ಜಿಲ್ಲೆಯ ಮಾದರಿ ಗುರುಭವನ

BIRUR gurubhavana
ಬೀರೂರು ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಗುರುಭವನ.
Published on

ಬೀರೂರು: ಬೀರೂರು ಶೈಕ್ಷಣಿಕ ವಲಯ ವ್ಯಾಪ್ತಿಯಲ್ಲಿ 2009ರಲ್ಲಿ ಅಂದಿನ ಬಿಇಒ ನೇತೃತ್ವದಲ್ಲಿ ಶಿಕ್ಷಕರ ಸಂಘಗಳ ಸಹಭಾಗಿತ್ವದೊಂದಿಗೆ ವಲಯ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ಸಹಕಾರದಲ್ಲಿ ಶಂಕುಸ್ಥಾಪನೆಗೊಂಡ ಗುರುಭವನ ಕಟ್ಟಡ 2015ರಲ್ಲಿ ಲೋಕಾರ್ಪಣೆಗೊಂಡು ಇಂದಿಗೂ ಉತ್ತಮ ಸೇವೆ ಸಲ್ಲಿಸುತ್ತಿದೆ.

ವಿಸ್ತಾರವಾದ ಸಭಾಂಗಣ ಸಹಿತ ಅವಶ್ಯಕ ಮೂಲ ಸೌಕರ್ಯವನ್ನು ಕಟ್ಟಡ ಒಳಗೊಂಡಿದೆ. ಶಿಕ್ಷಕರ ಕಾರ್ಯಾಗಾರ, ತರಬೇತಿ ಸೇರಿ ಶಿಕ್ಷಕರ ಶೈಕ್ಷಣಿಕ ಚಟುವಟಿಕೆಗಳ ಕಾರ್ಯಕ್ರಮಗಳ ಆಯೋಜನೆಗೆ ವ್ಯವಸ್ಥಿತವಾಗಿದೆ. ಜಿಲ್ಲೆಯಲ್ಲೇ ಮಾದರಿಯಾ ಭವನ 1000 ಆಸನ ವ್ಯವಸ್ಥೆ ಹೊಂದಿದೆ. ಧ್ವನಿವರ್ಧಕ ಹಾಗೂ ಉತ್ತಮ ವೇದಿಕೆ ಹೊಂದಿದೆ. ಶೌಚಗೃಹ ಜೋಡಣೆಯಾಗಿರುವ 8 ಕೋಣೆಗಳನ್ನು ಒಳಗೊಂಡಿರುವ ಗುರುಭವನದಲ್ಲಿ ಕಾರ್ಯಕ್ರಮ ನಿಮಿತ್ತ ತಂಗುವವರಿಗೆ ವ್ಯವಸ್ಥೆ ಮಾಡಲಾಗಿದೆ. ಭವನಕ್ಕಾಗಿ ಕೊಳವೆಬಾವಿ ಕೊರೆಸಿದ್ದು, ಕುಡಿಯುವ ನೀರಿನ ತೊಂದರೆ ಇಲ್ಲ.
ಗುರುಭವನವನ್ನು ಶಿಕ್ಷಕರ ಕಾರ್ಯಾಗಾರದ ಜತೆಗೆ ಅವರ ವೈಯಕ್ತಿಕ ಕಾರ್ಯಕ್ರಮಗಳಿಗೂ ರಿಯಾಯಿತಿ ದರದಲ್ಲಿ ಬಾಡಿಗೆ ನೀಡುವ ಮತ್ತು ಖಾಸಗಿಯವರಿಗೂ ಅನುಮತಿ ಮೇರೆಗೆ ಬಾಡಿಗೆ ನೀಡುವ ಭವನ ಜಿಲ್ಲೆಯಲ್ಲೇ ಮಾದರಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಕಾರ್ಕ್ರಮಗಳು ಹೆಚ್ಚಾಗಿ ನಡೆಯುತ್ತಿದ್ದು, ಭವನಕ್ಕೆ ಅಡುಗೆ ಕೋಣೆ ಮತ್ತು ಊಟದ ಹಾಲ್ ಅವಶ್ಯವಿದೆ. ಗುರುಭವನದ ಆರಂಭದಿಂದಲೂ ಜನಪ್ರತಿನಿಧಿಗಳ ಮತ್ತು ಸರ್ಕಾರದ ಸ್ಪಂದನೆ ಉತ್ತಮವಾಗಿದ್ದು, ಇಂದಿಗೂ ಅದು ಮುಂದುವರಿಯುತ್ತಿದೆ.
ಇತ್ತೀಚೆಗೆ ನಡೆದ ನೂತನ ಶಾಸಕರ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಆನಂದ್ ಅವರು ಭವನಕ್ಕೆ ಅಡುಗೆ ಮನೆ ಹಾಗೂ ಊಟದ ಹಾಲ್ ನಿರ್ಮಿಸಲು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಬೀರೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಗಂಗಾಧರ್ ವಿಜಯವಾಣಿಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net