ಸಂಸತ್ತು ಭದ್ರತಾ ಉಲ್ಲಂಘನೆ: ಸಂಸತ್ತಿನ ಗೋಡೆ ಹತ್ತಿ ಒಳಗೆ ನುಸುಳುತ್ತಿದ್ದ ವ್ಯಕ್ತಿ ಸೆರೆ!| Parliament

parliment
Published on

Parliament : ಸಂಸತ್ತಿನ ಸಂಕೀರ್ಣದ ಭದ್ರತೆಯನ್ನು ಉಲ್ಲಂಘಿಸಿ ವ್ಯಕ್ತಿಯೊಬ್ಬ ಮರವನ್ನು ಬಳಸಿ ಆವರಣ ಗೋಡೆ ಹತ್ತಿರುವ ಘಟನೆ ಶುಕ್ರವಾರ (ಆ.22) ಬೆಳಿಗ್ಗೆ 6:30ಕ್ಕೆ ನಡೆದಿದೆ.

ಈ ವೇಳೆ ಹೊಸ ಸಂಸತ್ತಿನ ಕಟ್ಟಡದ ಗರುಡ ಗೇಟ್​ ಬಳಿ ಸಿಬ್ಬಂದಿಗಳು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

ಸುದ್ದಿಮೂಲಗಳ ಪ್ರಕಾರ , ಅನಾಮಿಕ ವ್ಯಕ್ತಿಯು ರೈಲು ಭವನ ಕಡೆಯಿಂದ ಗೋಡೆ ಹಾರಿ ಒಳನುಗ್ಗಲು ಯಶಸ್ವಿಯಾಗಿದ್ದಾನೆ. ಇನ್ನು ಆತನನ್ನು ಪೊಲೀಸರು ಬಂಧಿಸಿದ್ದು, ಆತ ಹೇಗೆ ಹೆಚ್ಚಿನ ಭದ್ರತಾ ವಲಯಕ್ಕೆ ಪ್ರವೇಶ ಮಾಡಿದ್ದಾನೆ ಎಂಬುದರ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

(ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net