More

    VIRAL VIDEO: 16 ವರ್ಷದ ಹುಡುಗಿ ಜತೆ ಮಹೇಶ್​ ಭಟ್​ ಮಾಡ್ತಿರೋದೇನು?; ಆಲಿಯಾ​ ತಂದೆ ವಿರುದ್ಧ ಟೀಕೆಯ ಸುರಿಮಳೆ

    ಸುಶಾಂತ್​ ಸಿಂಗ್​ ಆತ್ಮಹತ್ಯೆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಆಲಿಯಾ ಭಟ್​ ಸೇರಿ ಅವರ ತಂದೆ ಮಹೇಶ್​ ಭಟ್​ಗೂ ನೆಟ್ಟಿಗರು ನೆಪೋಟಿಸಂ ವಿಚಾರವಾಗಿ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಮಹೇಶ್​ ಭಟ್​ ಅವರ ಹಳೇ ವಿಡಿಯೋಗಳನ್ನು ಶೇರ್​ ಮಾಡಿಕೊಂಡು ಟ್ರೋಲ್​ ಮಾಡಲಾಗುತ್ತಿದೆ. ಇದೀಗ 2004 ರಲ್ಲಿನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಮಾಡುತ್ತಿದ್ದು. ಮಹೇಶ್​ ಭಟ್​ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಸುರಿಸಲಾಗುತ್ತಿದೆ.

    ಇದನ್ನೂ ಓದಿ: ‘ನಿಮಗೊಂದು ಸಿಹಿ ಸುದ್ದಿ’ ಕೊಟ್ಟ ಕಾವ್ಯಾ

    ಹೌದು ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕು ಪಡೆದುಕೊಳ್ಳುತ್ತಿದ್ದಂತೆ, ಹಳೇ ವಿಡಿಯೋಗಳೂ ಅಷ್ಟೇ ಸದ್ದು ಮಾಡುತ್ತಿವೆ. ಇದೀಗ ಜಿಯಾ ಖಾನ್​ ಜತೆಗಿನ ವಿಡಿಯೋವೊಂದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಬಾಲಿವುಡ್​ ಇಂಡಸ್ಟ್ರಿಗೆ ಬರುವುದಕ್ಕೂ ಮುನ್ನ ಅಂದರೆ 16 ವರ್ಷ ವಯಸ್ಸಿನ ಜಿಯಾ ಜತೆಗಿನ ವಿಡಿಯೋ ಹರಿದಾಡುತ್ತಿದ್ದು, ನೆಟ್ಟಿಗರು ಮಹೇಶ್​ ಭಟ್​ ಅವರ ವರ್ತನೆಯನ್ನು ಖಂಡಿಸುತ್ತಿದ್ದಾರೆ.

    ರಿಯಾ ಚಕ್ರವರ್ತಿ ಜತೆಗಿನ ಮಹೇಶ್​ ಅವರ ವಿಡಿಯೋ ಸಹ ಇತ್ತೀಚೆಗೆ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಜಿಯಾ ಖಾನ್​ ಜತೆಗಿನ ವಿಡಿಯೋ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಅಂದಹಾಗೆ, 2007ರಲ್ಲಿ ರಾಮ್​ಗೋಪಾಲ್​ ವರ್ಮಾ ಅವರ ನಿಶ್ಯಬ್ದ ಸಿನಿಮಾ ಮೂಲಕ ಬಾಲಿವುಡ್​ಗೆ ಜಿಯಾ ಪದಾರ್ಪಣೆ ಮಾಡಿದ್ದರು. 2013ರಲ್ಲಿ ಮುಂಬೈನ ಜುಹುನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

    ಬೆಳಕಿನ ಹುಡುಕಾಟದಲ್ಲಿ… ನಟ ಉಪೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts