ದೇಶ, ಜನತೆಗೋಸ್ಕರ ಮಾಡಿರುವ ದನಿಯನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ತೀರ್ಪು ಬಂದಿದೆ: ಡಿ.ಕೆ. ಶಿವಕುಮಾರ್​

Untitled design - 2023-08-04T173049.638
Published on

ಬೆಂಗಳೂರು: 'ಮೋದಿ ಉಪನಾಮ' ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ಇದೀಗ ಸುಪ್ರೀಂಕೋರ್ಟ್ ಬಿಗ್​ ರಿಲೀಫ್ ನೀಡಿದ್ದು, ಈ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

"ದೇಶದ ಪ್ರಜಾಪ್ರಭುತ್ವ ಉಳಿಸುವ, ನ್ಯಾಯ ಒದಗಿಸುವ ಪೀಠ ಸುಪ್ರೀಂ ಕೋರ್ಟ್. ದೇಶಕ್ಕೋಸ್ಕರ, ಜನತೆಗೋಸ್ಕರ ಮಾಡಿರುವ ದನಿಯನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ತೀರ್ಪು ಹೊರಬಂದಿದೆ. ಜನ ಈಗಾಗಲೇ ಅರಿತುಕೊಂಡಿದ್ದಾರೆ. ಎಲ್ಲರೂ ಭಾರತದತ್ತ ಎದುರು ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂಬುದು ಜನರಿಗೆ ತಿಳಿದಿದೆ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net