ಶಿವಣ್ಣನ ಮನೆಗೆ ಭೇಟಿ ನೀಡಿದ ಪ್ರೇಮ್​; ಜೋಗಿ ಜಾತ್ರೆಗೆ ಶುರುವಾಗಿದೆ ತಯಾರಿ

DE9tCn7U0AEtelk
Published on

ಸರಿಯಾಗಿ 15 ವರ್ಷಗಳ ಹಿಂದೆ ಅಂದರೆ, 2005ರ ಆಗಸ್ಟ್​ 19ರಂದು ‘ಜೋಗಿ’, ಬೆಂಗಳೂರಿನ ಕಪಾಲಿ ಸೇರಿದಂತೆ ರಾಜ್ಯಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇಂದಿಗೆ ಸರಿಯಾಗಿ 15 ವರ್ಷಗಳಾದವು. ಆ ಖುಷಿ ವಿಚಾರವನ್ನು ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ.

ಶಿವರಾಜಕುಮಾರ್​ ಅವರ ಅಭಿಮಾನಿಗಳು ಇಂದು ಸೋಷಿಯಲ್​ ಮೀಡಿಯಾದಲ್ಲಿ ವಿಶೇಷವಾದ ಕಾಮನ್​ ಡಿಸ್​ಪ್ಲೇ ಪಿಕ್ಚರ್​ (ಸಿಡಿಪಿ) ಬಿಡುಗಡೆ ಮಾಡಿಸಿದ್ದಾರೆ. ವಿಶೇಷವೆಂದರ, ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಈ ಸಿಡಿಪಿಗಳನ್ನು ತಮ್ಮ ಸೋಷಿಯಲ್​ ಮೀಡಿಯಾ ಖಾತೆಗಳ ಮೂಲಕ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಇದೀಗ ಚಿತ್ರದ ನಿರ್ದೇಶಕ ಪ್ರೇಮ್​, ಶಿವಣ್ಣ ಅವರ ಮನೆಗೆ ಭೇಟಿ ನೀಡಿ ಶುಭಾಶಯ ಕೋರಿದ್ದಾರೆ. ಹೂಗುಚ್ಛ ನೀಡಿ, ಸಿಹಿ ತಿನಿಸಿ ಖುಷಿ ಹಂಚಿಕೊಂಡು ಬಂದಿದ್ದಾರೆ. ಆ ವಿಚಾರವನ್ನು ವಿಡಿಯೋ ಸಮೇತ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿರುವ ಪ್ರೇಮ್​, ‘ಅಭಿನಂದನೆಗಳು ಶಿವಣ್ಣ, ಜೋಗಿ ಫೀಲ್​ ಯಾವತ್ತೂ ಹೋಗದು. ಇಂದು ಸಂಜೆ 5 ಗಂಟೆಗೆ ಜೋಗಿ ಜಾತ್ರೆ ಸೆಲೆಬ್ರೇಟ್ ಮಾಡೋಣ, ಲೈವ್​ ಮೂಲಕ’ ಎಂದಿದ್ದಾರೆ.

ಇತ್ತ ಶಿವಸೈನ್ಯ ಎಂಬ ಶಿವರಾಜಕುಮಾರ್​ ಅವರ ಅಭಿಮಾನಿಗಳ ಸಂಘವು, ಎ2 ಯೂಟ್ಯೂಬ್​ ಚಾನಲ್​ನಲ್ಲಿ ಈ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿದೆ. ಬುಧವಾರ ಬೆಳಿಗ್ಗೆ ಈ ಟ್ರೇಲರ್​ ಬಿಡುಗಡೆಯಾಗಿದ್ದು, ಈಗಾಗಲೇ ಟ್ರೆಂಡಿಂಗ್​ನಲ್ಲಿದೆ ಎನ್ನುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net