2040ಕ್ಕೆ ರಾಜಮೌಳಿ ‘ಮಹಾಭಾರತ’ ಕೊನೇ ಪಾರ್ಟ್ ಬಿಡುಗಡೆ; ಮೊದಲ ಪಾರ್ಟ್ ಯಾವಾಗ?

143
Published on

ಬಾಹುಬಲಿ ಸಿನಿಮಾ ಖ್ಯಾತಿನ ನಿರ್ದೇಶಕ ರಾಜಮೌಳಿ ಮಹಾಭಾರತ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕಳೆದ ಹಲವು ವರ್ಷಗಳಿಂದ ಸದ್ದು ಮಾಡುತ್ತಿದೆ. ಆದರೆ, ಸಿನಿಮಾ ಯಾವಾಗಿನಿಂದ ಶುರು ಎಂಬ ಬಗ್ಗೆ ಸಣ್ಣ ಸುಳಿವೂ ಇಲ್ಲ. ಪಾತ್ರವರ್ಗದ ಆಯ್ಕೆ ನಡೆಯುತ್ತಿದೆಯಾದರೂ, ಯಾವುದೂ ಅಂತಿಮ ಮತ್ತು ಅಧಿಕೃತವಾಗಿಲ್ಲ. ಹೀಗಿರುವಾಗಲೇ ಇದೇ ಮಹಾಭಾರತದ ಬಗ್ಗೆ ಕೌತುಕ ವಿಚಾರವೊಂದು ಹೊರಬಿದ್ದಿದೆ. ಅದೇನೆಂದರೆ, 2040ಕ್ಕೆ ಮಹಾಭಾರತ ಚಿತ್ರದ ಕೊನೇ ಪಾರ್ಟ್ ಬಿಡುಗಡೆಯಾಗಲಿದೆಯಂತೆ!

ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಅತ್ಯಂತ ರೋಚಕ ಮತ್ತು ಅಷ್ಟೇ ಕೌತುಕ ಕತಾಹಂದರ ಹೊಂದಿರುವ ಮಹಾಭಾರತವನ್ನು ಆರೇಳು ಪಾರ್ಟ್​ಗಳಲ್ಲಿ ಸಿದ್ಧಪಡಿಸುವ ಪ್ಲ್ಯಾನ್​ ರಾಜಮೌಳಿ ಅವರದ್ದು. ಹಾಗಾಗಿ ಅದಕ್ಕಾಗಿ ದೊಡ್ಡ ಯೋಜನೆಯನ್ನೇ ರೂಪಿಸಿಕೊಂಡಿರುವ ಅವರು, ಒಪ್ಪಿಕೊಂಡಿರುವ ಸಿನಿಮಾಗಳನ್ನು ಮಾಡಿ ಮುಗಿಸಿದ ಬಳಿಕವೇ ಆ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ.

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಈ ಸಿನಿಮಾ ಬಗ್ಗೆ ಮಾತನಾಡಿದ್ದ ರಾಜಮೌಳಿ, ‘ಮಹಾಭಾರತವನ್ನು ಸಿನಿಮಾ ರೂಪದಲ್ಲಿ ಸಿದ್ದಪಡಿಸಲು ಏನಿಲ್ಲ ಅಂದರೂ ಇನ್ನೂ 10 ವರ್ಷ ಸಮಯ ಬೇಕಾಗುತ್ತದೆ. ಅದಕ್ಕೆ ಬೇಕಾದ ಸೆಟ್​ ನಿರ್ಮಾಣಕ್ಕೆ ಅಷ್ಟು ಸಮಯ ನೀಡಲೇಬೇಕು. ಒಂದೇ ಅವತರಣಿಕೆಯಲ್ಲಿ ಆ ಸಿನಿಮಾ ಆಗುವುದಿಲ್ಲ. ಬದಲಿಗೆ 6-7 ಭಾಗಗಳಾಗಿ ಬಿಡುಗಡೆ ಆಗಲಿದೆ. ಈ ಚಿತ್ರದ ಕೊನೇ ಪಾರ್ಟ್ 2040ರಲ್ಲಿ ಬಿಡುಗಡೆ ಆಗಲಿದೆ’ ಎಂದಿದ್ದಾರೆ.

ಹಾಗಾದರೆ ಮೊದಲ ಪಾರ್ಟ್ ಯಾವಾಗ ಎಂಬ ಪ್ರಶ್ನೆಗೆ ರಾಜಮೌಳಿ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ. ಸದ್ಯ ಆರ್​ಆರ್​ಆರ್ ಸಿನಿಮಾ ಕೆಲಸಗಳಲ್ಲಿ ರಾಜಮೌಳಿ ತೊಡಗಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net