

ಬೆಂಗಳೂರು: ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಎಂಬ ಖ್ಯಾತಿಯನ್ನು ಪಡೆದುಕೊಂಡಿರುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ರಾಜ್ಯದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಇತ್ತೀಚೆಗಷ್ಟೇ ಭೇಟಿ ಕೊಟ್ಟಿದ್ದರು. ಒಂದು ದಿನದ ಮಟ್ಟಕ್ಕೆ ಮನಯೊಳಗೆ ಇದ್ದು, ವಾಪಸ್ ಬಂದ ಪ್ರದೀಪ್ ವಿರುದ್ಧ ಇದೀಗ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಬಿಗ್ ಬಾಸ್ ಮನೆಗೆ ಒಬ್ಬ ಶಾಸಕ ಹೋಗುವುದು ಸರಿಯೇ? ಹೋಗಬೇಕಿತ್ತಾ ಎಂಬ ಹಲವು ಪ್ರಶ್ನೆಗಳು ಕೇಳಿಬಂದಿದ್ದು, ಈ ಕುರಿತು ಸ್ವತಃ ಪ್ರದೀಪ್ ಈಶ್ವರ್ ಇಂದು ತಮ್ಮ ಶೈಲಿಯಲ್ಲೇ ಉತ್ತರಿಸಿದ್ದಾರೆ. ಈ ಮಧ್ಯೆ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರನ್ನು ಪ್ರದೀಪ್ ಈಶ್ವರ್ ಅವರು ಬಿಗ್ಬಾಸ್ ಮನೆಯೊಳಗೆ ಪ್ರವೇಶಿಸಿದರ ಬಗ್ಗೆ ಪ್ರಶ್ನಿಸಲಾಯಿತು.
ಈ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, "ಬಿಗ್ ಬಾಸ್ ಕನ್ನಡಕ್ಕೆ ಪ್ರವೇಶಿಸುವುದು ಅವರ ವೈಯಕ್ತಿಕ ಆಯ್ಕೆಯಾಗಿದ್ದು, ಹಾಗೆ ಮಾಡುವುದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ" ಎಂದು ಹೇಳಿದರು.
ಬಿಗ್ಬಾಸ್ ಮನೆಗೆ ಅತಿಥಿಯಾಗಿ ಬಂದ ಶಾಸಕ ಪ್ರದೀಪ್ ಈಶ್ವರ್ಗೆ ರಿಯಾಲಿಟಿ ಶೋ ತಂಡ ಹಣವನ್ನು ಕೊಟ್ಟಿದೆ. ಬಿಗ್ಬಾಸ್ನಿಂದ ಸಿಕ್ಕ ಹಣವನ್ನು ಪ್ರದೀಪ್ ಅನಾಥಾಶ್ರಮಕ್ಕೆ ನೀಡುವುದಾಗಿ ಹೇಳಿದರು. ಸದ್ಯ ಶಾಸಕ ಮನೆಯೊಳಗೆ ಹೋದ ನಂತರ ಮತ್ತು ಹೊರಬಂದ ನಂತರವೂ ಸಾಕಷ್ಟು ಟ್ರೋಲ್ ಮತ್ತು ವಿವಾದಗಳಿಗೆ ಗುರಿಯಾಗಿದ್ದಾರೆ.