ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆಕಸ್ಮಿಕ ಧನ ಲಾಭ

astrology
Published on

ಮೇಷ: ಪಿತ್ರಾರ್ಜಿತ ಆಸ್ತಿ ಲಭ್ಯ. ಸ್ತ್ರೀಯರಿಂದ ಲಾಭ. ಸ್ವಗೃಹ ನವೀಕರಣ. ವ್ಯಾಪಾರದಲ್ಲಿ ಅಲ್ಪ ಲಾಭವಾಗಲಿದೆ. ಚಂಚಲ ಮನಸ್ಸು. ಶುಭಸಂಖ್ಯೆ: 9

ವೃಷಭ: ಕೋರ್ಟ್ ಕಾರ್ಯಗಳಲ್ಲಿ ವಿಳಂಬವಾಗುವುದು. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಅಕಾಲ ಭೋಜನ. ಆಕಸ್ಮಿಕ ಧನ ಲಾಭ. ಶುಭಸಂಖ್ಯೆ:9

ಮಿಥುನ: ಸಾಲ ತೀರಿಸಲು ಗೆಳೆಯರ ಸಹಕಾರ. ಕೃಷಿಕರಿಗೆ ಲಾಭ. ಹೊಸ ಯೋಜನೆಗಳ ಆರಂಭ. ಕೆಲಸ ಕಾರ್ಯಗಳಲ್ಲಿ ತುಸು ವಿಳಂಬ. ಶುಭಸಂಖ್ಯೆ: 8

ಕಟಕ: ವಾದ ವಿವಾದಗಳಿಂದ ದೂರವಿರುವುದು ಕ್ಷೇಮ. ಕುಟುಂಬ ಸೌಖ್ಯ. ದಂಡ ಕಟ್ಟುವಿರಿ. ದೈವಾನುಗ್ರಹದ ಮೊರೆ ಹೋಗುವಿರಿ. ಶುಭಸಂಖ್ಯೆ:4

ಸಿಂಹ:  ಉದ್ಯೋಗದಲ್ಲಿ ಉನ್ನತ ಸ್ಥಾನ ಸಿಗಲಿದೆ. ಮಕ್ಕಳಿಂದ ಸಂತಸ. ಅಧಿಕ ಖರ್ಚು ಆದೀತು. ಋಣ ವಿಮೋಚನೆ. ಸಾಲ ಮರುಪಾವತಿ. ಶುಭಸಂಖ್ಯೆ: 2

ಕನ್ಯಾ: ಮೋಸದ ತಂತ್ರಕ್ಕೆ ಬೀಳುವಿರಿ. ಮನೋವ್ಯಥೆ ಕಾಡಬಹುದು. ಮಾತಿನಿಂದ ಅನರ್ಥವಾದೀತು. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಶುಭಸಂಖ್ಯೆ:6

ತುಲಾ: ಪರರಿಗೆ ಸಹಾಯ ಮಾಡುವಿರಿ. ಕಾರ್ಯದಲ್ಲಿ ಬದಲಾವಣೆ. ವಿದೇಶ ಪ್ರವಾಸ ಮುಂದೂಡುವಿರಿ. ಹಿತ ಶತ್ರು ಬಾಧೆ. ಮನಕ್ಲೇಶ. ಶುಭಸಂಖ್ಯೆ:4

ವೃಶ್ಚಿಕ: ಪರಸ್ಥಳ ವಾಸ. ಹಳೆಯ ಮಿತ್ರರ ಭೇಟಿ. ದಾಂಪತ್ಯದಲ್ಲಿ ವಿರಸ. ಭತ್ತ, ಗೋಧಿ ಬೇಸಾಯಗಾರರಿಗೆ ಲಾಭ. ದುಂದು ವೆಚ್ಚ ಬೇಡ. ಶುಭಸಂಖ್ಯೆ:2

ಧನಸ್ಸು: ಆಪ್ತರ ಸಲಹೆ ಆರ್ಥಿಕ ಸಮಸ್ಯೆಯನ್ನು ಪರಿಹರಿಸಲಿದೆ. ಪರಸ್ತ್ರೀಯಿಂದ ತೊಂದರೆ. ಪ್ರತಿಯೊಂದು ವಿಷಯದಲ್ಲಿ ಎಚ್ಚರ ವಹಿಸಿ. ಶುಭಸಂಖ್ಯೆ:7

ಮಕರ: ದೈನಂದಿನ ಕೆಲಸಗಳಲ್ಲಿ ಬದಲಾವಣೆಯಾಗುವುದು. ಆಕಸ್ಮಿಕ ಖರ್ಚು ತಲೆದೋರುವುದು. ಆಸ್ತಿಯ ವಿಷಯದಲ್ಲಿ ಮನಸ್ತಾಪ. ಶುಭಸಂಖ್ಯೆ:3

ಕುಂಭ: ನಾನಾ ರೀತಿಯ ಸಮಸ್ಯೆ ಕಾಡಲಿದೆ. ಸೇವಕರಿಂದ ಸಹಾಯ. ಶರೀರದಲ್ಲಿ ಆಯಾಸ. ದೃಷ್ಟಿ ದೋಷದಿಂದ ತೊಂದರೆಯಾದೀತು. ಶುಭಸಂಖ್ಯೆ:4

ಮೀನ: ನವೀನ ವಾಹನ ಯೋಗವಿದೆ. ಆರೋಗ್ಯದಲ್ಲಿ ಚೇತರಿಕೆ. ಪುಣ್ಯಕ್ಷೇತ್ರ ದರ್ಶನ. ವಿದೇಶ ಪ್ರಯಾಣ. ಮಹಿಳೆಯರಿಗೆ ತಾಳ್ಮೆ ಅಗತ್ಯ.ಶುಭಸಂಖ್ಯೆ:9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net