

ಎಷ್ಟೇ ದೊಡ್ಡ ಯಶಸ್ಸು ಸಿಕ್ಕರೂ ನಿರ್ಮಾಪಕರು ಒಂದೋ, ಎರಡೋ ಹೊಸ ಚಿತ್ರ ಘೋಷಣೆ ಮಾಡುವುದು ಸಾಮಾನ್ಯ. ಆದರೆ, ಬಾಲಿವುಡ್ ನಿರ್ಮಾಪಕ ದಿನೇಶ್ ವಿಜನ್, 15 ಸಿನಿಮಾಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ.
ಈ ಹಿಂದೆ ‘ಸ್ತ್ರೀ’, ‘ಭೇಡಿಯಾ’, ‘ರೂಹಿ’ ಸೇರಿದಂತೆ 20 ಸಿನಿಮಾಗಳನ್ನು ನಿರ್ಮಿಸಿರುವ ಖ್ಯಾತಿ ಅವರದು. ಅದರ ಜತೆ ಇತ್ತೀಚೆಗಷ್ಟೆ ಬಿಡುಗಡೆಯಾದ ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿ ಖಾನ್ ಅಭಿನಯದ ‘ಝರಾ ಹಟ್ಕೆ ಝರಾ ಬಚ್ಕೆ’ ಚಿತ್ರ ಸುಮಾರು 70 ಕೋಟಿ ರೂ. ಗಳಿಕೆ ಮಾಡಿದೆ. ಈ ಯಶಸ್ಸಿನ ಬೆನ್ನಲ್ಲೇ 15 ಹೊಸ ಚಿತ್ರಗಳನ್ನು ಅನೌನ್ಸ್ ಮಾಡಿದ್ದಾರೆ.
ಶಾಹಿದ್ ಕಪೂರ್ - ಕೃತಿ ಸನನ್ ಅಭಿನಯದ ‘ಆ್ಯನ್ ಇಂಪಾಸಿಬಲ್ ಲವ್ ಸ್ಟೋರಿ’, ವಿಕ್ರಾಂತ್ ಮೆಸ್ಸಿ ಅಭಿನಯಿಸಲಿರುವ ‘ಸೆಕ್ಟರ್ 36’, ನಿಮ್ರತ್ ಕೌರ್ - ರಾಧಿಕಾ ಮದನ್ ನಟಿಸಲಿರುವ ‘ಹ್ಯಾಪಿ ಟೀಚರ್ಸ್ ಡೇ’, ಮೃನಾಲ್ ಠಾಕುರ್ - ಹುಮಾ ಖುರೇಷಿ ಅವರ ‘ಪೂಜಾ ಮೇರಿ ಜಾನ್’, ವಾಣಿ ಕಪೂರ್ - ಇಶ್ವಾಕ್ ಸಿಂಗ್ ಅಭಿನಯದ ‘ಸರ್ವಗುಣ ಸಂಪನ್ನ’, ಸಾರಾ ಅಲಿ ಖಾನ್, ಡಿಂಪಲ್ ಕಪಾಡಿಯಾ, ಪಂಕಜ್ ತ್ರಿಪಾಠಿ ಅವರ ‘ಮರ್ಡರ್ ಮುಬಾರಕ್’, ‘ರೂಮಿ ಕಿ ಶರಾತ್’, ‘ಮುಂಜ್ಯಾ’, ಜಾನ್ ಅಬ್ರಹಂ ಅಭಿನಯದ ‘ಟೆಹ್ರಾನ್’, ವಿಕ್ಕಿ ಕೌಶಲ್ - ರಶ್ಮಿಕಾ ನಟಿಸಲಿರುವ ‘ಛಾವಾ’, ಪರಿಣೀತಿ ಚೋಪ್ರಾ ಅವರ ‘ಶಿದ್ದತ್ 2’, ‘ವಿಒವಿ- ವ್ಯಾಂಪೈರ್ಸ್ ಆ್ ವಿಜಯನಗರ್’, ರಾಜಕುಮಾರ್ ರಾವ್ - ಶ್ರದ್ಧಾ ಕಪೂರ್ ಅವರ ‘ಸೀ 2’, ವರುಣ್ ಧವನ್ - ಕೃತಿ ಸನನ್ ಪ್ರಮುಖ ತಾರಾಗಣದಲ್ಲಿರುವ ‘ಭೇಡಿಯಾ 2’, ‘ಇಕ್ಕೀಸ್’ ಚಿತ್ರಗಳನ್ನು ದಿನೇಶ್ ಘೋಷಿಸಿದ್ದಾರೆ. (ಏಜೆನ್ಸೀಸ್)