ಮೆಟ್ರೋ ರೈಲುಗಳಲ್ಲಿ ರೀಲ್ಸ್ ಮಾಡುವಂತಿಲ್ಲ: ಕ್ರಿಯೇಟಿವ್ ಆಗಿಯೇ ಸೂಚನೆ ಕೊಟ್ಟ ಡಿಎಂಆರ್​ಸಿ

Delhi Metro
Published on

ನವದೆಹಲಿ: ಮೆಟ್ರೋ ರೈಲುಗಳಲ್ಲಿ ಇತ್ತೀಚೆಗೆ ಕೆಲವು ಅಸಹ್ಯಕರ ಘಟನೆಗಳು ನಡೆಯುತ್ತಿರುವುದು ಹೆಚ್ಚಾಗಿದ್ದು, ಆ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿರುವ ಸಂಬಂಧಿತ ಸಂಸ್ಥೆಗಳು ಇದೀಗ ಮತ್ತೊಂದು ಮಹತ್ವದ ನಿರ್ಣಯ ತಳೆದಿವೆ. ಈ ಹಿನ್ನೆಲೆಯಲ್ಲಿ ಇನ್ನುಮುಂದೆ ಮೆಟ್ರೋ ರೈಲುಗಳಲ್ಲಿ ರೀಲ್ಸ್ ಮಾಡುವುದಕ್ಕೂ ನಿರ್ಬಂಧ ಹೇರಲಾಗಿದೆ.

ಸೋಷಿಯಲ್ ಮೀಡಿಯಾ ಕ್ರೇಜ್​ನ ಈ ಕಾಲದಲ್ಲಿ ಯುವಪೀಳಿಗೆ ರೀಲ್ಸ್​ಗಳಿಗೆ ಮಾರುಹೋಗಿದ್ದಾರೆ. ಎಲ್ಲೆಂದರಲ್ಲಿ ರೀಲ್ಸ್ ಮಾಡುತ್ತಿರುವ ಯುವಕ-ಯುವತಿಯರಿಗೆ ಇನ್ನು ಮುಂದೆ ಮೆಟ್ರೋ ರೈಲುಗಳಲ್ಲಿ ಖಂಡಿತ ಅವಕಾಶ ಇರುವುದಿಲ್ಲ. ದೆಹಲಿ ಮೆಟ್ರೋ ರೈಲು ನಿಗಮ ಇಂಥದ್ದೊಂದು ಸೂಚನೆಯನ್ನು ಹೊರಡಿಸಿದೆ.

'ಜಾನಿ ಜಾನಿ ಎಸ್​ ಪಾಪ' ಶೈಲಿಯಲ್ಲಿ ಕ್ರಿಯೇಟಿವ್ ಆಗಿಯೇ ಈ ಸೂಚನೆಯನ್ನು ನೀಡಲಾಗಿದೆ. 'ಜಾನಿ ಜಾನಿ ಎಸ್​ ಪಾಪ, ಮೇಕಿಂಗ್ ರೀಲ್ಸ್ ಇನ್ ಮೆಟ್ರೋ ನೋ ಪಾಪ' ಎಂಬ ಜಾಹೀರಾತು ಮೂಲಕ ಈ ಸೂಚನೆ ನೀಡಲಾಗಿದೆ. ಇತರ ಪ್ರಯಾಣಿಕರಿಗೆ ಕಿರಿಕಿರಿ ಮಾಡುವಂಥ ಯಾವುದೇ ವರ್ತನೆಗಳನ್ನು ದೆಹಲಿ ಮೆಟ್ರೋ ಒಳಗೆ ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಡಿಎಂಆರ್​ಸಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net