ನವದೆಹಲಿ: ಈಗ ಎಲ್ಲೆಡೆ ಎಲೆಕ್ಟ್ರಿಕ್ ವಾಹನಗಳತ್ತ ಒಲವು ಹೆಚ್ಚಾಗಿದೆ. ದ್ವಿಚಕ್ರವಾಹನ, ಕಾರು ಮಾತ್ರವಲ್ಲದೆ, ಬಸ್ಗಳೂ ಬ್ಯಾಟರಿಯಿಂದ ಚಲಿಸಲಾರಂಭಿಸಿವೆ. ಆದರೆ ಎಲೆಕ್ಟ್ರಿಕ್ ವಾಹನಗಳ ಪೈಕಿ ಅತಿಮುಖ್ಯವಾದದ್ದು ಎಂದರೆ ರೇಂಜ್ ಹಾಗೂ ಚಾರ್ಜಿಂಗ್ ಸಮಯ. ಇವರೆರಡರ ಕಾರಣಕ್ಕೆ ಕೆಲವರು ಎಲೆಕ್ಟ್ರಿಕ್ ವಾಹನಗಳನ್ನು ಕೊಳ್ಳಲು ಹಿಂಜರಿಯುತ್ತಿದ್ದಾರೆ.
ಆದರೆ ಇಲ್ಲೊಂದು ಕಂಪನಿ ತಮ್ಮ ಕಾರಿನ ರೇಂಜೇ ಬೇರೆ ಎನ್ನಲಾರಂಭಿಸಿದೆ. ಅರ್ಥಾತ್, ಈ ಕಾರಿನ ಬ್ಯಾಟರಿ ಫುಲ್ ಚಾರ್ಜ್ ಮಾಡಲು ಬರೀ ಹತ್ತೇ ನಿಮಿಷ ಸಾಕು. ಮಾತ್ರವಲ್ಲ, ಒಮ್ಮೆ ಪೂರ್ತಿ ಚಾರ್ಜ್ ಮಾಡಿದ ಬ್ಯಾಟರಿಯಿಂದ ಈ ಕಾರು 1,200 ಕಿ.ಮೀ. ದೂರ ಚಲಿಸಬಲ್ಲದು. ಇಂಥದ್ದೊಂದು ಕಾರನ್ನು ರೋಡಿಗಿಳಿಸಲಿರುವುದಾಗಿ ಟೊಯೊಟ ಕಂಪನಿ ಹೇಳಿಕೊಂಡಿದೆ.
ಜಪಾನಿನ ದಿಗ್ಗಜ ಆಟೋಮೊಬೈಲ್ ಕಂಪನಿಗಳಲ್ಲಿ ಒಂದಾಗಿರುವ ಟೊಯೊಟ, ಸಾಲಿಡ್ ಸ್ಟೇಟ್ ಬ್ಯಾಟರಿಯಿಂದ ಚಲಿಸಲಿರುವ ಕಾರುಗಳನ್ನು ಮಾರುಕಟ್ಟೆಗೆ ಬಿಡಲು ಯೋಜನೆ ಹಾಕಿಕೊಂಡಿದೆ. ಬರೀ ಹತ್ತೇ ನಿಮಿಷಗಳಲ್ಲಿ ಬ್ಯಾಟರಿ ಪೂರ್ತಿ ಚಾರ್ಜ್ ಆಗಲಿರುವ ಈ ಕಾರಿನ ರೇಂಜ್ 1,200 ಕಿ.ಮೀ. ಅಂದರೆ ಇದು ಒಂದು ಸಲದ ಚಾರ್ಜ್ನಿಂದ 1,200 ಕಿ.ಮೀ. ದೂರ ಚಲಿಸಲಿದೆ ಎಂದು ಕಂಪನಿ ಹೇಳಿದೆ. 2027ರ ಸುಮಾರಿಗೆ ಕಂಪನಿ ಈ ಕಾರನ್ನು ಮಾರುಕಟ್ಟೆಗೆ ಬಿಡುವ ಗುರಿ ಇರಿಸಿಕೊಂಡಿದೆ ಎನ್ನಲಾಗಿದೆ.
ಮೂರನೇ ಮಗುವಾದರೆ 5 ಲಕ್ಷ ರೂ. ಕೊಡ್ತಾರಂತೆ!; ಶಿಕ್ಷಣ-ಚಿಕಿತ್ಸೆಯೂ ಉಚಿತ, ಮದ್ವೆ ಖರ್ಚಿಗೂ ಧನಸಹಾಯ: ಇಲ್ಲಿದೆ ವಿವರ..
ಇದನ್ನು ಕುಡಿದರೆ ಹೃದಯಾಘಾತದ ಸಾಧ್ಯತೆ ತೀರಾ ಕಡಿಮೆ ಅಂತೆ!; ಏನಿದು, ಎಷ್ಟು ಕುಡಿಯಬೇಕು?