸ್ಜಿ-ಆರ್ಸಿಬಿ
*ಹೈದರಾಬಾದ್: ಸನ್ರೈಸರ್ಸ್-ಕೆಕೆಆರ್
*ಅಹಮದಾಬಾದ್: ಪಂಜಾಬ್-ಮುಂಬೈ
*ನವದೆಹಲಿ: ಡೆಲ್ಲಿ-ಗುಜರಾತ್ ಟೈಟಾನ್ಸ್
*ಚೆನ್ನೈ: ಸಿಎಸ್ಕೆ-ರಾಜಸ್ಥಾನ ರಾಯಲ್ಸ್
*ಬೆಂಗಳೂರು: ಆರ್ಸಿಬಿ-ಸನ್ರೈಸರ್ಸ್
*ಅಹಮದಾಬಾದ್: ಗುಜರಾತ್-ಎಲ್ಎಸ್ಜಿ
*ಮುಂಬೈ: ಮುಂಬೈ-ಡೆಲ್ಲಿ ಕ್ಯಾಪಿಟಲ್ಸ್
*ಜೈಪುರ: ರಾಜಸ್ಥಾನ-ಪಂಜಾಬ್ ಕಿಂಗ್ಸ್
*ಬೆಂಗಳೂರು: ಆರ್ಸಿಬಿ-ಕೆಕೆಆರ್
*ಅಹಮದಾಬಾದ್: ಗುಜರಾತ್-ಸಿಎಸ್ಕೆ
*ಲಖನೌ: ಎಲ್ಎಸ್ಜಿ-ಸನ್ರೈಸರ್ಸ್
*ಹೈದರಾಬಾದ್: ಮೊದಲ ಕ್ವಾಲಿಫೈಯರ್
*ಹೈದರಾಬಾದ್: ಎಲಿಮಿನೇಟರ್
*ಕೋಲ್ಕತ: ಎರಡನೇ ಕ್ವಾಲಿಫೈಯರ್
*ಕೋಲ್ಕತ: ಫೈನಲ್
***ಪಂಜಾಬ್-ಡೆಲ್ಲಿ ಪಂದ್ಯ ಮರುನಿಗದಿ ಸಾಧ್ಯತೆ.