More

    1 ಲೀ.ಗಿಂತ ಕಡಿಮೆ ನೀರಿನ ಬಾಟಲ್‌ ಬಳಕೆ, ಉತ್ಪಾದನೆ ನಿಷೇಧ: ಈ ಹೊಸ ನಿಯಮ ಜಾರಿ ಯಾವಾಗ?

    ಗುವಾಹಟಿ: ಅಸ್ಸಾಂ ಸರ್ಕಾರವು ಅಕ್ಟೋಬರ್ 2 ರಿಂದ 1 ಲೀಟರ್‌ಗಿಂತ ಕಡಿಮೆ ಪ್ರಮಾಣ ಪ್ಯಾಕ್‌ ಮಾಡಿದ ನೀರಿನ ಬಾಟಲ್‌ಗಳ ಬಳಕೆಯನ್ನು ನಿಷೇಧಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

    ಇದನ್ನೂ ಓದಿ: ಬಿರಿಯಾನಿ ತಿಂದ ನಂತರ ನಿಮಗೆ ಬಾಯಾರಿಕೆಯಾಗಲು ಕಾರಣವೇನು ಗೊತ್ತಾ?

    ಮುಖ್ಯಮಂತ್ರಿ ಹಿಮಂತ ಬಿಸ್ವಾಸ್ ಶರ್ಮಾ ಮಾತನಾಡಿ, ” 1 ಲೀಟರ್‌ಗಿಂತ ಕಡಿಮೆ ಪ್ರಮಾಣ ಪ್ಯಾಕ್‌ ಮಾಡಿದ ನೀರಿನ ಬಾಟಲ್‌ಗಳ ಬಳಕೆಯನ್ನು ಹಾಗೂ ನೀರಿನ ಬಾಟಲಿಗಳ ಉತ್ಪಾದನೆ ಮತ್ತು ಬಳಕೆಯನ್ನು ನಿಷೇಧಿಸಲು ಕ್ಯಾಬಿನೆಟ್ ನಿರ್ಧರಿಸಿದೆ. ಜತೆಗೆ 2024ರ ಅಕ್ಟೋಬರ್‌ನಿಂದ 2 ಲೀ.ಗಿಂತ ಕಡಿಮೆ ಪ್ರಮಾಣದ ಪ್ಯಾಕ್‌ ಮಾಡಿದ ನೀರಿನ ಬಾಟಲ್‌ಗಳ ಮಾರಾಟವನ್ನೂ ನಿಷೇಧಿಸಲು ನಿರ್ಧರಿಸಲಾಗಿದೆ ”ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: “ನಂದ ಲವ್ಸ ನಂದಿತಾ” ನಟಿಗೆ ಇದೆ ವಿಚಿತ್ರ ಕಾಯಿಲೆ; ನಿದ್ರೆ ಬರಲ್ಲ.. ವ್ಯಾಯಾಮ ಮಾಡುವಂತಿಲ್ಲ!

    ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ಕಾಯ್ದೆ, 2021ರ ಅನ್ವಯ ಈ ನಿಯಮ ಜಾರಿಗೊಳಿಸಲಾಗುತ್ತಿದೆ. ಪ್ಲಾಸ್ಟಿಕ್‌ ತ್ಯಾಜ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಜತೆಗೆ, ರಾಜ್ಯದಲ್ಲಿ ಏಕಬಳಕೆಯ ಪ್ಲಾಸ್ಟಿಕ್‌ ಬಳಕೆಯನ್ನೂ ಪೂರ್ಣ ಪ್ರಮಾಣದಲ್ಲಿ ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಶರ್ಮಾ ಪ್ರಕಟಿಸಿದ್ದಾರೆ.

    ಇದನ್ನೂ ಓದಿ:  ಹೆಂಡತಿ ಮಕ್ಕಳನ್ನು ಹೊಂದಲು ಸಾಧ್ಯವಿಲ್ಲ ಎಂದು ತಿಳಿದ ನಂತರ ಮಗುವಿಗೆ ಜನ್ಮ ಕೊಟ್ಟ ಪತಿ!

    ಮುಖ್ಯಮಂತ್ರಿರ್ ದಕ್ಷ ಪೋಹರ್ ಸೋನಿ/ಮುಖ್ಯಮಂತ್ರಿ ಸಂಚಯ್ ಪೋಹರ್ ಅಸೋನಿ ಅಡಿಯಲ್ಲಿ ಅಸ್ಸಾಂನ ಅಂದಾಜು 50 ಲಕ್ಷ ಕಡಿಮೆ ಬೆಲೆಯ ಮನೆಗಳಿಗೆ ₹ 130 ಕೋಟಿ ಅಂದಾಜು ವೆಚ್ಚದಲ್ಲಿ ನಾಲ್ಕು 9-ವ್ಯಾಟ್ ಎಲ್‌ಇಡಿ ಬಲ್ಬ್‌ಗಳನ್ನು ಉಚಿತವಾಗಿ ವಿತರಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ ಎಂದು ಅವರು ಹೇಳಿದರು.

    ಟ್ರಾಫಿಕ್ ರೂಲ್ಸ್​​​ ಕಿರಿಕಿರಿಯಿಂದ ಬೈಕ್​​ನ ಅಂತ್ಯಕ್ರಿಯೆ ಮಾಡಿದ ಸವಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts