Jai Hanuman : ಫಸ್ಟ್ ಲುಕ್ ಬಿಡುಗಡೆ.. 'ಹನುಮಂತನಾಗಲಿದ್ದಾನೆ' ಕನ್ನಡಿಗ ರಿಷಬ್ ಶೆಟ್ಟಿ!

Jai Hanuman
Published on

ಹೈದರಾಬಾದ್​: 'ಹನುಮಾನ್​' ಸಿನಿಮಾದ ಭರ್ಜರಿ ಯಶಸ್ಸಿನ ನಂತರ 'ಜೈ ಹನುಮಾನ್'(Jai Hanuman) ಸೀಕ್ವೆಲ್ ಗೆ ನಿರೀಕ್ಷೆ ಹೆಚ್ಚಿದೆ. ಅದರಲ್ಲೂ ಈ ಚಿತ್ರದಲ್ಲಿ ಹನುಮಂತನ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬುದಕ್ಕೆ ಹಲವು ಸ್ಟಾರ್ ಹೀರೋಗಳ ಹೆಸರು ಕೇಳಿಬಂದಿತ್ತು. ಹನುಮಂತನ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬುದನ್ನು ನಿರ್ಮಾಪಕರು ಅಂತಿಮವಾಗಿ ಬಹಿರಂಗಪಡಿಸಿದ್ದಾರೆ.

ನಿರ್ದೇಶಕ ಪ್ರಶಾಂತ್ ವರ್ಮಾ ಪ್ಯಾನ್-ಇಂಡಿಯಾ ಬ್ಲಾಕ್‌ಬಸ್ಟರ್ 'ಹನುಮಾನ್' ನಿರ್ಮಿಸಿದ ನಂತರ ಬಹು ನಿರೀಕ್ಷಿತ 'ಜೈ ಹನುಮಾನ್' ಸೀಕ್ವೆಲ್‌ಗಾಗಿ ಪೌರಾಣಿಕ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್‌ನೊಂದಿಗೆ ಕೈಜೋಡಿಸಿದ್ದಾರೆ. ಈ ಅತ್ಯಾಕರ್ಷಕ ಹೊಸ ಯೋಜನೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇದರೊಂದಿಗೆ 'ಜೈ ಹನುಮಾನ್' ಚಿತ್ರದ ರೂಪವೇ ಬದಲಾಗಿದೆ.

ಅಲ್ಲದೇ ಈ ಚಿತ್ರದಲ್ಲಿ ಹನುಮಂತನ ಪಾತ್ರದಲ್ಲಿ ‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಈಗಾಗಲೇ ಹೊರಬಿದ್ದಿದೆ. ದೀಪಾವಳಿ ಸ್ಪೆಷಲ್ ಆಗಿ ಹನುಮಂತನ ಫಸ್ಟ್ ಲುಕ್ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ.

ಮೊದಲಿನಿಂದಲೂ ಹನುಮಂತ ಯಾರಾಗಲಿದ್ದಾರೆ ಎಂಬ ಕುತೂಹಲವಿತ್ತು. ಈಗ ರಿಷಬ್ ಶೆಟ್ಟಿಯನ್ನು ಫೈನಲ್ ಮಾಡಿದ್ದಾರೆ. ‘ಕಾಂತಾರ’ ಸಿನಿಮಾದ ಮೂಲಕ ರಾಷ್ಟ್ರಮಟ್ಟದಲ್ಲಿ ಜನಮನ್ನಣೆ ಗಳಿಸಿ ರಾಷ್ಟ್ರಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ ಆಗಮನದಿಂದ ಈ ಸಿನಿಮಾದ ನಿರೀಕ್ಷೆ ಇಮ್ಮಡಿಯಲ್ಲ, ಮೂರು ಪಟ್ಟು ಹೆಚ್ಚಿದೆ ಎಂಬ ಮಾತುಗಳು ಇಂಡಸ್ಟ್ರಿಯಲ್ಲಿ ಕೇಳಿ ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net