ಸಾಫ್ಟ್‌ವೇರ್‌ ಇಂಜಿನಿಯರ್‌ ಮನೆಯಲ್ಲಿ ಕಳ್ಳತನ ಮಾಡುವಂತಹ ವಸ್ತುಗಳೇನೂ ಇಲ್ಲ…ತಗೋಳಿ ಎಂದು 500 ರೂ. ಇಟ್ಟು ಹೋದ ಒಳ್ಳೆ ಕಳ್ಳ!

home
ಸಾಂದರ್ಭಿಕ ಚಿತ್ರ
Published on

ನವದೆಹಲಿ: ಕಳ್ಳ ಎಂದರೆ ಖದ್ದು ಪರಾರಿಯಾಗುತ್ತೇನೆಂದು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಕಳ್ಳ ಕದಿಯಲು ಯೋಗ್ಯವಾದ ವಸ್ತುವೇನೂ ಸಿಗದಿದ್ದಕ್ಕೆ ಮನನೊಂದ ಕಳ್ಳರ ತಂಡವೊಂದು 500 ರೂ.ಗಳ ನೋಟನ್ನು ಅವರ ಮನೆ ಬಾಗಿಲಿಗೆ ಬಿಟ್ಟು ಹೋಗಿದೆ.

ರೋಹಿಣಿಯಲ್ಲಿರುವ ಸಾಫ್ಟ್‌ವೇರ್‌ ಇಂಜಿನಿಯರ್‌ ನಿವಾಸದಲ್ಲಿ ಕದಿಯಲು ಯೋಗ್ಯವಾದ ವಸ್ತುವೇನೂ ಸಿಗದಿದ್ದಕ್ಕೆ ಮನನೊಂದ ಕಳ್ಳರ ತಂಡವೊಂದು 500 ರೂ.ಗಳ ನೋಟನ್ನು ಅವರ ಮನೆ ಬಾಗಿಲಲ್ಲಿ ಬಿಟ್ಟು ಹೋಗಿದ್ದಾನೆ. ಈ ಘಟನೆ ದೆಹಲಿಯ ರೋಹಿಣಿಯ ಸೆಕ್ಟರ್ 8 ರಲ್ಲಿ ನಡೆದಿದೆ. ಈ ಬಗ್ಗೆ ದೂರು ಬಂದಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದಿದೆ.

ಉತ್ತರ ರೋಹಿಣಿ ಪೊಲೀಸ್ ಠಾಣೆಯ ಪೊಲೀಸ್ ತಂಡವು ಸ್ಥಳಕ್ಕೆ ಆಗಮಿಸಿ 80 ವರ್ಷದ ದೂರುದಾರರನ್ನು ಭೇಟಿ ಮಾಡಿದ್ದಾರೆ. ಜುಲೈ 19 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಅವರು ಮತ್ತು ಅವರ ಪತ್ನಿ ಗುರ್ಗಾಂವ್‌ಗೆ ಅಲ್ಲಿ ವಾಸಿಸುವ ಮಗನನ್ನು ಭೇಟಿಯಾಗಲು ಹೋಗಿದ್ದರು ಎಂದು ದೂರುದಾರರು ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ, ಕಳ್ಳರು ತಮ್ಮ ಮನೆಗೆ ನುಗ್ಗಿರುವ ಬಗ್ಗೆ ಅವರ ನೆರೆಹೊರೆಯವರು ಕರೆ ಮಾಡಿ ತಿಳಿಸಿದ್ದಾರೆ. ಮನೆಗೆ ಹಿಂತಿರುಗಿ ನೋಡಿದಾಗ ಮುಖ್ಯ ಗೇಟ್‌ನ ಬೀಗ ಒಡೆದಿರುವುದನ್ನು ಗಮನಿಸಿದೆ. ಆದರೆ ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡದ ಕಾರಣ ಅವರ ಮನೆಯಲ್ಲಿ ಏನೂ ಕಾಣೆಯಾಗಿರಲಿಲ್ಲ. ಆದರೆ 500 ರೂ ನೋಟು ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net