

Assembly: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ 11 ಜನ ಮೃತಪಟ್ಟವರ ಬಗ್ಗೆ ರಾಜ್ಯ ವಿಧಾನ ಸಭೆಯಲ್ಲಿ ಚರ್ಚೆ ನಡೆಸುತ್ತಿರುವ ಸಂದರ್ಭದಲ್ಲಿ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಆರ್ಎಸ್ಎಸ್ನ ಗೀತೆಯೊಂದನ್ನು ಹೇಳಿ ಸಭೆಯಲ್ಲಿದ್ದವರಿಗೆ ಅಚ್ಚರಿ ಮೂಡಿದಿದ್ದಾರೆ.
ಕಲಾಪದಲ್ಲಿ ವಿಡಿಯೋ ತೋರಿಸುವಂತೆ "ನಮಸ್ತೆ ಸದಾ ವಸ್ತಲೆ ಮಾತೃಭೂಮಿ" ಎಂಬ ಆರ್ಎಸ್ಎಸ್ನ ಕೆಲವು ಸಾಲುಗಳು ಸದನವನ್ನು ಅಚ್ಚರಿಗೊಳಿಸಿತು.
ಜನಸಾಮಾನ್ಯರ ಮೇಲೆ ಕಾಲ್ತುಳಿತವಾಗಲು ಡಿ.ಕೆ ಶಿವಕುಮಾರ್ ಅವರೇ ನೇರ ಹೊಣೆ. ಇನ್ನು ಆರ್ಸಿಬಿ ತಂಡ ವಿಮಾನ ನಿಲ್ದಾಣಕ್ಕೆ ಬಂದಾಗ ಅವರನ್ನು ಬರಮಾಡಿಕೊಳ್ಳಲು ಇವರು ಹೋಗಿದ್ದರು. ಹಾಗೇ ವಿಮಾನ ನಿಲ್ದಾಣದಿಂದ ಚಿನ್ನಸ್ವಾಮಿ ಕ್ರೀಡಾಂಗಣದುದ್ದಕ್ಕೂ ಕನ್ನಡ ಧ್ವಜವನ್ನು ಬೀಸಿದ್ದಾರೆ ಎಂದು ಬಿಜೆಪಿಗರು ಆರೋಪಿಸಿದ್ದಾರೆ.
ಆರೋಪಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ನಾನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸದಸ್ಯ ಹಾಗೂ ಕೆಎಸ್ಪಿಎ ಕಾರ್ಯದರ್ಶಿ ಸೇರಿದಂತೆ ಅಲ್ಲಿರುವವರು ನನ್ನ ಸ್ನೇಹಿತರು ಎಂದರು. ನಾನು ಜೂನ್ 4ರಂದು ವಿಮಾನ ನಿಲ್ದಾಣಕ್ಕೆ ಹೋಗಿದ್ದೆ, ಕರ್ನಾಟಕ ಧ್ವಜವನ್ನು ಕೂಡಾ ಹಿಡಿದಿದ್ದೇನೆ. ಆಟಗಾರರಿಗೆ ವಿಶ್ ಮಾಡಿದ್ದೇನೆ ಹಾಗೇ ಆರ್ಸಿಬಿ ಕಪ್ಗೆ ಮುತ್ತಿಟ್ಟಿದ್ದೇನೆ. ನಾನು ನನ್ನ ಕೆಲಸವನ್ನು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಈ ವೇಳೆ ಕೆಲವು ಅಪಘಾತಗಳು ಸಂಭವಿಸಿದೆ. ಬೇರೆ ರಾಜ್ಯಗಳಲ್ಲೂ ಈ ರೀತಿ ಘಟನೆಗಳು ನಡೆದಿವೆ. ಅಗತ್ಯವಿದ್ದರೆ, ಘಟನೆಗಳ ಪಟ್ಟಿಯನ್ನು ಓದುತ್ತೇನೆ.
ಈ ವೇಳೆ ಗೃಹ ಸಚಿವ ಜಿ.ಪರಮೇಶ್ವರ್ನೊಂದಿಗೆ ನಾನು ಬೆಳೆದಿದ್ದೇನೆ ಎಂದು ಇವರು ತಿಳಿಸಿದ್ದು, ಈ ಮಾತಿಗೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಶಿವಕುಮಾರ್ ಅವರು ಒಮ್ಮೆ ಆರ್ಎಸ್ಎಸ್ ಚಡ್ಡಿ ಧರಿಸಿದ್ದರು ಎಂದು ನೆನಪಿಸಿದರು. ಇದಕ್ಕೆ ಶಿವಕುಮಾರ್ "ನಮಸ್ತೆ ಸದಾ ವಸ್ತಲೆ ಮಾತೃಭೂಮಿ" ಎಂದು ಹಾಡು ಹೇಳಿ ಸಭೆಯಲ್ಲಿ ರಂಜಿಸಿದ್ದು, ಪ್ರತಿಪಕ್ಷಗಳು ಮೇಜು ಬಡಿಯುವ ಮೂಲಕ ಸಂತೋಷ ಪಟ್ಟರು.
(ಏಜೆನ್ಸೀಸ್)