ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಹಣಕಾಸಿನ ವಿಚಾರದಲ್ಲಿ ಪ್ರಗತಿ

Nitya-Bhavisya-FILEminimizer
Published on

ಮೇಷ: ಮನಸ್ಸಿನಲ್ಲಿ ಸಂತಸ ಇರುತ್ತದೆ. ಪೋಷಕರ ಆರೋಗ್ಯದ ವಿಷಯದಲ್ಲಿ ಕಾಳಜಿ ವಹಿಸಿ. ಹೊಸದನ್ನು ಕಲಿಯುವ ಅವಕಾಶ ಲಭ್ಯ. ಶುಭಸಂಖ್ಯೆ: 5

ವೃಷಭ: ಭಾವೋದ್ರೇಕ ಉಂಟಾಗುವುದು. ಹಣಕಾಸಿನ ಪರಿಸ್ಥಿತಿಯು ಹದಗೆಡಲಿದೆ. ವಿದ್ಯಾರ್ಥಿಗಳು ಅಧ್ಯಯನದತ್ತ ಗಮನವಿಡಬೇಕು. ಶುಭಸಂಖ್ಯೆ: 3

ಮಿಥುನ: ಕುಟುಂಬದ ಆಸ್ತಿ ವಿಚಾರ ಗೊಂದಲಮಯ. ಉದ್ಯಮಿ ಮಹಿಳೆಯರಿಗೆ ಅನಗತ್ಯ ಒತ್ತಡ. ಸಹವರ್ತಿಗಳಿಂದ ಅಪಾಯ. ಶುಭಸಂಖ್ಯೆ:8

ಕಟಕ: ಗೃಹ ನಿರ್ಮಾಣ ಕಾರ್ಯಕ್ಕೆ ಅಧಿಕ ಶ್ರಮ. ಧಾರ್ವಿುಕ ಪ್ರವೃತ್ತಿಯಿಂದ ಧನಾರ್ಜನೆ. ಹಣಕಾಸಿನ ವಿಚಾರದಲ್ಲಿ ಪ್ರಗತಿಯಿದೆ. ಶುಭಸಂಖ್ಯೆ:2

ಸಿಂಹ: ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೇರುವಿರಿ. ಕುಟುಂಬದಲ್ಲಿ ಹೊಂದಾಣಿಕೆ ಕಡಿಮೆ. ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆಯಾದೀತು. ಶುಭಸಂಖ್ಯೆ:7

ಕನ್ಯಾ:  ಮಕ್ಕಳ ಪ್ರಗತಿಯಿಂದ ಮಾನಸಿಕ ಸಮಾಧಾನ. ಪ್ರಯಾಣಕ್ಕೆ ಅನಿರೀಕ್ಷಿತ ಖರ್ಚು. ದುಡುಕಿನ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಶುಭಸಂಖ್ಯೆ: 3

ತುಲಾ: ದಾಂಪತ್ಯದಲ್ಲಿ ಸಾಮರಸ್ಯ ಇರುವುದು. ದೃಢ ತೀರ್ಮಾನ ಕೈಗೊಳ್ಳಲು ವಿಫಲ. ಶಿಕ್ಷಣ ಕ್ಷೇತ್ರದವರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಶುಭಸಂಖ್ಯೆ:4

ವೃಶ್ಚಿಕ: ಪತ್ರಕರ್ತರು, ಸಾಹಿತಿಗಳು ಅನವಶ್ಯಕ ವಿವಾದ ಎದುರಿಸುವಿರಿ. ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ. ಆರೋಗ್ಯ ಉತ್ತಮ. ಶುಭಸಂಖ್ಯೆ:5

ಧನಸ್ಸು: ಬಟ್ಟೆ ವ್ಯಾಪಾರಿಗಳಿಗೆ ಆದಾಯದಲ್ಲಿ ಇಳಿಕೆ ಕಂಡುಬರಲಿದೆ. ಪರರಿಂದ ತೊಂದರೆ ಎದುರಿಸುವಿರಿ. ನಿರ್ಲಕ್ಷ್ಯದಿಂದ ಅನಾರೋಗ್ಯ. ಶುಭಸಂಖ್ಯೆ:6

ಮಕರ: ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುವುದು. ಆಸ್ತಿ ವಿಚಾರದಲ್ಲಿ ಎಚ್ಚರಿಕೆಯ ನಡೆ ತೀರ ಅಗತ್ಯ. ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ:9

ಕುಂಭ: ದೀರ್ಘ ಪ್ರಯಾಣ ಮಾಡುವಿರಿ. ರೇಷ್ಮೆ ಕೃಷಿ ಸಂಬಂಧಿ ವ್ಯವಹಾರದಲ್ಲಿ ಪ್ರಗತಿ. ಚಲನಚಿತ್ರ ನಿರ್ವಪಕರಿಗೆ ಉತ್ತಮ ಧನಲಾಭ. ಶುಭಸಂಖ್ಯೆ:2

ಮೀನ: ಕೌಟುಂಬಿಕ ಸಮಸ್ಯೆ ಅಂತ್ಯಕಾಣಬಹುದು. ಬದಲಾದ ಕೃಷಿ ಯೋಜನೆಯತ್ತ ಗಮನ ಹರಿಸಿ. ಸಗಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net