

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಜ್ಯದ ಹೆದ್ದಾರಿಗಳಲ್ಲಿ ಸಂಚಾರ ನಿಯಮ ಪಾಲಿಸದೆ ಅಡ್ಡಾದಿಡ್ಡಿ ವಾಹನ ಚಲಾಯಿಸಿದರೇ ಚಾಲನ ಪರವಾನಗಿ (ಡಿಎಲ್) ರದ್ಧಾಗಲಿದೆ. ಈಗಾಗಲೆ ಬೆಂಗಳೂರು ನಗರ ಸೇರಿ ಕಮಿಷನರೇಟ್‌ನಲ್ಲಿ ಜಾರಿಯಲಿದ್ದು, ಇದನ್ನು ರಾಜ್ಯ ವ್ಯಾಪಿ ಪೊಲೀಸ್ ಇಲಾಖೆಗೆ ಜಾರಿಗೆ ತಂದಿದೆ.
ರಾಜ್ಯದಲ್ಲಿ ಪ್ರತಿದಿನ ಸರಾಸರಿ 30 ಗಂಭೀರ ಅಪಘಾತ ಮತ್ತು 91 ಗಂಭೀರವಲ್ಲದ ಅಪಘಾತ ಸಂಭವಿಸಿ 31 ಜನ ಪ್ರಾಣ ಕಳೆದುಕೊಂಡರೆ, 146 ಮಂದಿ ಗಾಯಗೊಳ್ಳುತ್ತಿದ್ದಾರೆ. ಜೂನ್‌ನಲ್ಲಿ 899 ಗಂಭೀರ ಅಪಘಾತ ಸಂಭವಿಸಿ 984 ಮಂದಿ ಮೃತಪಟ್ಟಿದ್ದು, 2,727 ಗಂಭೀರವಲ್ಲದ ಆಕ್ಸಿಡೆಂಟ್‌ನಲ್ಲಿ 4407 ಮಂದಿ ಗಾಯಗೊಂಡಿದ್ದಾರೆ.
ಅದರಲ್ಲಿಯೂ ರಾಷ್ಟ್ರೀಯ ಹೆದ್ದಾರಿಯಲ್ಲಿ 288 ಅಪಘಾತ ಜರುಗಿ 347 ಮಂದಿ ಸಾವಿಗೀಡಾಗಿದ್ದಾರೆ. ರಾಜ್ಯ ಹೆದ್ದಾರಿಯಲ್ಲಿ 261 ಅಪಘಾತದಲ್ಲಿ 280 ಮೃತಪಟ್ಟಿದ್ದಾರೆ. ಇತರೆ ರಸ್ತೆಗಳಲ್ಲಿ 350 ಅಪಘಾತದಲ್ಲಿ 357 ಅಸುನೀಗಿದ್ದಾರೆ. ಅದರಿಂದ ಸಾವು-ನೋವಿನ ಪ್ರಮಾಣ ಇಳಿಸುವ ಸಲುವಾಗಿ ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ವಾಹನ ಚಾಲಕ, ಸವಾರರಿಗೆ ಮಾಡಬೇಕಿದೆ.
ಬೆಂಗಳೂರು-ಮೈಸೂರು ನಡುವಿನ ಎಕ್ಸ್‌ಪ್ರೆಸ್ ಹೈವೇಯಲ್ಲಿ ಕಳೆದ ಎರಡು ದಿನಗಳಿಂದ ಸಂಚಾರ ನಿಯಮ ಕಟ್ಟುನಿಟ್ಟಾಗಿ ಜಾರಿ ಮತ್ತು ಹೆದ್ದಾರಿಯಲ್ಲಿ ಕೆಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಣಾಮ ಅಪಘಾತಗಳ ಸಂಖ್ಯೆ ದಿನೇದಿನೆ ಇಳಿಮುಖವಾಗಿದೆ.
ಇದೆ ರೀತಿ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ರಸ್ತೆ ಮತ್ತು ಸುರಕ್ಷತಾ ವಿಭಾಗ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್‌ಕುಮಾರ್, ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದ್ದಾರೆ.
ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕ್ಯಾಮರಾ ಎಎನ್‌ಪಿಆರ್ (ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ) ಅಳವಡಿಸಲಾಗಿದೆ. ಪುಣೆ- ಬೆಂಗಳೂರು- ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ 72 ಕ್ಯಾಮರಾ ಅಳವಡಿಸಲಾಗಿದೆ.
ಇದೇ ರೀತಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ಸೇರಿ ರಾಜ್ಯದ ಎಲ್ಲ ಹೆದ್ದಾರಿಗಳಲ್ಲಿ ಹಂತ ಹಂತವಾಗಿ ಅಳವಡಿಸಿ ವಾಹನ ಮತ್ತು ಚಾಲಕ ಮೇಲೆ ನಿಗಾವಹಿಸಲಾಗುತ್ತದೆ.
ನಿಯಮ ಉಲ್ಲಂಸಿದ ವಾಹನ ಚಾಲಕ, ಸವಾರರಿಗೆ ದಂಡ ವಿಧಿಸುವ ಜತೆಗೆ ಡಿಎಲ್ ಜಪ್ತಿ ಮಾಡಿ ಪ್ರಾದೇಶಿಕ ಸಾರಿಗೆ ಇಲಾಖೆ(ಆರ್‌ಟಿಒ)ಗೆ ರವಾನೆ ಮಾಡಲಾಗುತ್ತದೆ. ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ಮೊದಲ ಬಾರಿ 3 ತಿಂಗಳು ಡಿಎಲ್ ಅಮಾನತು ಮಾಡಲು ಅವಕಾಶವಿದೆ. ಪದೇ ಪದೆ ಉಲ್ಲಂಸಿದರೇ ಶಾಶ್ವತವಾಗಿ ಡಿಎಲ್ ವಜಾ ಮಾಡಲೂ ಕಾಯ್ದೆಯಲ್ಲಿ ಅವಕಾಶವಿದ್ದು, ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸರು ಮುಂದಾಗಿದ್ದಾರೆ.
ಯಾವ ಕೇಸಿಗೆ ಡಿಎಲ್ ಜಪ್ತಿ
ಡ್ರಂಕ್ ಆ್ಯಂಡ್ ಡ್ರೈವ್, ಅತೀ ವೇಗದ ಚಾಲನೆ, ಐಪಿಸಿ ಸೆಕ್ಷನ್ 304(ಉದ್ದೇಶಪೂರ್ವಕವಲ್ಲದ ಕೊಲೆ), ಅಡ್ಡಾದಿಡ್ಡಿ ವಾಹನ ಚಾಲನೆ, ಶಿಸ್ತುಪಥ ಉಲ್ಲಂಘನೆ, ವ್ಹಿಲಿಂಗ್, ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ, ಸೀಟ್ ಬೆಲ್ಟ್ ರಹಿತ ಚಾಲನೆ, ಹೆಲ್ಮೆಟ್‌ರಹಿತ ಚಾಲನೆ ನಿಯಮ ಉಲ್ಲಂಸುವ ಚಾಲಕ, ಸವಾರರ ಡಿಎಲ್ ಜಪ್ತಿ ಮಾಡಿ ಅಮಾನತು ಮಾಡುವಂತೆ ಆರ್‌ಟಿಒಗೆ ರವಾನೆ ಮಾಡಲಾಗುತ್ತದೆ.
ತಗ್ಗಿದ ಸಾವಿನ ಸಂಖ್ಯೆ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಅಪಘಾತಗಳ ಸಂಖ್ಯೆ ದಿನೇದಿನೆ ಇಳಿಮುಖ ಆಗಿದೆ. ಆಗಸ್ಟ್‌ನಲ್ಲಿ ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವಿಗೀಡಾಗಿದ್ದಾರೆ. ಮೇನಲ್ಲಿ 29 ಮಂದಿ, ಜೂನ್-28 ಮತ್ತು ಜುಲೈನಲ್ಲಿ 8 ಮಂದಿ ಮೃತಪಟ್ಟಿದ್ದರು. ಸಂಚಾರ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಮತ್ತು ಸೂಚನ ಲಕ ಅಳವಡಿಕೆ ಮತ್ತು ಸಾರ್ವಜನಿಕರಲ್ಲಿ ಪೊಲೀಸರು ಜಾಗೃತಿ ಮೂಡಿಸಿದ ಪ್ರತಿಲವಾಗಿ ಅಪಘಾತ ತಗ್ಗಿದೆ.
ಸಂಚಾರ ನಿಯಮ ಉಲ್ಲಂಸುವ ವಾಹನ ಚಾಲಕ, ಸವಾರರ ಡಿಎಲ್ ಜಪ್ತಿ ಮಾಡಿ ಅಮಾನತು ಮಾಡುವಂತೆ ಆರ್‌ಟಿಒಗೆ ಶಿಾರಸ್ಸು ಮಾಡಲಾಗುತ್ತದೆ. ಆದೇಶ ರಾಜ್ಯ ವ್ಯಾಪ್ತಿ ಅನ್ವಯ ಆಗಲಿದೆ.
ಅಲೋಕ್‌ಕುಮಾರ್-ಎಡಿಜಿಪಿ, ರಾಜ್ಯ ರಸ್ತೆ ಮತ್ತು ಸುರಕ್ಷತ ವಿಭಾಗ