RCB vs CSK: ಸಾಲ್ಟ್ ಔಟ್ ಆಗಿದ್ದು ನಿಜವೇ? ಇಲ್ಲಿದೆ ವಿಡಿಯೋ ಅಸಲಿಯತ್ತು!

ವಿಜಯವಾಣಿ (99)
Published on

RCB vs CSK: ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗಿರುವ ಬದ್ಧ ವೈರಿ ತಂಡಗಳು ಗೆಲುವಿಗಾಗಿ ಚೆಪಾಕ್​ ಕ್ರೀಡಾಂಗಣದಲ್ಲಿ ಸೆಣಸಾಡುತ್ತಿದೆ. ಟಾಸ್ ಗೆದ್ದ ರುತುರಾಜ್ ಗಾಯಕ್ವಾಡ್ ಮೊದಲು​ ಬೌಲಿಂಗ್ ಆಯ್ಕೆ ಮಾಡಿಕೊಂಡು, ಆರ್​ಸಿಬಿಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿದರು. ಅಂತೆಯೇ ಮೈದಾನಕ್ಕಿಳಿದ ಆರಂಭಿಕ ಬ್ಯಾಟರ್​ಗಳಾದ ವಿರಾಟ್​ ಕೊಹ್ಲಿ ಮತ್ತು ಫಿಲಿಪ್​ ಸಾಲ್ಟ್​ ಉತ್ತಮ ಆರಂಭವನ್ನೇ ನೀಡಿದರು. ಮೊದಲೆರೆಡು ಓವರ್​ಗಳಲ್ಲೇ ಅಬ್ಬರದ ಬ್ಯಾಟಿಂಗ್ ನಡೆಸಿದ ಸಾಲ್ಟ್, ಮಹೇಂದ್ರ ಸಿಂಗ್ ಧೋನಿ ಅವರ ವೇಗದ ಸ್ಟಂಪಿಂಗ್​ಗೆ ವಿಕೆಟ್​ ಕಳೆದುಕೊಂಡರು.

ಅದೇ ವೇಗ, ಅದೇ ನಿಖರತೆಯಲ್ಲಿ ಎರಡನೇ ಬಾರಿಗೆ ಮಿಂಚಿನ ಸ್ಟಂಪಿಂಗ್ ಮಾಡಿದ ಧೋನಿ, ಸಾಲ್ಟ್​ ವಿಕೆಟ್​ ಕಬಳಿಸುವಲ್ಲಿ ಯಶಸ್ವಿಯಾದರು. ಕ್ಷಣಮಾತ್ರದಲ್ಲಿ ಸಾಲ್ಟ್ ವಿಕೆಟ್​ ಪತನಗೊಂಡಿದ್ದನ್ನು ಕಂಡ ಆರ್​ಸಿಬಿ ಅಭಿಮಾನಿಗಳು ಮೊದಲಿಗೆ ಇದು ಔಟ್​ ಅಲ್ಲ ಎಂದೇ ಭಾವಿಸಿದರು. ಆದರೆ, ಎಲ್​ಇಡಿ ಸ್ಕ್ರೀನ್​ನಲ್ಲಿ ತೋರಿಸಿದ ಮಂದಗತಿಯ ಸ್ಟಂಪಿಂಗ್​ ದೃಶ್ಯ ನೋಡಿದ ಬಳಿಕ ಒಪ್ಪಿಕೊಂಡರು.

ಅಸಲಿಗೆ ಮೇಲ್ನೋಟಕ್ಕೆ ಧೋನಿ ಸ್ಟಂಪಿಂಗ್ ಮಾಡುವ ಮುನ್ನ ಸಾಲ್ಟ್​ ಕಾಲು ಕ್ರೀಸ್​ನೊಳಗೆ ಇತ್ತು. ಆದ್ರೆ, ಧೋನಿ ಗ್ಲೌಸ್​ ವಿಕೆಟ್​ಗೆ ತಗಲುವ ವೇಳೆ ಕಾಲು ಗಾಳಿಯಲ್ಲಿತ್ತು. ಇದು ಆರ್​ಸಿಬಿಯ ಆರಂಭಿಕ ಸ್ಫೋಟಕ ಬ್ಯಾಟರ್​ ವಿಕೆಟ್​ ಉರುಳಲು ಬಲವಾದ ಕಾರಣವಾಯಿತು. ಒಟ್ಟಿನಲ್ಲಿ ತಮಗೆ ಇನ್ನೂ ವಯಸ್ಸಾಗಿಲ್ಲ. ಮುಂದಿನ 2-3 ವರ್ಷ ಐಪಿಎಲ್ ಆಡಬಹುದು ಎಂಬ ಸಂದೇಶವನ್ನು ಕ್ಯಾಪ್ಟನ್ ಕೂಲ್ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ರವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net