More

    ಅಧಿಕಾರ ನಷ್ಟದ ಅಪಾಯಕ್ಕೆ ಸಿಲುಕಿರುವ ಓಲಿ ಸಹಾಯಕ್ಕೆ ಒಂದಾದ ಇಮ್ರಾನ್​, ಜಿನ್​ಪಿಂಗ್​

    ನವದೆಹಲಿ: ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಭಾರತ ಹುನ್ನಾರ ನಡೆಸಿದ ಎಂದು ತಾವು ಮಾಡಿರುವ ಆರೋಪಕ್ಕೆ ಸಾಕ್ಷ್ಯ ಒದಗಿಸಿ, ಇಲ್ಲವೇ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಿರಿ ಎಂದು ನೇಪಾಳ ಕಮ್ಯುನಿಸ್ಟ್​ ಪಕ್ಷ ಕೆ.ಪಿ. ಶರ್ಮ ಓಲಿ ಅವರಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಇದರ ಬೆನ್ನಲ್ಲೇ ಅವರ ಬೆಂಬಲಕ್ಕೆ ನಿಲ್ಲಲು ಪಾಕ್ ಪ್ರಧಾನಿ ಇಮ್ರಾನ್​ ಖಾನ್​ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಒಂದಾಗಿದ್ದಾರೆ.

    ಶನಿವಾರ ನಡೆದ ನೇಪಾಳ ಕಮ್ಯುನಿಸ್ಟ್​ ಪಕ್ಷದ ಸಭೆಯಲ್ಲಿ ತಮ್ಮನ್ನು ಪದಚ್ಯುತಗೊಳಿಸಲು ಭಾರತ ಹುನ್ನಾರ ನಡೆಸಿದೆ. ಲಿಂಪಿಯಾಧುರಾ, ಲಿಪುಲೇಖ್​ ಮತ್ತು ಕಾಲಾಪಾನಿ ಪ್ರದೇಶಗಳನ್ನು ಒಳಗೊಂಡಂತೆ ಪರಿಷ್ಕೃತ ನಕ್ಷೆ ರೂಪಿಸಿದ್ದಕ್ಕಾಗಿ ತಮ್ಮನ್ನು ಪದಚ್ಯುತಗೊಳಿಸಲು ಪಕ್ಷದ ಮುಖಂಡರು ಭಾರತದೊಂದಿಗೆ ಕೈಜೋಡಿಸಿದ್ದಾರೆ ಎಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಓಲಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಆರೋಪಗಳಿಗೆ ಸೂಕ್ತ ಸಾಕ್ಷಾಧಾರ ಒದಗಿಸಬೇಕು. ಇಲ್ಲವೇ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಪಕ್ಷದ ಮುಖಂಡರು ಓಲಿಗೆ ತಾಕೀತು ಮಾಡಿದ್ದರು.

    ಇದನ್ನೂ ಓದಿ: ಕೋವಿಡ್​ನಿಂದ ಯಾವುದೇ ರಾಷ್ಟ್ರವೂ ಸುರಕ್ಷಿತವಾಗಿಲ್ಲ, ನಿಮ್ಮ ಹುಷಾರಿನಲ್ಲಿ ನೀವಿರಿ

    ಇಂಥ ಇಕ್ಕಟ್ಟಿನ ಸಂದರ್ಭದಲ್ಲೇ ನೇಪಾಳದ ಪ್ರಧಾನಿಯೊಂದಿಗೆ ಮಾತನಾಡುವುದಿದೆ. ದೂರವಾಣಿ ಮೂಲಕ ಮಾತನಾಡಲು ಬಯಸಿದ್ದೇನೆ. ಇದಕ್ಕಾಗಿ ಸೂಕ್ತ ಸಮಯವನ್ನು ನಿಗದಿಗೊಳಿಸಿ ಎಂದು ನೇಪಾಳದ ವಿದೇಶಾಂಗ ಸಚಿವಾಲಯಕ್ಕೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಸಂದೇಶ ರವಾನಿಸಿದ್ದಾರೆ. ಸಾಧ್ಯವಾದಷ್ಟು ಗುರುವಾರ ಮಧ್ಯಾಹ್ನ 12.30ಕ್ಕೆ (ನೇಪಾಳದ ಸಮಯ) ಸಮಯ ನಿಗದಿಪಡಿಸುವಂತೆಯೂ ಸ್ವತಃ ಅವರೇ ಸೂಚಿಸಿದ್ದಾರೆ.

    ಕರಾಚಿಯ ಷೇರು ವಿನಿಮಿಯ ಕೇಂದ್ರದ ಮೇಲೆ ಉಗ್ರರ ದಾಳಿಗೆ ಭಾರತವೇ ಕಾರಣ ಎಂದು ಆರೋಪಿಸಿದ ಬೆನ್ನಲ್ಲೇ ಇಮ್ರಾನ್​ ಖಾನ್​ ನೇಪಾಳ ಪ್ರಧಾನಿಗೆ ಇಂಥ ಸಂದೇಶ ರವಾನಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

    ಲಡಾಖ್​ನಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ನೇಪಾಳ ಮತ್ತು ಪಾಕಿಸ್ತಾನದ ಪ್ರಧಾನಿಗಳ ದೂರವಾಣಿ ಮಾತುಕತೆ ನಡೆಯುತ್ತಿರುವುದು ಕಾಕತಾಳೀಯ ಎನ್ನಲಾಗುತ್ತಿದೆ.

    ಹಳೆಯ ಪ್ರೇಮಿ ಹತ್ತಾರು ಬಾರಿ ಇರಿದು ಆಕೆಯನ್ನು ಕೊಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts