ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ದಾಖಲು! ಮುಂಬೈನ ಎಚ್​ಎನ್​ ರಿಲಯನ್ಸ್​ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ| Mumbai

untitled-design-2025-08-22t104852516-68a7fdde43a87
Published on

Mumbai: ರಿಕೋದ್ಯಮಿಗಳಾದ ಮೂಖೇಶ್​ ಹಾಗೂ ಅನಿಲ್​ ಅಂಬಾನಿ ಅವರ ತಾಯಿ ಕೋಕಿಲಾಬೆನ್ ಅಂಬಾನಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ವಿಮಾನದ ಮೂಲಕ ಮುಂಬೈನ ಎಚ್​ಎನ್​ ರಿಲಯನ್ಸ್​ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿ ಬಂದಿದೆ. ಕೋಕಿಲಾಬೆನ್​ (91) ರಿಲಯನ್ಸ್​ ಸಂಸ್ಥಾಪಕ ದಿವಂಗತ ಧೀರೂಭಾಯಿ ಅಂಬಾನಿ ಅವರ ಹೆಂಡತಿ.

ಇನ್ನು ವಿಡಿಯೋದಲ್ಲಿ ಕುಟುಂಬದವರು ಅವರನ್ನು ರಿಲಯನ್ಸ್​ ಆಸ್ಪತ್ರೆಗೆ ಕೊರೆದೊಯ್ಯುವ ದೃಶ್ಯವನ್ನು ಆನ್​ಲೈನ್​ನಲ್ಲಿ ಪ್ರಸಾರವಾಗುತ್ತಿದ್ದು, ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತವಾಗಿದೆ. ಈ ಬಗ್ಗೆ ವೈದ್ಯಕೀಯ ಸ್ಥಿತಿಯ ನಿಖರವಾದ ಮಾಹಿತಿ ಬಹಿರಂಗವಾಗದಿದ್ದರೂ, ಅವರ ವೃದ್ಯಾಪವು ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸುತ್ತಿದೆ.

ಇಲ್ಲಿಯವರೆಗೂ ಕುಟುಂಬಸ್ಥರು ಕೋಕಿಲಾಬೆನ್ ಅಂಬಾನಿ ಅವರ ಆರೋಗ್ಯದ ಸ್ಥಿತಿಯ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net