

ಮೇಷ: ಕೌಟುಂಬಿಕ ಸ್ಥಿತಿ ಆಹ್ಲಾದಕರವಾಗಿರುತ್ತದೆ. ಆಲಸ್ಯವನ್ನು ನಿಯಂತ್ರಣದಲ್ಲಿಡಿ. ಅಜಾಗರೂಕ ನಡೆಯಿಂದ ದೂರವಿರುವುದು ಕ್ಷೇಮ. ಶುಭಸಂಖ್ಯೆ: 5
ವೃಷಭ: ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚು ಒತ್ತಡ ಎದುರಿಸಬೇಕಾ ಗುವುದು. ಆಕಸ್ಮಿಕ ಧನಾಗಮವಾಗುವುದು. ಆತುರದ ನಿರ್ಧಾರ ಬೇಡ. ಶುಭಸಂಖ್ಯೆ: 9
ಮಿಥುನ: ದಾಂಪತ್ಯದಲ್ಲಿ ಸಂತಸದ ಕ್ಷಣ. ವಿದ್ಯಾರ್ಥಿಗಳಿಗೆ ಮಿಶ್ರ ಫಲಿತಾಂಶ ಬರಲಿದೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಶುಭಸಂಖ್ಯೆ:3
ಕಟಕ: ಮನಸ್ಸಿನಲ್ಲಿ ಅಸ್ಥಿರತೆ. ನಿರ್ಲಕ್ಷ್ಯದಿಂದ ಆರ್ಥಿಕ ನಷ್ಟ. ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯುವರು. ಇಷ್ಟ ದೇವರನ್ನು ಪೂಜಿಸಿ. ಶುಭಸಂಖ್ಯೆ: 3
ಸಿಂಹ: ಅನಗತ್ಯ ಊಹಾಪೋಹದಿಂದ ದೂರವಿರಿ. ಆರೋಗ್ಯದ ಕಾಳಜಿ ವಹಿಸುವುದು ಅಗತ್ಯ. ಸಣ್ಣ ವ್ಯಾಪಾರಸ್ಥರಿಗೆ ಉತ್ತಮ ಲಾಭ. ಶುಭಸಂಖ್ಯೆ: 2
ಕನ್ಯಾ: ಅನವಶ್ಯಕ ಚರ್ಚೆಗಳ ಕಾರಣದಿಂದ ವೈಮನಸ್ಯ. ದ್ವಿಚಕ್ರ ವಾಹನ ಚಾಲಕರು ಗಾಯಗೊಳ್ಳುವ ಸಾಧ್ಯತೆ. ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 9
ತುಲಾ: ಕುಟುಂಬದಿಂದ ನಿಮ್ಮ ನಿರ್ಧಾರಕ್ಕೆ ಬೆಂಬಲ. ಅಧ್ಯಯನದಲ್ಲಿ ತೊಂದರೆಯಾಗಬಹುದು. ತಾಯಿಯ ಆರೋಗ್ಯದಲ್ಲಿ ಎಚ್ಚರ. ಶುಭಸಂಖ್ಯೆ:3
ವೃಶ್ಚಿಕ: ಸಂಬಂಧಗಳಲ್ಲಿ ಉದ್ವಿಗ್ನತೆ. ಹಣಕಾಸಿನ ಪರಿಸ್ಥಿತಿ ಉತ್ತಮ. ವಿದ್ಯಾರ್ಥಿಗಳು ಕಾಲಹರಣ ಮಾಡಬೇಡಿ. ಮೀನುಗಾರರಿಗೆ ಲಾಭ. ಶುಭಸಂಖ್ಯೆ: 7
ಧನಸ್ಸು: ಲೇವಾದೇವಿ ವ್ಯವಹಾರ ಮಾಡುವವರಿಗೆ ಸರಾಸರಿ ಲಾಭ. ವೃತ್ತಿ ಜೀವನದಲ್ಲಿ ನಿರೀಕ್ಷಿತ ಏಳಿಗೆಯಾಗಲಿದೆ. ಕೆಲಸದಲ್ಲಿ ಒತ್ತಡ. ಶುಭಸಂಖ್ಯೆ: 9
ಮಕರ: ಕಠಿಣ ಪರಿಶ್ರಮ ಅಗತ್ಯ. ಆತ್ಮವಿಶ್ವಾಸದಿಂದ ಲಾಭ. ಕುಟುಂಬದಲ್ಲಿ ಶಾಂತಿ. ಸೌಂದರ್ಯ ವರ್ಧಕಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 7
ಕುಂಭ: ಆಹಾರದಿಂದ ಆರೋಗ್ಯ ಸಮಸ್ಯೆ. ಸಣ್ಣಪುಟ್ಟ ತಪ್ಪುಗಳು ದೊಡ್ಡದಾಗಿ ವಿವಾದವಾದೀತು. ಆರ್ಥಿಕ ಸಹಾಯ ಲಭಿಸುವುದು. ಶುಭಸಂಖ್ಯೆ: 3
ಮೀನಾ: ತಂದೆ-ಮಕ್ಕಳಲ್ಲಿ ಆಸ್ತಿ ವಿಷಯವಾಗಿ ಕಲಹ. ಉಳಿತಾಯದ ಮಹತ್ವ ತಿಳಿಯಲಿದೆ. ಉನ್ನತ ಸ್ಥಾನಮಾನ ದೊರೆತು ಸಂತಸ. ಶುಭಸಂಖ್ಯೆ: 5