ನಿತ್ಯಭವಿಷ್ಯ: ಈ ರಾಶಿಯ ಲೇವಾದೇವಿ ವ್ಯವಹಾರಸ್ಥರಿಗೆ ಲಾಭ

Nitya Bhavisya Vijayavani
Published on

ಮೇಷ: ಮನೆ ಮಂದಿಗೆ ಅನಾರೋಗ್ಯ. ಪೀಠೋಪಕರಣಗಳ ಖರೀದಿಗೆ ವಿಪರೀತ ಖರ್ಚು. ಅಪಘಾತ ಉಂಟಾಗುವ ಸಂಭವ. ಶುಭಸಂಖ್ಯೆ: 6

ವೃಷಭ: ಮಾನಸಿಕ ಭಯ ಕಾಡಲಿದೆ. ಗೃಹ ನಿರ್ವಣದ ಕೆಲಸಗಳು ಯಶಸ್ವಿಯಾಗುತ್ತವೆ. ವಿವಾಹದ ಬಗೆಗಿನ ತೀರ್ವನಗಳಲ್ಲಿ ಎಚ್ಚರ ತೀರ ಅಗತ್ಯ. ಶುಭಸಂಖ್ಯೆ: 1

ಮಿಥುನ: ಭೋಗ ವಸ್ತುಗಳ ಖರೀದಿಗೆ ಅಧಿಕ ಖರ್ಚು. ಟ್ರಾವೆಲ್ಸ್ ಮಾಲೀಕರಿಗೆ ನಷ್ಟ. ರೆಸ್ಟೋರೆಂಟ್ ಸ್ಥಾಪನೆಗೆ ನಿರ್ಧಾರ ಮಾಡುವಿರಿ.ಶುಭಸಂಖ್ಯೆ: 9

ಕಟಕ: ಪುಸ್ತಕ ಪ್ರಕಾಶಕರು ಒಪ್ಪಂದದಲ್ಲಿ ಎಚ್ಚರ ವಹಿಸಿ. ಹೂಡಿಕೆಯಲ್ಲಿ ಹೊಸ ಪಾಲುದಾರರ ಆಗಮನ. ಪುಸ್ತಕ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ:3

ಸಿಂಹ: ಮೀನುಗಾರರಿಗೆ ಅಧಿಕ ಪ್ರಮಾಣದಲ್ಲಿ ಲಾಭ. ಕೃಷಿಕರು ಬದಲಾವಣೆಗೆ ಒಗ್ಗಿಕೊಳ್ಳಿ. ಸಹೋದರರಿಂದ ಆಸ್ತಿ ವಿಚಾರದಲ್ಲಿ ಕಿರಿಕಿರಿ. ಶುಭಸಂಖ್ಯೆ: 2

ಕನ್ಯಾ:  ನಿರಂತರ ಅನಾರೋಗ್ಯಸಮಸ್ಯೆ ನಿವಾರಣೆ ಯಾಗಲಿದೆ. ಮಂಗಳ ಕಾರ್ಯದಲ್ಲಿ ಭಾಗಿ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಶುಭಸಂಖ್ಯೆ:7

ತುಲಾ: ಆಸ್ತಿ ವಿಚಾರದ ಮಾತುಕತೆ ನಡೆಯಲಿದೆ. ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ ದಿನ. ನೀರಿನಿಂದ ಅಪಾಯವಿದೆ ಎಚ್ಚರ. ಶುಭಸಂಖ್ಯೆ: 5

ವೃಶ್ಚಿಕ: ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಯಲ್ಲಿ ಪ್ರಗತಿ. ಹೊಸ ವ್ಯವಹಾರದಿಂದ ನಷ್ಟ. ಹಿತ ಶತ್ರುಗಳ ಬಗ್ಗೆ ಎಚ್ಚರವಿರಲಿ. ಶುಭಸಂಖ್ಯೆ:9

ಧನಸ್ಸು: ವ್ಯರ್ಥ ಕಾಲಹರಣ ಮಾಡಬೇಡಿ. ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ತೀರ್ಪು. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಗಮನವಿರಲಿ. ಶುಭಸಂಖ್ಯೆ:2

ಮಕರ: ಲೇವಾದೇವಿ ವ್ಯವಹಾರಸ್ಥರಿಗೆ ಲಾಭ. ಮಕ್ಕಳಿಂದ ಸುವಾರ್ತೆಯನ್ನು ಕೇಳುವಿರಿ. ಚಿಕ್ಕ ಪುಟ್ಟ ವ್ಯಾಪಾರಸ್ಥರಿಗೆ ಲಾಭದಾಯಕ ದಿನ. ಶುಭಸಂಖ್ಯೆ: 4

ಕುಂಭ: ಅಧಿಕಾರ ಪ್ರಾಪ್ತಿಯಲ್ಲಿ ಅಡೆತಡೆ. ಪರರಿಗೆ ಉಪಕಾರ ಮಾಡುವಿರಿ. ದುಷ್ಟ ಜನರಿಂದಾಗಿ ಅವಕಾಶಗಳು ಕೈತಪು್ಪವ ಸಾಧ್ಯತೆ. ಶುಭಸಂಖ್ಯೆ:1

ಮೀನ: ಸ್ನೇಹಿತರಿಂದ ವ್ಯಾಪಾರ ಅಭಿವೃದ್ಧಿಗೆ ಸಹಕಾರ. ಜೀವಕ್ಕೆ ಆಪತ್ತು. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಯಾಗಲಿದೆ. ಶುಭಸಂಖ್ಯೆ:3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net