

ಮೇಷ: ವೃತ್ತಿಯಲ್ಲಿ ಆಲಸ್ಯದಿಂದ ನಷ್ಟವಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶ್ರಮವಹಿಸಿ. ಹಿರಿಯರ ಆರೋಗ್ಯಕ್ಕಾಗಿ ಹಣವ್ಯಯ. ಶುಭಸಂಖ್ಯೆ:5
ವೃಷಭ: ಕುಟುಂಬದ ಸಮಾರಂಭಗಳಲ್ಲಿ ಭಾಗಿಯಾಗುವಿರಿ. ಕಾನೂನು ವಿಚಾರಗಳಲ್ಲಿ ಜಯ. ವೃತ್ತಿಯ ನಿಮಿತ್ತ ಪ್ರಯಾಣ ಮಾಡುವಿರಿ. ಶುಭಸಂಖ್ಯೆ:9
ಮಿಥುನ: ಕರಕುಶಲ ವ್ಯಾಪಾರಿಗಳಿಗೆ ಲಾಭ, ಕೋರ್ಟ್ ದಾವೆಗಳು ನಿಮ್ಮ ಪರ ಆಗುವುದು ಕಷ್ಟ.. ಸಾಲ ಮರುಪಾವತಿಸಲು ಶ್ರಮವಹಿಸಿ. ಶುಭಸಂಖ್ಯೆ:1
ಕಟಕ: ಮೂಳೆಯ ತಜ್ಞರಿಗೆ ಹೆಚ್ಚುವ ಬೇಡಿಕೆ. ಕೃಷಿಯ ಕಡೆ ಆಸಕ್ತಿ ತಾಳುವಿರಿ. ನಿಸ್ವಾರ್ಥ ಸೇವೆಗಳಿಂದ ಯಶಸ್ಸು ಗೌರವ ಸಿಗಲಿದೆ. ಶುಭಸಂಖ್ಯೆ:7
ಸಿಂಹ: ಸರ್ಕಾರಿ ನೌಕರರಿಗೆ ಒತ್ತಡ. ಹೊಸ ಯೋಜನೆಗಳನ್ನು ಮರುಪರಿಶೀಲಿಸಿ, ವಿದ್ಯಾರ್ಥಿಗಳು ಶ್ರಮವಹಿಸಿದರೆ ಫಲ ಸಿಗಲಿದೆ. ಶುಭಸಂಖ್ಯೆ:9
ಕನ್ಯಾ: ಬೆಂಕಿಯಿಂದ ಎಚ್ಚರವಹಿಸಿ. ಎಲೆಕ್ಟ್ರಾನಿಕ್ಸ್ ಉಪಕರಣಗಳ ವ್ಯಾಪಾರದಲ್ಲಿ ಅಭಿವೃದ್ಧಿ, ಸಂಗಾತಿಯ ಆದಾಯದಲ್ಲಿ ಹೆಚ್ಚಳ. ಶುಭಸಂಖ್ಯೆ:1
ತುಲಾ: ಹೊಸ ವಸ್ತುಗಳ ಖರೀದಿ ಯೋಗ. ಗುರು ಹಿರಿಯರಿಂದ ಆಶೀರ್ವಾದ ಪಡೆಯುವಿರಿ. ಎಲೆಕ್ಟ್ರಾನಿಕ್ಸ್ ತಂತ್ರಜ್ಞರಿಗೆ ಬೇಡಿಕೆ. ಶುಭಸಂಖ್ಯೆ: 2
ವೃಶ್ಚಿಕ: ಮಾತುಗಳಲ್ಲಿ ಕಠಿಣತೆ ಬೇಡ, ನಯವಾಗಿ ವ್ಯವಹರಿಸಿ. ಆರೋಗ್ಯ ಸಲಹೆಗಾರರಿಗೆ ಬೇಡಿಕೆ. ರಿಯಲ್ ಎಸ್ಟೇಟ್ನಲ್ಲಿ ಆದಾಯ. ಶುಭಸಂಖ್ಯೆ:1
ಧನಸ್ಸು: ಕಾರ್ಖಾನೆ ಮಾಲೀಕರು ಕಾರ್ವಿುಕರ ಮನಸ್ತಾಪ ಅಂತ್ಯ. ಷೇರು ಮಾರುಕಟ್ಟೆಯಲ್ಲಿ, ಆಹಾರ ಉತ್ಪನ್ನಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:9
ಮಕರ: ಆಸ್ತಿ ಸಮಸ್ಯೆ ಬಗೆಹರಿಯುವುದು. ವಾಹನ ಅಪಘಾತ ಸಂಭವ. ವೈವಾಹಿಕ ಸಮಸ್ಯೆಯಿಂದ ಕೋರ್ಟ್ ಮೆಟ್ಟಿಲೇರುವ ಸಂದರ್ಭ. ಶುಭಸಂಖ್ಯೆ: 5
ಕುಂಭ: ಸಂಗಾತಿಯಿಂದ ಧನ ಆಗಮನ. ಪಾಲುದಾರಿಕೆಯಲ್ಲಿ ಅನಿರೀಕ್ಷಿತ ಲಾಭ. ವಾಣಿಜ್ಯ ಕ್ಷೇತ್ರದ ಉದ್ಯೋಗದಲ್ಲಿ ಬಡ್ತಿ. ಸನ್ಮಾನ. ಶುಭಸಂಖ್ಯೆ:4
ಮೀನ: ಸರ್ಕಾರಿ ವ್ಯವಹಾರಗಳ ಮಧ್ಯವರ್ತಿಗಳಿಗೆ ಶುಭವಾಗುವುದು. ಗೃಹಾಲಂಕಾರ ವಸ್ತುಗಳ ಖರೀದಿ ಮಾಡುವಿರಿ. ಸಂತಸದ ಸುದ್ದಿ. ಶುಭಸಂಖ್ಯೆ: 7