

ಆಂಧ್ರಪ್ರದೇಶ: ಪ್ಯಾನ್ ಇಂಡಿಯಾ(Pan India) ಚಿತ್ರವಾಗಿ ತೆರೆಕಾಣಲು ಸಜ್ಜಾಗಿರುವ ಪ್ರಶಾಂತ್ ನೀಲ್(Prashanth Neel) ನಿರ್ದೇಶನದ ಸಲಾರ್(Salaar) ಚಿತ್ರ ಇದೀಗ ಕನ್ನಡ ಭಾಷೆಯಲ್ಲಿ ಭರ್ಜರಿ ಓಪನಿಂಗ್ ಪಡೆಯಲು ಎದುರು ನೋಡುತ್ತಿದೆ.
ಟಾಲಿವುಡ್ ಸ್ಟಾರ್ ನಟ ಡಾರ್ಲಿಂಗ್ ಪ್ರಭಾಸ್ ಅವರಿಗೆ(Prabhas) ಬಾಹುಬಲಿ, ಬಾಹುಬಲಿ-2, ಸಾಹೋ, ರಾಧೆಶ್ಯಾಮ್ ಚಿತ್ರಗಳು ಪ್ಯಾನ್ ಇಂಡಿಯಾ ಸ್ಟಾರ್ ಎಂಬ ಬಿರುದನ್ನು ತಂದುಕೊಟ್ಟಿದೆ. ಸದ್ಯ ಇದೇ ಹಾದಿಯಲ್ಲಿ ಸಾಗುತ್ತಿರುವ ಪ್ರಭಾಸ್ಗೆ ಇದೀಗ ಸಲಾರ್ ಉತ್ತಮ ಹೆಸರನ್ನು ತಂದುಕೊಡಲಿದೆ ಎಂದು ಚಿತ್ರರಂಗ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದೆ.
ಸಲಾರ್ ಬಿಡುಗಡೆಗೊಂಡ ಮೊದಲ ದಿನದಲ್ಲೇ ಜಾಗತಿಕವಾಗಿ(Globally) 140 ಕೋಟಿ ರೂ.ಗಳನ್ನು ಗಳಿಸಲಿದೆ ಎಂದು ಊಹಿಸಲಾಗಿದೆ. ಬಾಲಿವುಡ್ ಅಂಗಳದಲ್ಲಿ ಸಲಾರ್ ಉತ್ತಮ ಓಪನಿಂಗ್ ಪಡೆಯಲಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ, ಸಲಾರ್ ಚಿತ್ರವು ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಖ್ಯಾತಿ ಮತ್ತು ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂದು ವರದಿ(Report) ಹೇಳಿದೆ.
ಉತ್ತರ ಅಮೆರಿಕದಲ್ಲೂ ಸಲಾರ್ ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ ಎಂಬ ವರದಿಗಳಿವೆ. ಎಲ್ಲವೂ ಅಂದುಕೊಂಡಂತೆ ಸರಿಯಾಗಿ ನಡೆದರೆ, ಸಲಾರ್ ಆರಂಭದ ವಾರಾಂತ್ಯದಲ್ಲಿ 200 ಕೋಟಿ ರೂ. ಗಳಿಕೆಯೊಂದಿಗೆ ಕಿಕ್ ಸ್ಟಾರ್ಟ್ ಪಡೆಯಲಿದೆ. ಹೀಗಾದಲ್ಲಿ ಚಿತ್ರವು ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಬ್ಲಾಕ್ಬಸ್ಟರ್ ಹಿಟ್ ಆಗಲಿದೆ.