

ಬೆಂಗಳೂರು: ಬಿಜೆಪಿ ಸರ್ಕಾರ ಆರಂಭಿಸಿದ್ದ ನೂತನ ವಿವಿಗಳ ಸಾಧಕ ಬಾದಕಗಳನ್ನು ಅಧ್ಯಯನ ಮಾಡಿದ ನಂತರ ನಮ್ಮ ಸರ್ಕಾರ ಈ ವಿವಿಗಳನ್ನು ಹಳೆಯ ವಿವಿಗಳ ಜತೆಗೆ ವಿಲೀನ ಮಾಡುತ್ತೇವೆಯೇ ಹೊರತು, ಸಂಪೂರ್ಣವಾಗಿ ವಜಾ ಮಾಡುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ (DCM DK Shivakumar) ಹೇಳಿದ್ದಾರೆ.
ವಿಪಕ್ಷ ಬಿಜೆಪಿ ನಾಯಕರಾದ ಅಶೋಕ್ ಹಾಗೂ ಅಶ್ವತ್ಥ್ ನಾರಾಯಣ ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿಕೆ. ಶಿವಕುಮಾರ್ (DCM DK Shivakumar), ನಿಮ್ಮ (ಬಿಜೆಪಿ) ಸರ್ಕಾರದ ಅವಧಿಯಲ್ಲಿ ಅಶ್ವತ್ಥ್ ನಾರಾಯಣ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದಾಗ, ನಿಮ್ಮ ಪರಿಕಲ್ಪನೆ ಮೇಲೆ ನೀವು ಈ ಹೊಸ ವಿವಿಗಳನ್ನು ಸ್ಥಾಪಿಸಿದ್ದೀರಿ. ನಾವು ಖಾಸಗಿ ವಿವಿ ಮಾಡಬೇಕಾದರೂ ಕೆಲವು ಮಾನದಂಡಗಳನ್ನು ನಿಗದಿ ಮಾಡಿದ್ದೇವೆ. ವಿದ್ಯಾರ್ಥಿಗಳಿಗೂ ವಿವಿಗಳಿಗೂ ಏನು ಸಂಬಂಧ. ವಿದ್ಯಾರ್ಥಿಗಳು ತಾವುಗಳು ವ್ಯಾಸಂಗ ಮಾಡುತ್ತಿರುವ ಅದೇ ಕಾಲೇಜುಗಳಲ್ಲಿ ವ್ಯಾಸಂಗ ಮುಂದುವರಿಸುತ್ತಾರೆ. ಆದರೆ ಮೈಸೂರು ವಿವಿ, ಮಂಡ್ಯ ವಿವಿ, ಚಾಮರಾಜನಗರ ವಿವಿಗಳನ್ನೇ ಉದಾಹರಣೆಯಾಗಿ ತೆಗೆದುಕೊಡು ನೋಡುವುದಾಗರೆ, ವಿದ್ಯಾರ್ಥಿಗಳು ಮೈಸೂರು ವಿವಿ ಹೆಸರಲ್ಲಿ ಪದವಿ ಪಡೆಯುದಕ್ಕೂ, ಬೇರೆ ಇತರೆ ವಿವಿ ಹೆಸರಲ್ಲಿ ಪದವಿ ಪ್ರಮಾಣಪತ್ರ ಪಡೆಯುವುದಕ್ಕೆ ಎಷ್ಟು ವ್ಯತ್ಯಾಸವಿದೆ.
ಯಡಿಯೂರಪ್ಪನವರ ಪುತ್ರ ಸದನದಲ್ಲಿ ಇದ್ದಾರೆ. ಅವರ ಸಹೋದರಿಯ ಪುತ್ರ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಲು ಮುಂದಾದಾಗ. ಅವರು ಪಿಇಎಸ್ ಶಿಕ್ಷಣ ಸಂಸ್ಧೆಯಲ್ಲಿ ಓದಿದ್ದರು. ಅದು ಉತ್ತಮ ಸಂಸ್ಥೆಯಾದರೂ ಅದು ಅಧಿಕೃತ ವಿವಿಯಲ್ಲ ಎಂಬ ಕಾರಣಕ್ಕೆ ಅವರಿಗೆ ವಿದೇಶಿ ವಿವಿಯಲ್ಲಿ ಪ್ರವೇಶಾತಿ ನಿರಾಕರಿಸಲಾಗಿತ್ತು. ಎಸ್.ಎಂ ಕೃಷ್ಣ ಅವರು ವಿದೇಶಾಂಗ ಸಚಿವರಾಗಿದ್ದಾಗ ಅನೇಕ ಪ್ರಯತ್ನಗಳನ್ನು ಮಾಡಿ ಕೊನೆಗೆ ಅಲ್ಲಿ ಪ್ರವೇಶಾತಿ ಸಿಕ್ಕಿತು. ಇದು ಕೇವಲ ಒಂದು ಉದಾಹರಣೆಯಷ್ಟೇ. ಬೆಂಗಳೂರು ವಿವಿ, ಮೈಸೂರು ವಿವಿ ಪ್ರತಿಷ್ಠಿತ ವಿವಿಗಳಾಗಿವೆ. ಈ ವಿವಿಗಳ ಜಾರಿ ಕಾರ್ಯಸಾಧುವಲ್ಲ ಎಂದು ವಿಲೀನ ಮಾಡುತ್ತಿದ್ದೇವೆಯಷ್ಟೇ. ಈ ವಿಚಾರವಾಗಿ ನಾವು ಸಮಿತಿಯನ್ನು ರಚಿಸಿ ಅಧ್ಯಯನ ನಡೆಸಿದ್ದೇವೆ.
ಡಿಕೆ. ಶಿವಕುಮಾರ್ ಅವರ ಮಾತಿಗೆ ಪ್ರತಿಕ್ರಿಯಿಸುತ್ತ, ಡಿಕೆ. ಶಿವಕುಮಾರ್ ಅವರ ಹೃದಯ ಒಳ್ಳೆಯದೇ ಇರಬಹುದು, ಆದರೆ ಚಲನಚಿತ್ರ ರಂಗದ ಕಲಾವಿದರ ಮೇಲೆ ತೋರಿರುವ ನಟ್ಟು ಬೋಲ್ಟು ಭಾಷೆ ಸರಿಯಲ್ಲ ಎಂದು ತಿಳಿಸಿದರು. ಈ ವೇಳೆ ಮಧ್ಯೆ ಮಾತನಾಡಿದ ಅಶ್ವತ್ಥ್ ನಾರಾಯಣ ಅವರು ಇಂತಹ ಭಾಷೆ ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಬಳಸುವಂತಹದ್ದು, ಕರ್ನಾಟಕದಲ್ಲಿ ಬಳಸಬಾರದು ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ. ಶಿವಕುಮಾರ್ (DCM DK Shivakumar), ನೀವು ರಾಮನಗರದಲ್ಲಿ ಬಳಸಿದ ಭಾಷೆ ಎಂತದ್ದು ಗಂಡಸ್ತನದ ಬಗ್ಗೆ ಮಾತನಾಡಿದ್ದು ಸರಿಯೇ ಗಂಡಸ್ತನದ ಬಗ್ಗೆ ಮಾತನಾಡಿ ಅಲ್ಲಿ ಒಂದು ಪಕ್ಷದ ಕಚೇರಿ ಆರಂಭಿಸಲು ನಿಮ್ಮಿಂದ ಸಾಧ್ಯವಾಗಲಿಲ್ಲ ಎಂದು ತಿರುಗೇಟು ನೀಡಿದರು.