

ಮೇಷ: ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಪತಿ ಪತ್ನಿಯರಲ್ಲಿ ಸಂತೋಷ. ಕೃಷಿಭೂಮಿ ಖರೀದಿಗೆ ನಿರ್ಧಾರ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 5
ವೃಷಭ: ಹೊಸ ಉದ್ಯೋಗದಲ್ಲಿ ಕಿರಿಕಿರಿ ಆಗಬಹುದು. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲವಾಗಲಿದೆ. ಸಾಲದಿಂದ ಮುಕ್ತಿ. ಶುಭಸಂಖ್ಯೆ:2
ಮಿಥುನ: ಯತ್ನ ಕಾರ್ಯಗಳಲ್ಲಿ ಜಯ ಸಿಗುವುದು. ಸ್ತ್ರೀಯರಿಗೆ ಆಭರಣ ಪ್ರಾಪ್ತಿ. ಭೂಲಾಭ. ಬಂಧುಗಳ ಭೇಟಿ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ:9
ಕಟಕ: ವ್ಯಾಪಾರ ವ್ಯವಹಾರದ ಸ್ಥಳ ಬದಲಾವಣೆ. ತಾಂತ್ರಿಕ ವಿದ್ಯೆಗಳಲ್ಲಿ ಆಸಕ್ತಿ. ಸ್ನೇಹಿತರಿಗಾಗಿ ಖರ್ಚು. ರಿಯಲ್ ಎಸ್ಟೇಟ್ನಲ್ಲಿ ಲಾಭ. ಶುಭಸಂಖ್ಯೆ:7
ಸಿಂಹ: ವ್ಯಾಪಾರ-ವ್ಯವಹಾರಗಳಲ್ಲಿ ಲಾಭ. ಬಹಳ ವರ್ಷಗಳ ನಂತರ ವಿವಾಹ ಯೋಗ ಬಂದಿದೆ. ದೇವತಾ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ:3
ಕನ್ಯಾ: ವಾದ-ವಿವಾದಗಳಲ್ಲಿ ಜಯ. ಪ್ರಭಾವಿಗಳ ಭೇಟಿ. ಕೌಟುಂಬಿಕ ಮನಃಶಾಂತಿ. ಮಾಧ್ಯಮ ಕ್ಷೇತ್ರದವರಿಗೆ ಸಮಾಜದಲ್ಲಿ ಗೌರವ. ಶುಭಸಂಖ್ಯೆ:7
ತುಲಾ: ರಾಜಕೀಯ ಸಂಘಟಕರಿಗೆ ತೊಂದರೆ. ಮಿತ್ರರಿಂದ ಕಿರಿಕಿರಿ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಸಗಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:2
ವೃಶ್ಚಿಕ: ಕಚೇರಿಯಲ್ಲಿ ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ. ಹಿತಶತ್ರುಗಳಿಂದ ತೊಂದರೆ. ಪಾರಂಪರಿಕ ಔಷಧ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:3
ಧನಸ್ಸು: ರೇಷ್ಮೆ ಮತ್ತು ಕುರಿಸಾಕಾಣಿಕೆಯಲ್ಲಿ ಧನನಷ್ಟ. ಎಷ್ಟೇ ಕಷ್ಟ ಬಂದರೂ ಮುನ್ನುಗ್ಗುವ ಚೈತನ್ಯ. ದಾಂಪತ್ಯದಲ್ಲಿ ಅನೊ್ಯೕನ್ಯತೆ. ಶುಭಸಂಖ್ಯೆ:9
ಮಕರ: ಹೇಳಿಕೆ ಮಾತು ಕೇಳುವ ಸಂಭವ. ಚಂಚಲ ಮನಸ್ಸಿನಿಂದ ಖಿನ್ನತೆ. ಸೌಂದರ್ಯವರ್ಧಕ ಮಳಿಗೆಯವರಿಗೆ ಪಕ್ಕದವರ ಕಿರಿಕಿರಿ. ಶುಭಸಂಖ್ಯೆ: 4
ಕುಂಭ: ಗುರುಗಳ ಭೇಟಿ ಮಾಡುವ ಸಾಧ್ಯತೆ ಇದೆ. ನಂಬಿಕೆ ದ್ರೋಹ ಆಗಬಹುದು, ಎಚ್ಚರ. ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ. ಶುಭಸಂಖ್ಯೆ: 9
ಮೀನ: ಸಾರ್ವಜನಿಕವಾಗಿ ತಾಳ್ಮೆಯಿಂದ ವರ್ತಿಸಿ. ಅಮೂಲ್ಯ ವಸ್ತು ಖರೀದಿ. ದಾಖಲೆ ನೋಂದಣಿಗೆ ಹೆಚ್ಚು ಖರ್ಚು. ಆದಾಯ ಕಡಿಮೆ. ಶುಭಸಂಖ್ಯೆ:1