ಇನ್ನೂ ಮೂವರು ಪ್ರಭಾವಿ ರಾಜಕಾರಣಿಗಳ ಸಿಡಿ ನನ್ನ ಬಳಿ ಇದೆ, ಎಲ್ಲರೂ ಹಾಲಿಗಳೇ...

cd
Published on

ಬೆಂಗಳೂರು: ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಕಾಮದಾಟದ ದೃಶ್ಯವುಳ್ಳ ಸಿಡಿ ರಿಲೀಸ್​ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ, ಇದೀಗ ಮತ್ತೊಂದು ಸಿಡಿ ಬಾಂಬ್​ ಸಿಡಿಸಿದ್ದಾರೆ.

ಯುವತಿ ಜತೆ ಸೆಕ್ಸ್​ ಪ್ರಕರಣ ಸ್ಪೋಟಗೊಂಡ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟದಿಂದ ರಮೇಶ್​ ಜಾರಕಿಹೊಳಿ ಔಟ್​ ಆಗಿದ್ದಾರೆ. ಬಿಜೆಪಿ ಹೈಕಮಾಂಡ್​ನ ಸೂಚನೆಯಂತೆ ನೈತಿಕ ಹೊಣೆಹೊತ್ತು ಸಚಿವ ಸ್ಥಾನಕ್ಕೆ ಇಂದು ಮಧ್ಯಾಹ್ನ ಗೋಕಾಕ್​ನ ಸಾಹುಕಾರ್​ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಮಾತನಾಡಿರ ದಿನೇಶ್​ ಕಲ್ಲಹಳ್ಳಿ, ನನ್ನ ಬಳಿ ಮೂವರು ಪ್ರಭಾವಿ ವ್ಯಕ್ತಿಗಳ ಸಿಡಿ ಇದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿರಿ ಕರ್ನಾಟಕ ಭವನದಲ್ಲೇ ಸಚಿವರ ಕಾಮದಾಟ! ರಮೇಶ್​ ಜಾರಕಿಹೊಳಿಗೆ ಖೆಡ್ಡಾ ತೋಡಿದ್ದು ಕೈ ಮುಖಂಡ?

ಜಾರಕಿಹೊಳಿ ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ದಿನೇಶ್​ ಕಲ್ಲಹಳ್ಳಿ, ರಮೇಶ್​ ಜಾರಕಿಹೊಳಿ ಹೊರತಾಗಿ ಇನ್ನೂ ಮೂವರ ಸಿಡಿ ಇದೆ. ಆ ಪೈಕಿ ಒಬ್ಬರು ಸಚಿವ ಸಂಪುಟದಲ್ಲಿದ್ದಾರೆ, ಇನ್ನಿಬ್ಬರು ಉನ್ನತ ಹುದ್ದೆಯಲ್ಲಿದ್ದಾರೆ. ನಾನು ಕಾನೂನು ತಜ್ಞರ ಜೊತೆಗೆ ಮಾತನಾಡಿ ಅವರ ಹೆಸರನ್ನು ಬಹಿರಂಗ ಪಡಿಸುತ್ತೇನೆ ಎಂದರು.
ಆ ಮೂವರು ಅವರೆಲ್ಲರೂ ರಾಜಕಾರಣದಲ್ಲೇ ಇದ್ದಾರೆ. ಯಾವ ಪಕ್ಷ ಎಂದು ಹೇಳೋಕೆ ಆಗಲ್ಲ, ಅವರೆಲ್ಲರೂ ಉನ್ನತ ಹುದ್ದೆಯಲ್ಲೇ ಇದ್ದಾರೆ. ಮುಂದೆ ಬಹಿರಂಗ ಪಡಿಸುವೆ ಎನ್ನುವ ಮೂಲಕ ಇನ್ನಷ್ಟು ಸಿಡಿ ಬಿಡುಗಡೆಯ ಸುಳಿವು ಕೊಟ್ಟ ದಿನೇಶ್​ ಕಲ್ಲಹಳ್ಳಿ, ನನಗೆ ಯಾವುದೇ ಕಾಂಗ್ರೆಸ್ ನಾಯಕರ ಜತೆ ಸಖ್ಯ ಇಲ್ಲ, ಸಂಪರ್ಕವೂ ಇಲ್ಲ. ನಾನು 10 ವರ್ಷಗಳಿಂದ ಸಾಮಾಜಿಕ ಕೆಲಸ ಮಾಡಿಕೊಂಡು ಬಂದಿದ್ದೇನೆ. ಉತ್ತರ ಕರ್ನಾಟಕ ಮೂಲದ ಸಂತ್ರಸ್ತ ಯುವತಿಯ ಕುಟುಂಬಸ್ಥರು ಸಹಾಯ ಕೇಳಿ ನನ್ನ ಬಳಿ ಬಂದರು. ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳವಂತೆ ಪೊಲೀಸರಿಗೆ ಮನವಿ ಮಾಡಿದ್ದೇನೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net