ಬಾಲನಟಿ ಬೇಬಿ ಇಂದಿರಾ ಈಗ ಹೇಗಿದ್ದಾರೆ, ಏನ್​ ಮಾಡ್ತಿದ್ದಾರೆ ಗೊತ್ತಾ?

Baby Indira
Published on

ಚನ್ನೈ: ಚಂದನವನದಲ್ಲಿ ಎಂಬತ್ತರ ದಶಕದಲ್ಲಿ ಅದೆಷ್ಟು ತಾರೆಯರು ಮಿಂಚಿ ಸದ್ಯ ಈಗ ಚಿತ್ರರಂಗ ಬಿಟ್ಟು ದೂರ ಸರಿದಿದ್ದಾರೆ. ತಮ್ಮ ಖಾಸಗಿ ಜೀವನದತ್ತ ಮುಖ ಮಾಡಿ ನಟನೆಯಿಂದ ಹಿಂದೆ ಸರಿದ ನಟಿಯರು ಅನೇಕರಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಬಾಲ ನಟ, ನಟಿಯರಾಗಿ ಒಂದು ಕಾಲದಲ್ಲಿ ಜನರ ಮನ ಗೆದ್ದವರಲ್ಲಿ ಬೇಬಿ ಇಂದಿರಾ, ಮಾಸ್ಟರ್​ ಆನಂದ್​, ಮಾಸ್ಟರ್​ ಮಂಜುನಾಥ್ ಇಂತಹ ಅನೇಕರು ಇದ್ದಾರೆ. ಅವರಲ್ಲಿ ಕೆಲವರು ಈಗ ಮತ್ತೆ ಚಿತ್ರರಂಗಕ್ಕೆ ಹಾಗೂ ಕಿರುತೆರೆ ಮೂಲಕ ನಟನೆಯನ್ನು ಮುಂದುವರೆಸುತ್ತಿದ್ದಾರೆ.

ಇದೀಗ ಅದೇ ರೀತಿ 1980ರ ದಶಕದಲ್ಲಿ ಬಾಲ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿ ಅಂಜದಗಂಡು ಸಿನಿಮಾದಲ್ಲಿ ಪೋಷಕನಟಿಯಾಗಿ ನಟಿಸಿ ಸೈ ಎನಿಸಿಕೊಂಡು ಜನರ ಅಚ್ಚುಮೆಚ್ಚಿನ ಬೇಬಿ ಅನಿಸಿಕೊಂಡಿದ್ದ ಬೇಬಿ ಇಂದಿರಾ ಅವರು ಬರೋಬ್ಬರಿ ಮೂವತ್ತೈದು ವರ್ಷಗಳ ಬಳಿಕ ಮತ್ತೆ ಜನರ ಎದುರು ಕಾಣಿಸಿಕೊಂಡಿದ್ದಾರೆ.

ಪುಟಾಣಿ ಏಜೆಂಟ್ 123, ಸಿಂಹದ ಮರಿ ಸೈನ್ಯ, ಚಿನ್ನಾ ನಿನ್ನ ಮುದ್ದಾಡುವೆ, ಮಕ್ಕಳ ಭಾಗ್ಯ, ರಾಮ ಲಕ್ಷ್ಮಣ ಇಂತಹ ಎವರ್‌ ಗ್ರೀನ್‌ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದ ಬೇಬಿ ಇಂದಿರಾ ಅವರು ಈಗ ಹೇಗಿದ್ದಾರೆ? ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಿಗಿದೆ.

ಬೇಬಿ ಇಂದಿರಾ ಅವರು ಶ್ರೀಧರನ್​ ಎಂಬುವವರ ಜತೆ ಮದುವೆಯಾದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದು ಪ್ರಸ್ತುತ ಚನ್ನೈನಲ್ಲಿಯೇ ವಾಸವಾಗಿದ್ದು, ಇದೀಗ ಅವರಿಗೆ ಪ್ರಶಾಂತ ಶ್ರೀಧರ ಹಾಗೂ ರಕ್ಷಿತ ಶ್ರೀಧರ್​ ಎಂಬ ಇಬ್ಬರು ಗಂಡುಮಕ್ಕಳು ಹಾಗೂ ಮೊಮ್ಮಕ್ಕಳು ಇದ್ದಾರೆ . ತಾಯಿಯ ಸಾಕಷ್ಟು ಚಿತ್ರಗಳನ್ನು ನೋಡಿದ್ದೇವೆ ಹಾಗೂ ಅವರೇ ನಮಗೆ ಸ್ಫೂರ್ತಿ  ಎಂದು  ತಾಯಿಯ ನಟನೆ ಬಗ್ಗೆ ಮಕ್ಕಳು ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net