ಅಂಗವಿಕಲೆಯನ್ನು ಮೆಟ್ಟಿಲು ಮೂಲಕ ಕರಿಸಿಕೊಂಡ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿ: ಮದುವೆಯಾಗಲು ಬಂದಿದ್ದ ಮಹಿಳೆ ಆರೋಪ

disabled girl
Published on

ಮಹಾರಾಷ್ಟ್ರ: ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಲು ಹೋದ ಅಂಗವಿಕಲ ಮಹಿಳೆಗೆ ಕಹಿ ಅನುಭವವಾಗಿದೆ. ಇದನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ, ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.

ಅಂಗವಿಕಲರ ಹಕ್ಕುಗಳ ಕಾರ್ಯಕರ್ತೆ ಹಾಗೂ ರೂಪದರ್ಶಿ ವಿರಾಲಿ ಮೋದಿ ಇತ್ತೀಚೆಗೆ ಮುಂಬೈನ ಖಾರ್ ನಲ್ಲಿರುವ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾದರು. ರಿಜಿಸ್ಟ್ರಾರ್ ಕಚೇರಿಯಲ್ಲಿ ಲಿಫ್ಟ್ ಇಲ್ಲ ಎಂದು ಮದುವೆಯಾಗಲು ಬಂದ ಅಂಗವಿಕಲ ಮಹಿಳೆಯನ್ನು ಎರಡನೇ ಮಹಡಿಗೆ ಕರಿಸಿಕೊಂಡ ಘಟನೆ ವರದಿಯಾಗಿದೆ. ಅಲ್ಲಿನ ಕಹಿ ಅನುಭವವನ್ನು ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಂಗಲವಿಕಲ ಮಹಿಳೆಯನ್ನು ಕಚೇರಿಗೆ ಕರೆಸಿಕೊಳ್ಳಲಾಗಿದ್ದು ಅಧಿಕಾರಿಗಳು ಕೆಳಗಿಳಿದು ಬಂದಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಟ್ವೀಟ್​​ನಲ್ಲಿ ಏನಿದೆ?: 'ದಯವಿಟ್ಟು ನನಗೆ ಹೇಳಿ. ನಾನು ಅಂಗವಿಕಲ. ನಾನು 2023 ಅಕ್ಟೋಬರ್​ 16 ರಂದು ಖಾರ್ ಮುಂಬೈನಲ್ಲಿರುವ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾದೆ. ಲಿಫ್ಟ್ ಇಲ್ಲ. ಕಚೇರಿ 2 ನೇ ಮಹಡಿಯಲ್ಲಿದೆ. ಅವರು ಸಹಿಗಾಗಿ ಕೆಳಗೆ ಬರುವುದಿಲ್ಲ ಎಂದರು. ನಾನು ಮದುವೆಯಾಗಲು ಎರಡನೇ ಮಹಡಿಯ ಮೆಟ್ಟಿಲು ಹತ್ತಬೇಕಾಗಿತ್ತು. ನೇಮಕಾತಿಗೆ ಮುಂಚಿತವಾಗಿ ನನ್ನ ಅಂಗವೈಕಲ್ಯವನ್ನು ನಾನು ನನ್ನ ಏಜೆಂಟರಿಗೆ ತಿಳಿಸಿದ್ದರೂ ಸಹ ಯಾರೂ ಸಹಾಯ ಮಾಡಲು ಮುಂದಾಗಲಿಲ್ಲ. ಆಕ್ಸೆಸಿಬಲ್ ಇಂಡಿಯಾ ಅಭಿಯಾನ ಏನಾಯಿತು ಎಂದು ವಿರಾಲಿ ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರವನ್ನು ಪ್ರಶ್ನೆ ಮಾಡಿದ್ದಾರೆ. "ಇದು ಹೇಗೆ ನ್ಯಾಯಯುತವಾಗಿದೆ? ನಾನು ಗಾಲಿಕುರ್ಚಿ ಬಳಕೆದಾರರಾಗಿರುವುದರಿಂದ ನನಗೆ ಮದುವೆಯಾಗುವ ಹಕ್ಕಿಲ್ಲವೇ? ಎಂದು ವಿರಾಲಿ ಮೋದಿ ತಮ್ಮ ಮದುವೆ ಪ್ರಮಾಣಪತ್ರದ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿಕ್ರಿಯಿಸಿದ ಸಚಿವರು: ವಿರಾಲಿ ಟ್ವೀಟ್ ವೈರಲ್ ಆದ ನಂತರ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರತಿಕ್ರಿಯಿಸಿದ್ದಾರೆ. ಮೊದಲಿಗೆ ಹೊಸ ಆರಂಭಕ್ಕೆ ಅಭಿನಂದನೆಗಳು ಮತ್ತು ನಿಮ್ಮಿಬ್ಬರ ವೈವಾಹಿಕ ಜೀವನ ಸುಖಮಯ ಮತ್ತು ಸುಂದರವಾಗಿರಲಿ ಎಂದು ಹಾರೈಸುತ್ತೇನೆ. ನಿಮಗೆ ಉಂಟಾದ ಅನಾನುಕೂಲತೆಗಾಗಿ ನಾನು ನಿಜವಾಗಿಯೂ ವಿಷಾದಿಸುತ್ತೇನೆ.ನಾನು ವೈಯಕ್ತಿಕವಾಗಿ ಗಮನಹರಿಸಿದ್ದೇನೆ ಮತ್ತು ಸರಿಪಡಿಸುವ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಟ್ವೀಟ್​​ ಮಾಡಿದ್ದಾರೆ.

ನೆಟಿಜನ್‌ಗಳು ಸಹ ಅಂಗವಿಕಲರಿಗಾಗಿ ಸೌಲಭ್ಯಗಳು ಮತ್ತು ಸೇವೆಗಳನ್ನು ಹೈಲೈಟ್ ಮಾಡಿ ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net