ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವಿವಾಹ ಸಂಬಂಧಿ ಕಾರ್ಯದಲ್ಲಿ ಯಶಸ್ಸು

Nitya Bhavisya Vijayavani
Published on

ಮೇಷ: ಐಟಿ ಉದ್ಯೋಗದಲ್ಲಿ ವರ್ಗಾವಣೆ ಸಾಧ್ಯತೆ. ಕೋರ್ಟ್ ವ್ಯವಹಾರದಲ್ಲಿ ತೊಂದರೆ. ಉದ್ಯೋಗ ಬದಲಾಯಿಸುವ ಸಾಧ್ಯತೆ. ಶುಭಸಂಖ್ಯೆ: 5

ವೃಷಭ: ವಿವಾಹದ ನಿರೀಕ್ಷೆಯಲ್ಲಿ ಇರುವವರಿಗೆ ಶುಭಸುದ್ದಿ. ಮಕ್ಕಳಿಗೆ ಅನಾರೋಗ್ಯ ಕಾಡೀತು. ವಾಹನ ಲಾಭ. ಇಷ್ಟದೇವರನ್ನು ಸ್ಮರಿಸಿ. ಶುಭಸಂಖ್ಯೆ:4

ಮಿಥುನ: ತೀರ್ಥಯಾತ್ರೆಯ ಯೋಗ. ಶತ್ರುಗಳಿಂದಾಗಿ ಪದವಿ ಪ್ರಾಪ್ತಿಯಲ್ಲಿ ತೊಂದರೆ. ಆಸ್ತಿ ಮಾರಾಟಕ್ಕೆ ಸಹೋದರರಿಂದ ಸಹಕಾರ. ಶುಭಸಂಖ್ಯೆ:1

ಕಟಕ: ನಿಮ್ಮಲ್ಲಿರುವ ಅಮೂಲ್ಯವಾದ ವಸ್ತುಗಳು ಕಳವಾಗುವ ಸಾಧ್ಯತೆ. ಸಂಗಾತಿಗೆ ಅನಾರೋಗ್ಯ. ವೃಥಾ ತಿರುಗಾಟ ಮಾಡುವಿರಿ. ಶುಭಸಂಖ್ಯೆ: 9

ಸಿಂಹ: ಹಣಕಾಸಿನ ಮುಗ್ಗಟ್ಟು. ಕುಟುಂಬದಲ್ಲಿ ಅಹಿತಕರ ಘಟನೆ ನಡೆಯಬಹುದು. ದೂರದ ಸಂಬಂಧಿಗಳಿಂದ ಸಹಾಯ ಸಿಗುವುದು. ಶುಭಸಂಖ್ಯೆ:3

ಕನ್ಯಾ: ಪತ್ನಿಗೆ ಉದ್ಯೋಗ ದೊರೆತು ಸಂತಸ. ಪ್ರಯಾಣದಿಂದ ಆರೋಗ್ಯಕ್ಕೆ ತೊಂದರೆಯಾಗುವುದು. ಸಣ್ಣಪುಟ್ಟ ಶಾರೀರಿಕ ಗಾಯ. ಶುಭಸಂಖ್ಯೆ:7

ತುಲಾ: ಪತ್ನಿಯ ಆರೋಗ್ಯದಲ್ಲಿ ಚೇತರಿಕೆ. ಎಲ್ಲಾ ಕೆಲಸಕ್ಕೂ ಹಿತಶತ್ರುಗಳಿಂದ ತೊಂದರೆ. ಯುವಕರಿಗೆ ಸಾಹಸ ಕಾರ್ಯದತ್ತ ಆಸಕ್ತಿ. ಶುಭಸಂಖ್ಯೆ: 8

ವೃಶ್ಚಿಕ: ತಲೆನೋವಿನಿಂದ ಕಿರಿಕಿರಿಯಾದೀತು. ಪ್ರಯಾಣದಿಂದ ಆಯಾಸ. ದುಷ್ಟ ಸಹವಾಸದಿಂದ ದಾರಿ ತಪ್ಪುವ ಭೀತಿ ಕಾಡಲಿದೆ. ಶುಭಸಂಖ್ಯೆ: 2

ಧನಸ್ಸು: ಕೋರ್ಟ್ ಕೇಸುಗಳಲ್ಲಿ ಯಶ ಸಿಗಲಿದೆ. ಚಂಚಲ ಮನಸ್ಸಿನಿಂದ ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗುವುದು.ಶುಭಸಂಖ್ಯೆ: 2

ಮಕರ: ಪಿತ್ರಾರ್ಜಿತ ಆಸ್ತಿ ದೊರೆಯಲಿದೆ. ಭೂ ವ್ಯವಹಾರದಲ್ಲಿ ಲಾಭವಾಗಿ ಸಂತಸ. ಈ ರಾಶಿಯ ಪ್ರೇಮಿಗಳಿಗೆ ಇಂದು ಶುಭದಿನ. ಶುಭಸಂಖ್ಯೆ:9

ಕುಂಭ: ರಾಜಕಾರಣಿಗಳಿಗೆ ಮಾನಸಿಕ ಭಯ. ವಿವಾಹ ಸಂಬಂಧಿ ಕಾರ್ಯದಲ್ಲಿ ಯಶಸ್ಸು. ನಿಂತ ಕಾರ್ಯಗಳು ಮುಂದುವರಿಯುವವು. ಶುಭಸಂಖ್ಯೆ:2

ಮೀನ: ಆಭರಣ ಖರೀದಿಗೆ ವೆಚ್ಚ. ಸ್ನೇಹಿತರೊಂದಿಗೆ ಸಾಮರಸ್ಯ, ಬಂಧುಗಳ ಆಗಮನದಿಂದ ಸಂತಸ, ಮಕ್ಕಳೊಂದಿಗೆ ಸಂತಸದ ಕ್ಷಣ. ಶುಭಸಂಖ್ಯೆ:4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net