

ಡೆಹ್ರಾಡೂನ್: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೈನಿಕರೊಂದಿಗೆ ದೀಪಾವಳಿ(Diwali )ಯನ್ನು ಆಚರಿಸಿದರು. ಗುರುವಾರ ಗರ್ವಾಲ್ ರೈಫಲ್ಸ್ ಯೋಧರೊಂದಿಗೆ ದೀಪಾವಳಿ ಆಚರಿಸಿ ಸಂಭ್ರಮಿಸಿದರು.
ಪೌರಿಯಲ್ಲಿ ಸೈನಿಕರೊಂದಿಗೆ ದೀಪಾವಳಿ ಮಿಲನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ದೇಶ ರಕ್ಷಣೆಗೆ ಮುಡಿಪಾಗಿಟ್ಟ ಸೈನಿಕರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ದೇಶದಾದ್ಯಂತ ಜನರು ಸುರಕ್ಷಿತವಾಗಿ ದೀಪಾವಳಿಯನ್ನು ಆಚರಿಸುತ್ತಿದ್ದಾರೆ ಎಂದರೆ ಅದು ನಮ್ಮ ಸೈನಿಕರ ಕರ್ತವ್ಯನಿಷ್ಠೆಯಿಂದ ಸಾಧ್ಯವಾಗಿದೆ ಎಂದರು.
ಈ ವೇಳೆ ಮಾತನಾಡಿದ ಅವರು, ದೇಶಸೇವೆಗೆ ತಮ್ಮ ಜೀವವನ್ನಢ ಮುಡಿಪಾಗಿಟ್ಟಿರುವ ಸೈನಿಕರು ಹಬ್ಬದ ಸಮಯದಲ್ಲಿ ಒಬ್ಬರು ಕುಟುಂಬದಿಂದ ದೂರವಿರುವುದು ಅವರ ಕರ್ತವ್ಯ ಮತ್ತು ನಿಷ್ಠೆಯ ಉತ್ತುಂಗವಾಗಿದೆ ಎಂದರು.
ಭಾರತಮಾತೆಯನ್ನು ರಕ್ಷಿಸಲು ಗಡಿಯಲ್ಲಿ ನಿಯೋಜನೆಗೊಂಡಿರುವ ನಮ್ಮ ವೀರ ಸೈನಿಕರು ಹಗಲಿರುಳು ಶ್ರಮಿಸುತ್ತ ತ್ಯಾಗ, ಬಲಿದಾನಗಳನ್ನು ಮಾಡುತ್ತಿದ್ದಾರೆ. ನಿಮ್ಮೆಲ್ಲರ ಉತ್ಸಾಹ ನೋಡಿ ನನ್ನಲ್ಲೂ ಹೊಸ ಚೈತನ್ಯ ಹರಿಯುತ್ತಿದೆ ಎಂದರು.