ಜಿಲ್ಲಾ ನ್ಯಾಯಾಧೀಶ ಹುದ್ದೆಗಳ ಸಂದರ್ಶನ ಮುಂದೂಡಿಕೆ

High Court vvani
Published on

ಬೆಂಗಳೂರು: 21 ಜಿಲ್ಲಾ ನ್ಯಾಯಾಧೀಶರ ಹುದ್ದೆಗಳ ನೇಮಕಾತಿಗೆ ಜು.3ರಂದು ನಡೆಯಬೇಕಿದ್ದ ಸಂದರ್ಶನವನ್ನು ಹೈಕೋರ್ಟ್ ಮುಂದೂಡಿದೆ.

ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ನಿರ್ದೇಶನದ ಮೇರೆಗೆ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬದಾಮಿಕರ್ ಪ್ರಕಟಣೆ ಹೊರಡಿಸಿದ್ದು, ಪರಿಷ್ಕೃತ ದಿನಾಂಕ-ಸಮಯವನ್ನು ಮುಂದಿನ ದಿನಗಳಲ್ಲಿ ಹೈಕೋರ್ಟ್ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ. ಸಂದರ್ಶನಕ್ಕೆ ಅರ್ಹರಾಗಿದ್ದ ಅಭ್ಯರ್ಥಿಗಳ ಪಟ್ಟಿಯನ್ನು ಜೂ.25ರಂದು ಪ್ರಕಟಿಸಿದ್ದ ಹೈಕೋರ್ಟ್, ಜು.3ರ ಮಧ್ಯಾಹ್ನ 2.30ಕ್ಕೆ ಸಂದರ್ಶನ ನಿಗದಿಪಡಿಸಿತ್ತು.

ಕಲಬುರಗಿ ಪೀಠದ ಕಲಾಪ ಅಮಾನತು: ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ಹೈಕೋರ್ಟ್ ಸಂಕೀರ್ಣ ಸ್ಯಾನಿಟೈಸ್ ಮಾಡಲಿಕ್ಕಾಗಿ ಬುಧವಾರ ಮಧ್ಯಾಹ್ನ 1.30ರಿಂದ ಗುರುವಾರ ಮಧ್ಯಾಹ್ನ 2.30ರವರೆಗೆ ಕಲಬುರಗಿ ನ್ಯಾಯಪೀಠದ ಕಲಾಪ ಹಾಗೂ ಆಡಳಿತ ಕಾರ್ಯಗಳನ್ನು ಅಮಾನತು ಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net