

ಚೆನ್ನೈ: ಬಹುಭಾಷಾ ನಟಿ ಖುಷ್ಬು ಅವರ ಕಣ್ಣಿಗೆ ಸರ್ಜರಿ ಆಗುತ್ತಿದ್ದು ಈ ಕುರಿತು ಅವರು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ನನ್ನ ಕಣ್ಣಿಗೆ ಸರ್ಜರಿ ಆಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಕೆಲವು ದಿನಗಳು ನಿಮಗ್ಯಾರಿಗೂ ಸಿಗುತ್ತಿಲ್ಲ. ಶೀಘ್ರ ಗುಣಮುಖರಾಗಿ ವಾಪಸ್ ಬರುತ್ತೇನೆ. ಅಲ್ಲಿಯವರೆಗೆ ಟೇಕ್ ಕೇರ್ ಎಂದು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದೀಗ ಕರೊನಾ ಇರುವ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳಿ. ಮಾಸ್ಕ್ ಧರಿಸಿ ಹಾಗೂ ಅಂತರ ಕಾಯ್ದುಕೊಳ್ಳಿ ಎಂದು ಟ್ವಿಟರ್‌ನಲ್ಲಿ ನಟಿ ಹೇಳಿದ್ದಾರೆ. ಕಣ್ಣಿಗೆ ಬ್ಯಾಂಡೇಜ್ ಹಾಕಿಕೊಂಡಿರುವ ಫೋಟೋ ಶೇರ್ ಮಾಡಿಕೊಂಡಿರುವ ಇವರು, ಸದ್ಯ ಟ್ವಿಟರ್‌ನಲ್ಲಿ ನಿಮಗ್ಯಾರಿಗೂ ಸಿಗುವುದಿಲ್ಲ. ಬೇಗನೇ ವಾಪಸಾಗುತ್ತೇನೆ ಎಂದು ಹೇಳಿದ್ದಾರೆ.
ನಟಿಯ ಜತೆಗೆ ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿಯೂ ಖುಷ್ಬು ಗುರುತಿಸಿಕೊಂಡಿದ್ದಾರೆ.
ಅವರ ಟ್ವಿಟರ್‌ಗೆ ಅಪಾಯ ಅಭಿಮಾನಿಗಳು ಕಮೆಂಟ್ ಮಾಡಿದ್ದು, ಶೀಘ್ರವಾಗಿ ಗುಣಮುಖರಾಗಿರೆಂದು ಹಾರೈಸಿ ಕಳಿಸಿದ್ದಾರೆ.