ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸ್ವಂತ ಉದ್ದಿಮೆಯಲ್ಲಿ ಅಭಿವೃದ್ಧಿ

Nitya Bhavisya Vijayavani
Published on

ಮೇಷ: ಪಾಲುದಾರಿಕೆಯ ವ್ಯಾಪಾರದಲ್ಲಿ ಸಮಸ್ಯೆ. ನೃತ್ಯ ಪಟುಗಳಿಗೆ ಶುಭ. ಕ್ರೀಡಾಪಟುಗಳಿಗೆ ತಮ್ಮ ಕ್ಷೇತ್ರದಲ್ಲಿ ಯಶಸ್ಸು. ಶುಭಸಂಖ್ಯೆ: 5

ವೃಷಭ: ಹಣ್ಣು ಮಾರಾಟಗಾರರಿಗೆ ಲಾಭದಾಯಕ ದಿನ. ಸ್ವಂತ ಉದ್ದಿಮೆಯಲ್ಲಿ ಅಭಿವೃದ್ಧಿಯಾಗಲಿದೆ. ಹಿತಶತ್ರುಗಳ ಕಾಟ ಹೆಚ್ಚಲಿದೆ. ಶುಭಸಂಖ್ಯೆ: 7

ಮಿಥುನ: ಕೃಷಿಕರಿಗೆ ಶುಭದಾಯಕ ದಿನ. ವಾದ ವಿವಾದವಿಲ್ಲದೆ ಪಿತ್ರಾರ್ಜಿತ ಆಸ್ತಿ ಲಭ್ಯ. ವ್ಯಾಪಾರಕ್ಕೆ ಸಹಕಾರ ದೊರೆಯುತ್ತದೆ. ಶುಭಸಂಖ್ಯೆ: 2

ಕಟಕ: ಮಕ್ಕಳ ಆರೋಗ್ಯದ ಕಡೆ ಗಮನವಿರಲಿ. ಆಹಾರ ವಸ್ತುಗಳ ಮಾರಾಟಸ್ಥರಿಗೆ ಲಾಭ. ಅತಿಯಾದ ಆತ್ಮವಿಶ್ವಾಸ ಬೇಡ. ಶುಭಸಂಖ್ಯೆ: 8

ಸಿಂಹ: ಹಗುರವಾದ ಮಾತುಗಳನ್ನು ಆಡಲು ಹೋಗಬೇಡಿ. ಮರದ ವ್ಯಾಪಾರದಲ್ಲಿ ಲಾಭ ಬರಲಿದೆ. ಉದ್ಯೋಗ ಬದಲಿಸುವ ಸಾಧ್ಯತೆ. ಶುಭಸಂಖ್ಯೆ: 4

ಕನ್ಯಾ: ಸಂಶೋಧನಾ ಪ್ರಯೋಗದಲ್ಲಿ ಉತ್ತಮ ಫಲಿತಾಂಶ ದೊರೆಯುವುದು. ವಿವಾಹ ಯೋಗ. ಹೈನುಗಾರಿಕೆಯಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 7

ತುಲಾ: ವಿದ್ಯಾರ್ಥಿಗಳಿಗೆ ಹಿನ್ನಡೆ. ಭೂ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು. ಪಾಲುದಾರಿಕೆ ವ್ಯಾಪಾರದಲ್ಲಿ ಆದಾಯ ಕಡಿಮೆ. ಶುಭಸಂಖ್ಯೆ: 3

ವೃಶ್ಚಿಕ: ಸಂಗಾತಿಯ ಆದಾಯದಲ್ಲಿ ಏರಿಕೆಯಾಗುವುದು. ಅನಿರೀಕ್ಷಿತ ಕಾರ್ಯದಿಂದ ಲಾಭ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 6

ಧನಸ್ಸು: ಪಿತ್ರಾರ್ಜಿತ ಆಸ್ತಿ ಲಭ್ಯವಾಗುವುದು. ಸಹೋದ್ಯೋಗಿಗಳಿಂದ ಸಹಕಾರ ದೊರೆಯಲಿದೆ. ನಿರ್ಧಾರಗಳನ್ನು ಬದಲಾಯಿಸಬೇಡಿ. ಶುಭಸಂಖ್ಯೆ: 1

ಮಕರ: ಪಾಲುದಾರಿಕೆಯಲ್ಲಿ ಜಾಗರೂಕತೆಯಿಂದ ಇರಿ. ಆರಕ್ಷಕ ವರ್ಗದವರು ಎಚ್ಚರ. ಸಣ್ಣ ಕೈಗಾರಿಕೆಗಳನ್ನು ಆರಂಭಿಸಲು ಸುಸಮಯ. ಶುಭಸಂಖ್ಯೆ: 4

ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ ಹೆಚ್ಚಲಿದೆ. ಧಾರ್ವಿುಕ ಕ್ಷೇತ್ರಗಳ ಭೇಟಿ. ಸ್ವಯಂ ಉದ್ಯೋಗಸ್ಥರಿಗೆ ಶುಭದಿನ. ಶುಭಸಂಖ್ಯೆ: 8

ಮೀನ: ನಿದ್ರಾಹೀನತೆ ಸ್ವಲ್ಪ ಹೆಚ್ಚಾಗಿಯೇ ಕಾಡಬಹುದು, ಕುಶಲಕೆಲಸಗಳ ಕಾರ್ವಿುಕರಿಗೆ ವಿಶೇಷ ಬೇಡಿಕೆ. ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net