More

    ಫ್ಲಾಪ್​ ಹೀರೋ ನೀನು, ನಿಂಗ್ಯಾಕೆ ಬಯೋಗ್ರಫಿ?: ಟ್ರೋಲ್​ಗೆ ಆಹಾರವಾದ ಸೈಫ್​..

    ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ಇತ್ತೀಚೆಗಷ್ಟೇ ತಮ್ಮ 50ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡರು. ಮತ್ತೆ ತಂದೆಯಾಗುತ್ತಿರುವ ಖುಷಿಯನ್ನೂ ಹಂಚಿಕೊಂಡಿದ್ದರು. ಹೀಗಿರುವಾಗಲೇ ಜೀವನಕಥೆಯನ್ನು ಪುಸ್ತಕ ರೂಪದಲ್ಲಿ ಹೊರತರುವ ಬಗ್ಗೆಯೂ ಹೇಳಿಕೊಂಡಿದ್ದರು ಸೈಫ್. ಇದೀಗ ಅದೇ ಬಯೋಗ್ರಫಿ ವಿಚಾರವೇ ಟ್ರೋಲ್​ಗೆ ಆಹಾರವಾಗಿದೆ. ಸೈಫ್​ ಅವರ ಈ ನಿರ್ಧಾರಕ್ಕೆ ನೆಟ್ಟಿಗರು ಬಗೆಬಗೆ ಕಮೆಂಟ್​ ನೀಡುತ್ತಿದ್ದಾರೆ.

    ಇದನ್ನೂ ಓದಿ: ಮಾದಪ್ಪನ ಗೀತೆಗೆ ಅಪಮಾನ: ಚಂದನ್​ ಶೆಟ್ಟಿ ವಿರುದ್ಧ ಸಿಡಿದೆದ್ದ ಚಾಮರಾಜನಗರ ಯುವಕರು!

    ‘ಏನು ಲೆಜೆಂಡರಿ ಕ್ರಿಕೆಟರ್​ ಮನ್ಸೂರ್​ ಅಲಿ ಖಾನ್​ ಪಟೌಡಿ ಮತ್ತು ನಟಿ ಶರ್ಮಿಳಾ ಟ್ಯಾಗೂರ್​ ಪುತ್ರ ಸೈಫ್​ ಅಲಿಖಾನ್​ ತನ್ನ ಸಿನಿಮಾ ಜೀವನದ ಏರಿಳಿತ ಮತ್ತು ಸ್ಟ್ರಗಲ್​ ಬಗ್ಗೆ ಬಯೋಗ್ರಫಿ ಬರೆಯಲಿದ್ದಾರೆಯೇ’ ಎಂದು ಓರ್ವ ಕಮೆಂಟ್​ ಮಾಡಿದರೆ, ‘ಸಿನಿಮಾರಂಗದಲ್ಲಿ ಪ್ಲಾಪ್​ಗಳನ್ನೇ ನೀಡುತ್ತ ಪದ್ಮಶ್ರೀ ಗಿಟ್ಟಿಸಿಕೊಂಡು, ಯಾವತ್ತೂ ಯಶಸ್ವಿಯಾಗದ ಸೂಪರ್ಸ್ಟಾರ್ ಹಣೆಪಟ್ಟಿ ಅಂಟಿಸಿಕೊಂಡಿರುವ ಬಗ್ಗೆ ಬಯೋಗ್ರಫಿಯಲ್ಲಿ ನಮೂದಿಸಿ’ ಎಂದಿದ್ದಾರೆ.

    ಇದನ್ನೂ ಓದಿ: VIRAL VIDEO: 16 ವರ್ಷದ ಹುಡುಗಿ ಜತೆ ಮಹೇಶ್​ ಭಟ್​ ಮಾಡ್ತಿರೋದೇನು?; ಆಲಿಯಾ​ ತಂದೆ ವಿರುದ್ಧ ಟೀಕೆಯ ಸುರಿಮಳೆ

    ಇನ್ನೋರ್ವ ನೆಟ್ಟಿಗ, ‘ಸಾಲು ಸಾಲು ಪ್ಲಾಪ್​ ಸಿನಿಮಾಗಳನ್ನು ನೀಡಿದ ಬಳಿಕವೂ, ಬಿಗ್​ ಬಜೆಟ್ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಹೇಗೆ ಪಡೆದುಕೊಂಡಿದ್ದೀರಿ? ದಯಮಾಡಿ ಆ ಪ್ರಶ್ನೆಗೂ ಬಯೋಗ್ರಫಿಯಲ್ಲಿ ಉತ್ತರ ಬರೆಯಿರಿ’ ಎಂಬ ಕಮೆಂಟ್​ಗಳು ಬಂದಿವೆ. ಇದಷ್ಟೇ ಅಲ್ಲದೆ ಬಗೆಬಗೆ ಮೀಮ್​ಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದ್ದು, ಸೈಫ್​ ಬಯೋಗ್ರಫಿ ವಿಚಾರ ಸದ್ಯ ಟ್ರೆಂಡಿಂಗ್​ನಲ್ಲಿದೆ. (ಏಜೆನ್ಸೀಸ್​)

    ‘ಖಾಲಿ ಪೀಲಿ’ ಟೀಸರ್​​ಗೂ ಡಿಸ್​ಲೈಕ್​ ಸುರಿಮಳೆ ; ಶಾಹೀದ್ ಕಪೂರ್​ ಸಹೋದರನಿಗೆ ನೆಪೋಟಿಸಂ ಬಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts